ಕ್ರೇಜಿ಼ಸ್ಟಾರ್ಗೆ ಯಾಕೆ‌ ಸಿಗಲಿಲ್ಲ ಡಾಕ್ಟರೇಟ್ ??? ರಣಧೀರನಿಗಾಗಿ ನಿಂತ ಅಭಿಮಾನಿಗಳು

0
251

ರವಿಚಂದ್ರನ್. ಕನ್ನಡ ಚಿತ್ರರಂಗದ ಕನಸುಗಾರ.ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ಎಲ್ಲಡೆ ಹಾರಿಸಿದವ್ರಲ್ಲಿ, ಕ್ರೇಝಿಸ್ಟಾರ್ ಪ್ರಮುಖರು. ತಮ್ಮದೇ ಶೈಲಿಯ ಸಿನಿಮಾಗಳಿಂದ.. ಎಲ್ಲರನ್ನೂ.. ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರೇಮಲೋಕ ಕಟ್ಟಿದ್ದ ಈ ದೇವರಿಗೆ, ಅದ್ಯಾವತ್ತೋ ಸಿಗಬೇಕಿದ್ದ ಗೌರವ.. ಇವತ್ತಿನವರೆಗೂ ಸಿಕ್ಕಿಲ್ಲ.

ಎಸ್. ಕನ್ನಡ ಚಿತ್ರರಂಗದ ರಣಧೀರನಿಗೆ.. ಇಲ್ಲಿವರೆಗೂ ಡಾಕ್ಟರೇಟ್ ಸಿಕ್ಕಿಲ್ಲ. ಇದು, ಅಭಿಮಾನಿಗಳ ಅತೀವ ಬೇಸರಕ್ಕೆ ಸದ್ಯ ಕಾರಣವಾಗಿದೆ. ಅಷ್ಟಕ್ಕೂ.. ರವಿಗ್ಯಾಕೆ ಡಾಕ್ಟರೇಟ್ ಸಿಕ್ಕಿಲ್ಲಾ, ಹೀಗೊಂದು ಚರ್ಚೆ.. ಸಾಮಾಜಿಕ ಜಾಲತಾಣದಲ್ಲಿ ನಡೆಯಲು ಕಾರಣ ನಿರ್ದೇಶಕ ರಘುರಾಮ್.

ಹೌದು, ರಘುರಾಮ್.. ಇತ್ತೀಚಿಗೆ, ತಮ್ಮ ಸಾಮಾಜಿಕ ಜಾಲತಾಣದಲ್ಲಿ, ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಇನ್ನು ಯಾಕೆ ಬಂದಿಲ್ಲ್ಲ ಎಂಬ ಅರ್ಥವತ್ತಾದ ಪೋಸ್ಟ್ ಹಾಕಿದ್ದರು. ರಘುರಾಮ್ ಮಾತುಗಳಲ್ಲಿ ಅರ್ಥ ಇದೆ. ಸಿನಿಮಾವನ್ನೇ ಆರಾಧಿಸಿದ ಆರಾಧಕ ರವಿಚಂದ್ರನ್, ಖಂಡಿತವಾಗಿಯೂ ಎಲ್ಲ ಆಯಾಮಗಳಲ್ಲೂ ಡಾಕ್ಟರೇಟ್‌ಗೆ ಅರ್ಹವಾದ ವ್ಯಕ್ತಿ. ಅಂದ ಹಾಗೇ ರಘುರಾಮ್ ಹಾಕಿದ್ದ ಅನಿಸಿಕೆಯನ್ನ ನೋಡಿದ ಓದಿದ ಅನೇಕರು, ರಘುರಾಮ್ ಅವ್ರ ಕೂಗಿಗೆ ಬಲ ತುಂಬುತ್ತಿದ್ದಾರೆ. ರಘುರಾಮ್ ಮಾತಲ್ಲಿ ಅರ್ಥ ಇದೆ,


LEAVE A REPLY

Please enter your comment!
Please enter your name here