ಕೆಜಿಎಫ್ ಸೆಕೆಂಡ್‌ ಟ್ರೈಲರ್ ರಿಲೀಸ್ – ಪ್ರಶಾಂತ್ ನೀಲ್‌ ಸೃಷ್ಟಿ‌ ನೋಡಿ‌ ಬೆರಗಾದ ಅಭಿಮಾನಿಗಳು

0
49

ಕೆ.ಜಿ.ಎಫ್ ಚಿತ್ರದ ಸದ್ದಿಗೆ ಮತ್ತೊಮ್ಮೆ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡಿದೆ. ಇದಕ್ಕೆ ಕಾರಣ.. ರಾಕಿ ಭಾಯ್‌ನೂ ಅಲ್ಲ. ಬದ್ಲಿಗೆ ಕೆ.ಜಿ.ಎಫ್ ಸಿನಿಮಾದ ಎರಡನೇ ಟ್ರೇಲರ್. ಹೌದು, ಕೆ.ಜಿ.ಎಫ್ ಇನ್ನೇನು ಬಿಡುಗಡೆಯಾಗಲಿದೆ. ಹಾಗಾಗಿ, ಚಿತ್ರದ ಪ್ರಚಾರ ಕೆಲ್ಸಗಳೂ ಜೋರಾಗಿವೆ. ಅದ್ರಲ್ಲೂ ಮುಂಬೈ ನೆಲದಲ್ಲಂತೂ ಕೆ.ಜಿ.ಎಫ್ ಕಹಳೆ ಜೋರಾಗಿ ಮೊಳಗುತ್ತಿದೆ. ಬಹುಶ, ಇದೇ ಕಾರಣಕ್ಕೋ ಏನೋ.. ಕೆ.ಜಿ.ಎಫ್‌ನ ನಾರ್ಥ್ ಇಂಡಿಯಾದಲ್ಲಿ ಡಿಸ್ಟ್ರಿಬ್ಯೂಶನ್ ಮಾಡುವ ಉಸ್ತುವಾರಿ ವಹಿಸಿಕೊಂಡಿರುವ ಫರ್ಹಾನ್ ಅಖ್ತರ್, ಇವತ್ತು.. ಕೆ.ಜಿ.ಎಫ್ ಚಿತ್ರದ ಹಿಂದಿ ಅವತರಣಿಕೆಯ ಎರಡನೇ ಟ್ರೇಲರ್‌ನ್ನ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಯಶ್ ಶ್ರೀನಿಧಿ ಶೆಟ್ಟಿ ಸೇರಿ ಕೆ.ಜಿ.ಎಫ್ ತಂಡ ಫರ್ಹಾನ್ ಅಖ್ತರ್‌ಗೆ ಸಾಥ್ ನೀಡಿತ್ತು. ಇನ್ನು ಮೊದಲ ಟ್ರೇಲರ್‌ನಲ್ಲಿ.. ಎಲ್ರನ್ನೂ ನಿಬ್ಬೇರಗಾಗಿಸಿದ್ದ ಪ್ರಶಾಂತ್ ನೀಲ್, ಎರಡನೇ ಟ್ರೇಲರ್‌ನಲ್ಲೂ ಶಾಕ್ ಕೊಟ್ಟಿದ್ದಾರೆ. ವ್ಹಾ, ಅನ್ನುವ ಉದ್ಘಾರಕ್ಕೂ ಕಾರಣವಾಗಿದ್ದಾರೆ. ಸಿನಿಮಾ ನೋಡುವ ಕಾತುರತೆಯನ್ನೂ ಹೆಚ್ಚಿಸಿದ್ದಾರೆ.

ಇನ್ನೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆಯಂತೂ ಇಲ್ಲಿ ಕೆಮ್ಮಂಗಿಲ್ಲ. ಇನ್ನೂ ಚಿತ್ರದಲ್ಲಿನ ಸ್ಟಂಟ್ ಸಿಕ್ವನ್ಸ್‌ನ ಸ್ಯಾಂಪಲ್ ನೋಡಿದ ಅನೇಕರ ಮೈನವಿರೇಳಿದೆ. ಕಿಕ್ಕೂ ಜಾಸ್ತಿಯಾಗಿದೆ. ಸಿನಿಮಾ ಬಿಡುಗಡೆ ಮಾಡ್ರಪ್ಪ ಕಾಯಲು ಆಗ್ತಿಲ್ಲ ಅನ್ನುವ ಮಾತುಗಳಿಗೂ ಕಾರಣವಾಗಿದೆ. ಇನ್ನೂ ಮೊದಲ ಟ್ರೇಲರ್‌ನಲ್ಲಿ ಅನಂತ್ ನಾಗ್ ವಾಯ್ಸ್ ಕೇಳಿಯೇ ಥ್ರಿಲ್ ಆಗಿದ್ದ ಪ್ರೇಕ್ಷಕರಿಗಿಲ್ಲಿ ಅನಂತ್ ನಾಗ ದರ್ಶನನೂ ಆಗಿದೆ. ತಂತ್ರಜ್ಞರ ಕೈ ಚಳಕ, ಕ್ವಾಲಿಟಿ, & ಪ್ರಶಾಂತ್ ನೀಲ್ ನಿರ್ದೇಶನದ ಸ್ಕಿಲ್ಸ್ ಕೂಡಾ ಎದ್ದು ಕಾಣುತ್ತಿದೆ. ಅಂದ ಹಾಗೇ ಇಂದು ಬೆಳ್ಳಿಗ್ಗೆ ಕೆ.ಜಿ.ಎಫ್ 2 ಹಿಂದಿ ವರ್ಷನ್ ಟ್ರೇಲರ್ ಬಿಡುಗಡೆಯಾದ್ರೆ, ಇಂದು ಸಂಜೆ ಕನ್ನಡ, ತಮಿಳು, ತೆಲುಗು ಟ್ರೇಲರ್‌ಗಳೂ ಬಿಡುಗಡೆಯಾಗಿವೆ. ಅದೇನೆ ಇರ್ಲಿರ, ಸದ್ಯ ಕೆ.ಜಿ.ಎಫ್ ಮೇನಿಯಾ ಶುರುವಾಗಿದೆ. ಇದೇ ಮೇನಿಯಾಗೆ ಇಂಡಿಯನ್ ಸಿನಿ ದುನಿಯಾನೇ ದಂಗಾಗಿದೆ. ಮುಂದಿನ ದಿನಗಳಲ್ಲಿ ಇದೇ ಕೆ,ಜಿ.ಎಫ್ ಇನ್ಯಾವ ರಣಕಹಳೆ ಊದಿ, ಗಲ್ಲಾಪೆಟ್ಟಿಗೆಯನ್ನ ಎಷ್ಟರ ಮಟ್ಟಿಗೆ ದೋಚಲಿದೆ ಅನ್ನೋದು ಸದ್ಯದ ಕೂತುಹಲ.

LEAVE A REPLY

Please enter your comment!
Please enter your name here