ಗಣೇಶ್ಗೆ ಸಿಗೋ ಹುಡುಗಿಯರೆಲ್ಲ ಎಂಗೇಜ್ ಆಗಿರ್ತಾರಂತೆ – ಫೀಲ್ ಆದ ಮಳೆ ಹುಡುಗ

0
74

ಗಣೇಶ್​​ ಅವ್ರೇ ಈ ಥರಾ ಸ್ಟೋರಿಗಳನ್ನ  ಹುಡುಕಿಕೊಂಡು ಹೋಗ್ತಾರೋ, ಅಥವ ಅವ್ರನ್ನೇ ಇಂಥಾ ಕಥೆಗಳು ಹುಡುಕಿಕೊಂಡು ಬರ್ತಾವೋ ಗೊತ್ತಿಲ್ಲ, ಆದ್ರೆ ಗಣೇಶ್​ ಅಭಿನಯದ ಸಾಕಷ್ಟು ಸಿನಿಮಾಗಳಲ್ಲಿ ಗಣೇಶ್​ಗೆ ಸಿಗೋ ಹುಡುಗೀರೆಲ್ಲಾ ಎಂಗೇಜ್​ಮೆಂಟ್​ ಆಗಿರೋ ಹುಡುಗೀಯರೇ. ಗಣೇಶ್​ ಅಭಿನಯದ 2ನೇ ಸಿನಿಮಾ ಮುಂಗಾರು ಮಳೆಯಿಂದಲೇ ಈ ಕಥೆ ಶುರುವಾಗುತ್ತೆ. ಈಗ ರಿಲೀಸ್​ ಆಗ್ತಾ ಇರೋ ಆರೇಂಜ್​ ಸಿನಿಮದಲ್ಲೂ ಗಣೇಶ್​ಗೆ ಸಿಗೋದು ಎಂಗೇಜ್​ಮಂಟ್​ ಆಗಿರೋ ಹುಡುಗೀರು, ಇದನ್ನೇ ಸಿನಿಮಾದ ಡೈಲಾಗ್​ ಮಾಡಿದ್ದಾರೆ, ನಿರ್ದೇಶಕ ಪ್ರಶಾಂತ್​ ರಾಜ್​. ರಿಲೀಸ್​ ಆಗಿರೋ ಟ್ರೇಲರ್​ನಲ್ಲೇ ಈ ಡೈಲಾಗ್​​ನ ಹಾಕಿದ್ದಾರೆ ನಿರ್ದೇಶಕರು.
ಇದು ಕಾಕತಾಳಿಯವೋ..!! ಗಣೇಶ್ ಲಕ್ಕೋ..!!
ಮುಂಗಾರು ಮಳೆಯಲ್ಲಿ ಗಣೇಶ್​ ಲವ್​ ಮಾಡೋ ನಂದಿನಿಗೆ ಮೊದಲೇ ಎಂಗೇಜ್​ಮೆಂಟ್​ ಆಗಿರುತ್ತೆ. ಇದಾದ ಮೇಲೆ ಬಂದ ಹುಡುಗಾಟ ಸಿನಿಮಾದಲ್ಲೂ ಗಣಿ ಲವ್​ ಮಾಡೋ ಹುಡುಗಿ ಇನ್ನೊಬ್ಬ ಹುಡುಗನನ್ನ ಲವ್​ ಮಾಡ್ತಾ ಇರ್ತಾಳೆ.ಇನ್ನೂ ಗಣೇಶ್​ ಅಭಿನಯದ ಗಾಳಿಪಟ ಸಿನಿಮಾದಲ್ಲಿ ಗಣೇಶ್​ಗೆ ವಿಧವೆ ಮೇಲೆ ಪ್ರೀತಿ ಹುಟ್ಟುತ್ತೆ. ಅರಮನೆ ಸಿನಿಮಾದ ಹೀರೋಯಿನ್​ ಗಣಿಗೆ ಸಿಗೋ ಮೊದಲೇ ಮತ್ತೊಬ್ಬನ ಮನದರಸಿಯಾಗಿರ್ತಾಳೆ. ಇದೇ ಥರಾ ಸಂಗಮ, ಸರ್ಕಸ್​​, ಉಲ್ಲಾಸ ಉತ್ಸಾಹ, ಮಳೆಯಲ್ಲಿ ಜೊತೆಯಲ್ಲಿ, ಏನೋ ಒಂಥರಾ, ಮದುವೆ, ಶ್ರಾವಣಿ ಸುಬ್ರಮಣ್ಯ, ದಿಲ್​ ರಂಗೀಲಾ, ಖುಷಿ ಖುಷಿಯಾಗಿ, ಮುಂಗಾರು ಮಳೆ-2, ಮುಗುಳುನಗೆ ಎಲ್ಲಾ ಸಿನಿಮಾದಲ್ಲೂ ಗಣೇಶ್​ಗೆ ಸಿಗೋದೆಲ್ಲಾ ಎಂಗೇಜ್​ ಆಗಿರೋ, ಲವ್​ನಲ್ಲಿರೋ, ಲವ್​ನಲ್ಲಿ ಫೇಲ್ಯೂರ್​ ಆಗೀರೋ ಹುಡುಗೀರೇ. ಈಗ ಆರೇಂಜ್​ನಲ್ಲೂ ಇದೇ ಕಥೆ.

LEAVE A REPLY

Please enter your comment!
Please enter your name here