ಕೆಮಿಸ್ಟ್ರಿ ಕರಿಯಪ್ಪನ ಹಾಡಲ್ಲಿದೆ – ರಸಿಕತೆಯ ಬಯಾಲಜಿ – ಪಡ್ಡೆಗಳನ್ನು ಕುಣಿಸುತ್ತಾಳೆ ಈ ಊರ್ವಶಿ

0
34

ಊರ್ವಶಿ ಬೇವರ್ಸಿ ಅಂದಳು-ನವೀನ್ ಸಜ್ಜು‌ ಎಣ್ಣೆ ಕಿಕ್ ಇಳಿಸಿದಳು… ಇದು ಕೆಮಿಸ್ಟ್ರಿ ಕರಿಯಪ್ಪನ ಕಲೋಕಿಯಲ್ ಪದಗಳಗ್‘ ಎಣ್ಣೆ ನಮ್ದು ಊಟ ನಿಮ್ದು…’ ಅಂತಾ ಗಾಯಕ ನವೀನ್​ ಸಜ್ಜು ಕೇಳುಗರಿಗೆ ಭರ್ಜರಿ ಎಣ್ಣೆ ಊಟ ಹಾಕಿದ್ದರು. ಈ ಹಾಡು ಟ್ರೆಂಡಿಂಗ್​ನಲ್ಲಿ ಅಬ್ಬರಿಸಿದ್ದಲ್ಲದೇ ಪಬ್​, ಬಾರ್​ಗಳಲ್ಲೂ ಹೆಜ್ಜೆ ಹಾಕಿಸಿತ್ತು. ಇದೀಗ ನವೀನ್​ ಸಜ್ಜು ಮತ್ತೊಂದು ಲವ್​ ಬ್ರೇಕಪ್​ ಹಾಡಿಗೆ ದನಿಯಾಗಿದ್ದಾರೆ. ‘ಚೆಮಿಸ್ಟ್ರಿ ಆಫ್​ ಕರಿಯಪ್ಪ’ ಅನ್ನೋ ಸಿನಿಮಾ ಹಾಡಿಗೆ ನವೀನ್​ ದನಿಯಾಗಿದ್ದಾರೆ. ‘ಊರ್ವಶಿ ಅವಳು… ನನ್ನನ್ನು ಬೇರ್ವಸಿ ಮಾಡಿ ಹೋದ್ಲು..’ ಎಂಬಂತಹ ಕ್ಯಾಚಿ ಲಿರಿಕ್ಸ್ ಪಡ್ಡೆ ಹುಡುಗರ ಹೃದಯ ಕದ್ದಿದೆ. ಈ ಸಿನಿಮಾಗೆ ಕಿರಿಕ್​ ಪಾರ್ಟಿ ಖ್ಯಾತಿಯ ಚಂದನ್​ ಆಚಾರ್ ನಾಯಕನಾಗಿದ್ದು, ಸಂಜನಾ ನಾಯಕಿಯಾಗಿ ನಟಿಸ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್​​, ತಬಲಾ ನಾಣಿ ಅಭಿನಯಿಸಿದ್ದು, ಕುಮಾರ್​ ಆ್ಯಕ್ಷನ್​- ಕಟ್​ ಹೇಳಿದ್ದಾರೆ.

 https://youtu.be/FAcDCPMoNYI

LEAVE A REPLY

Please enter your comment!
Please enter your name here