ಕ್ರೂರಿ ಡಾಲಿಯ ಹಿಂದೆ‌ ಹುಡುಗಿಯರ ಹಿಂಡು – ಒಂದು ಸಿನಿಮಾ‌ ಒಂದು ಪಾತ್ರ ಬದಲಾಯಿಸಿತು ಧನಂಜಯ್ ಫ್ಯೂಚರ್

0
631

I Love You Dolly…! ಹೀಗಂತ ಅದೆಷ್ಟೋ ಹುಡುಗಿಯರು ಧನಂಜಯ್‌ಗೆ ಹೇಳ್ತಿದ್ದಾರೆ. ಹಿಂದೆ ಬಿದ್ದಿದ್ದಾರೆ. ಇದಕ್ಕೆಲ್ಲಾ ಕಾರಣ..ಧನು ಟಗರುದಲ್ಲಿ ಅಬ್ಬರಿಸಿ ಬೊಬ್ಬಿರಿದ ರೀತಿ. ಹೌದು, ಟಗರು ಸಿನಿಮಾನ ನೀವ್ ನೋಡಿದ್ದರೆ.. ಡಾಲಿಯ ಹ್ಯಾಂಗೋವರ್‌ನಿಂದ ಅಷ್ಟು ಈಸಿಯಾಗಿ ಹೊರ ಬರಲು ಸಾಧ್ಯವೇ ಇಲ್ಲ. ವ್ಹಾ, ಎಂಥಾ ಅದ್ಭುತ ನಟನೆ ಅಂತ ಉದ್ಘಾರ ತಗಿಯದೇ ಇರ‍್ದೇ ಇರಲು ಆಗಲ್ಲ.

ನಿಮಗೆ ಗೊತ್ತಿದ್ದಂತೆ ಧನಂಜಯ್ ಇಲ್ಲಿವರೆಗೂ ಅದೆಷ್ಟೋ ಪಾತ್ರಗಳನ್ನ ಮಾಡಿದ್ದಾರೆ. ಆದ್ರೆ ಈ ಮಟ್ಟಿಗಿನ ಐಡೆಂಟಿಟಿ,ಪಾಫ್ಯುಲಾರಿಟಿ ಧನಂಜಯ್‌ಗೆ ಸಿಕ್ಕಿರಲಿಲ್ಲ. ಆದ್ರೀಗ ಕನ್ನಡ ಚಿತ್ರರಂಗದ ಈ ಸ್ಪೆಷಲ್ ಸ್ಟಾರ್ ನಸೀಬು ಖುಲಾಯ್ಸಿದೆ. ಫ್ಯಾನ್ ಫಾಲೋವರ‍್ಸ್ ಸಂಖ್ಯೆ ರಾಕೆಟ್ ಸ್ಪೀಡಿನಂತೆ ಬೆಳೆಯುತ್ತಿದೆ. ಅದ್ರಲ್ಲೂ ಹೆಚ್ಚಿನ ಪಾಲು ಹುಡುಗಿಯರದ್ದೇ. ಅಸಲಿಗೆ ಡಾಲಿ ಇಲ್ಲಿ ಒಬ್ಬ ರಾಕ್ಷಸ, ಕ್ರೂರಿ. ಸಿಗರೇಟ್ ಸೇದುತ್ತಾ, ಎಣ್ಣೆ ಏಟಲ್ಲಿ ತಿರುಗುವ ವಿಕೃತ ಮನಸ್ಥಿತಿಯ ಪಾತ್ರವದು. ಹೀಗಿದ್ದೂ.. ಹುಡುಗಿಯರು ಡಾಲಿಯನ್ನ ತುಂಬು ಮನಸಿನಿಂದ ಇಷ್ಟಪಡ್ತಿದ್ದಾರೆ. ಕಾರಣ ಧನಂಜಯ್‌ಗೂ ಗೊತ್ತಿಲ್ಲ.

ಅಂದ ಹಾಗೇ ಸದ್ಯ ಸಕ್ಸಸ್‌ನ್ನ ಎಂಜಾಯ್ ಮಾಡ್ತಿರುವ ಧನಂಜಯ್ ಹಾಸನ ಜಿಲ್ಲೆಯ ಅರಸಿಕೇರೆಯವರು. ತಂದೆ ಫ್ರೈಮರಿ ಮೇಷ್ಟ್ರು. ಮೈಮ್ ರಮೇಶ್ ಇವ್ರ ರಂಗಭೂಮಿಯ ಗುರುಗಳು. ಇನ್ನು ಗುರುಪ್ರಸಾದ್ ಇವ್ರ ಸಿನಿಮಾ ಗುರುಗಳು. ಇನ್ನು ಡೈರೆಕ್ಟರ್ ಸ್ಪೆಷಲ್ ಚಿತ್ರೀಕರಣ ಸಂಧರ್ಭದಲ್ಲಿ ಇವ್ರ ನಟನೆ ಕಂಡು, ಗುರುಪ್ರಸಾದ್ ಮೊಬೈಲ್ ಗಿಫ್ಟಾಗಿ ಕೊಟ್ಟಿದ್ದು, ಡಬ್ಬಿಂಗ್ ಸಮಯದಲ್ಲಿ ರಂಗಾಯಣ ರಘು ಧನು ಅಭಿನಯಕ್ಕೆ ಮಾರು ಹೋಗಿ ತಬ್ಬಿಕೊಂಡಿದ್ದು ಧನಂಜಯ್ ಜೀವನದ ಮರೆಯಲಾರದ ಕ್ಷಣಗಳು. ಅದೇನೆ ಇರ‍್ಲಿ, ಸಾಧಿಸುವ ಚಲ ಇದ್ದರೆ ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಧನಂಜಯ್ ಸಾರಿ ಡಾಲಿ ಬೆಸ್ಟ್ ಎಕ್ಸಾಂಪಲ್

LEAVE A REPLY

Please enter your comment!
Please enter your name here