ಕೆಜಿಎಫ್ – ದಿ ವಿಲನ್ – ನಟಸಾರ್ವಭೌಮ ಚಿತ್ರಗಳನ್ನೆ ಟಾರ್ಗೆಟ್ ಮಾಡಿದ ಐಟಿ – ಇದರ ಹಿಂದಿದೆ ದೊಡ್ಡ ರಹಸ್ಯ

0
42

ಕನ್ನಡ ಚಿತ್ರರಂಗಕ್ಕಿಂದು ಐ,ಟಿ.ಶಾಕ್ ನೀಡಿದೆ. ಬೆಳ್ಳಂ ಬೆಳ್ಳಿಗ್ಗೆನೇ ಅನೇಕ ಕಡೆ ಏಕಕಾಲಕ್ಕೆ ದಾಳಿ ಮಾಡಿದೆ. ಅಷ್ಟಕ್ಕೂ ನ ಭೂತೋ ನ ಭವಿಷ್ಯತಿ ಅನ್ನುವಂತೆ ನಡೆದಿರುವ ಐತಿಹಾಸಿಕ ಐ.ಟಿ.ದಾಳಿಗೆ ಕಾರಣಗಳೂ ಆದ್ರು ಏನು ಅನ್ನುವದನ್ನ ನೋಡಲು ಹೊರಟ್ರೆ ಮತ್ತೊಂದಷ್ಟು ಸಂಗತಿಗಳೂ ಒಂದೊಂದಾಗಿಯೇ ಹೊರಬೀಳುತ್ತಿವೆ. ಯಸ್, ದಾಳಿ ನಡೆದಿದ್ದೇಕೆ ಹೀಗೊಂದು ಪ್ರಶ್ನೆಯ ಬೆನ್ನು ಹತ್ತಿ ಹೊರಟ್ರೆ ಕಣ್ಣಿಗೆ ಮೊದಲು ಕಾಣೋದೇ ಆ ಮೂರು ಸಿನಿಮಾಗಳು. ಯಸ್, ಹಾಗೇ ಒಮ್ಮೆ ಗಮನಿಸಿ, ಇಂದು ನಡೆದ ದಾಳಿ ಮೂರು ಸಿನಿಮಾಗಳ ಸುತ್ತ ಗಿರಕಿ ಹೊಡೆಯುತ್ತೆ. ಮೂರು, ದೊಡ್ಡ ಮಟ್ಟದಲ್ಲಿ ನಿರ್ಮಾಣಗೊಂಡ ಸಿನಿಮಾಗಳೇ. ಹೌದು, ಕೆ.ಜಿ.ಎಫ್, ದಿ ವಿಲನ್ ಹಾಗೂ ನಟಸಾರ್ವಭೌಮ.. ಮೂರು ಸಿನಿಮಾಗೆ ಸಂಬಂಧ ಪಟ್ಟವ್ರ ಮೇಲೆ ಇಂದು ಐ.ಟಿ.ದಾಳಿ ನಡೆದಿದೆ. ನಿಮಗೆ ಗೊತ್ತಿರಲಿ, ಕೆ.ಜಿ.ಎಫ್ ಕನ್ನಡದ ಇಲ್ಲಿವರೆಗಿನ ಅತ್ಯಂತ ಕಾಸ್ಟ್ಲೀ ಸಿನಿಮಾ. ಕನ್ನಡದಲ್ಲಿ ನೂರು ಕೋಟಿ ಗಡಿ ತಲುಪಿದ ಮೊದಲ ಸಿನಿಮಾನೂ ಹೌದು. ಇದು, ಸಹಜವಾಗಿ ಐ.ಟಿ ಅವ್ರ ಕಣ್ಣು ಅರಳುವಂತೆ ಮಾಡ್ತಾ, ಬಂಡವಾಳ ಎಲ್ಲಿಂದ ಬಂತು, ವಾಪಸು ಬಂದ ಬಂಡವಾಳವೆಷ್ಟು ಅನ್ನುವ ಅನುಮಾನಕ್ಕೆ ಕಾರಣವಾಯ್ತಾ ಅನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡ್ತಿದೆ.

ಇದೇ ದಿ ವಿಲನ್ ಚಿತ್ರದಲ್ಲೂ ರಿಫೀಟ್ ಆಗುತ್ತೆ. ಹೌದು, ದಿ ವಿಲನ್ ಕೂಡಾ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ. ಇನ್ನೂ ದಿ ವಿಲನ್ ಶುರು ಮಾಡುವ ಮೊದಲೇ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಹಾಗೂ ಕಛೇರಿ ಮೇಲೆ ಐಟಿ ದಾಳಿ ನಡೆದಿತ್ತು. ಇನ್ನೂ ಇದೀಗ ಸಿನಿಮಾ ಬಿಡುಗಡೆಗೊಂಡ ಬಳಿಕ ಮತ್ತೆ ನಡೆದಿದೆ. ಇನ್ನೂ ನಟಸಾರ್ವಭೌಮಕ್ಕೆ ಬಂಡವಾಳ ಹೂಡಿರೋದು ರಾಕ್ ಲೈನ್ ವೆಂಕಟೇಶ್. ವೆಂಕಟೇಶ್ ಕೂಡಾ ನಟಸಾರ್ವಭೌಮನನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದ್ರೆ ಕನ್ನಡ ಚಿತ್ರರಂಗ ನಿರ್ಮಾಣಗೊಳ್ಳೋದು ಅತ್ಯಂತ ಕಡಿಮೆ ವೆಚ್ಚದಲ್ಲಿ ಅನ್ನುವ ಮಾತುಗಳನ್ನ ಸುಳ್ಳು ಮಾಡಿದ ಇದೇ ಮೂರು ಸಿನಿಮಾಗಳ ವ್ಯವಹಾರ ಇರೋದು ಕೋಟಿ ಕೋಟಿಗಳ ಲೆಕ್ಕದಲ್ಲೇ. ಹಾಗಾಗೇ, ಇದೇ ಕೋಟಿಗಳ ಜಾಡು ಹಿಡಿದು ಐಟಿ ಅಧಿಕಾರಿಗಳೂ ದಾಳಿ ಮಾಡಿದ್ದಾರೆ ಅನ್ನೋದು ಬಲ್ಲಮೂಲಗಳ ಮಾಹಿತಿ.

ಇನ್ನೂ ಇಲ್ಲಿ ಅನೇಕ ಸಂಗತಿಗಳು ಐಟಿ ದಾಳಿಗೆ ಕಾರಣವಾಗಿದೆ. ಅದುವೇ ತೆರಿಗೆ ವಂಚನೆ. ಯಸ್, ನಿಮಗೆ ಗೊತ್ತಿರಲಿ ಕನ್ನಡ ಚಿತ್ರರಂಗದಲ್ಲಿ ಮನರಂಜನಾ ತೆರಿಗೆ ಮೇಲೆ ಸಡಿಲಿಕೆ ಇದೆ. ಇದೇ ಸಡಿಲಿಕೆಯನ್ನ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಎಂಬ ಗುಮಾನಿ ಐ.ಟಿಗಿದೆ. ಇನ್ನೂ. ಜಿ.ಎಸ್.ಟಿ ನಿಯಮಾವಳಿಗಳ ಪ್ರಕಾರ ೨೦ ಲಕ್ಷಕ್ಕೂ ಹೆಚ್ಚು ಆದಾಯ ಪಡೆದುಕೊಳ್ಳುವ ಕಲಾವಿದರು ಶೇಕಡಾ ೨೮ರಷ್ಟು ತೆರಿಗೆ ಪಾವತಿ ಮಾಡಬೇಕು. ಆದ್ರೆ ಸಂಭಾವನೆಯನ್ನು ನಿಯಮಿತವಾಗಿ ಪಡೆದು ಸಿನಿಮಾದ ಒಟ್ಟು ಆದಾಯದಲ್ಲೂ ಪಾಲು ಪಡೆಯುವ ಕಲಾವಿದರು, ಈ ಮೂಲಕ ತೆರಿಗೆ ವಂಚನೆ ಮಾಡುತ್ತಿದ್ದಾರಾ ಅನ್ನುವ ಅನುಮಾನನೂ ಐ,ಟಿ.ದಾಳಿ ಹಿಂದಿನ ಕಾರಣ. ಇದೆಲ್ಲದಕ್ಕಿಂತ ಬಹುದೊಡ್ಡ ಕಾರಣ ಅಂದ್ರೆ ಅದು ಬ್ಲ್ಯಾಕ್ ಮನಿ. ಹೌದು, ಕಪ್ಪು ಹಣ ಅತೀ ಹೆಚ್ಚು ಓಡಾಡೋದೇ ಸಿನಿಮಾರಂಗದಲ್ಲಿ ಅನ್ನುವ ಮಾತಿದೆ. ಬ್ಲ್ಯಾಕ್ ಮನಿಯನ್ನ ವೈಟ್ ಮಾಡಿಕೊಳ್ಳಲು ಅಂಥನೇ ಅನೇಕರು ಚಿತ್ರವನ್ನ ನಿರ್ಮಾಣ ಮಾಡ್ತಾರೆ ಅನ್ನುವ ಆರೋಪನೂ ಇದೆ. ಅಷ್ಟೇ ಅಲ್ಲ ಚಿತ್ರದ ಗಳಿಕೆ ಹೆಚ್ಚಾಗಿದ್ದರೂ ಕಮ್ಮಿಯಾಗಿದೆ ಎಂಬ ಲೆಕ್ಕವನ್ನ ಅನೇಕರು ಇಲ್ಲಿ ತೋರಿಸುತ್ತಾರೆ ಅನ್ನುವ ಮಾತು ಇದೆ. ಹಾಗಾಗೇ, ಇದೇ ಬ್ಲ್ಯಾಕ್ ಮನಿ ಮಾರ್ಕೇಟಿನ ಜಾಲ ಭೇದಿಸಲು ಇಂದು ಐ,ಟಿ.ಅಧಿಕಾರಿಗಳು ಮೊದಲ ಹಂತದ ದಾಳಿ ಮಾಡಿದ್ದಾರೆ ಅನ್ನೋ ಮಾತುಗಳೂ ಗಾಂಧಿನಗರದ ಗಲ್ಲಿಗಳಲ್ಲಿ ಸದ್ಯ ಬಲವಾಗಿ ಕೇಳಿ ಬರ್ತಿವೆ.

ಅಂದ ಹಾಗೇ ಇದೆಲ್ಲದ್ರ ನಡುವೆ, ಇಂದು ನಡೆದ ಐಟಿ ದಾಳಿಯಲ್ಲಿ ರಾಜಕೀಯದ ವಾಸನೆನೂ ಬಡಿಯುತ್ತಿದೆ. ಹೌದು, ಇದು.. ಬಿ.ಜೆ.ಪಿ ಸರ್ಕಾರದ ಪ್ರೇರಿತ ದಾಳಿ ಅನ್ನುವದು ಅನೇಕರ ವಾದ. ಕಾರಣ, ದಾಳಿಗೊಳಗಾದವ್ರೆಲ್ಲ ಗುರುತಿಸಿಕೊಂಡಿರೋದು ಕಾಂಗ್ರೆಸ್ ಹಾಗೂ ಜೆ,ಡಿ.ಎಸ್ ವಲಯದಲ್ಲಿ. ಸುದೀಪ, ಶಿವಣ್ಣ, ಪುನೀತ್, ಯಶ್, ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಆಪ್ತರಾದ್ರೆ, ಸಿ.ಆರ್.ಮನೋಹರ್ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ರಾಕ್ ಲೈನ್ ಹಾಗೂ ವಿಜಯ್ ಕಿರಗಂದೂರ್ ಕೂಡಾ ಪೊಲಿಟಿಕಲ್ ಫೀಲ್ಡ್‌ ನಲ್ಲಿ ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಗೆ ಆಪ್ತರು.. ಹಾಗಾಗೇ, ಇದೇ ಐಟಿ ದಾಳಿ ಹಿಂದೆ ಷಡ್ಯಂತ್ರವಿದೆ ಅನ್ನುವ ಆರೋಪವನ್ನ ಅಭಿಮಾನಿಗಳೂ ಮಾಡ್ತಿದ್ದಾರೆ. ಆದ್ರೆ ಇದೇ ಆರೋಪವನ್ನ ಅಭಿನಯ ಚಕ್ರವರ್ತಿ ಸುದೀಪ ಒಪ್ಪುವದಿಲ್ಲ. ಮೂರು ದೊಡ್ಡ ಸಿನಿಮಾಗಳು ಅನ್ನುವ ಕಾರಣಕ್ಕೆ ದಾಳಿಯಾಗಿರಬಹುದಷ್ಟೇ ಅನ್ನುವ ಸುದೀಪ, ರಾಜಕೀಯ ವಿಚಾರವಾಗಿ ನಡೆದಿದೆ ಅಂತ ನನಗೆ ಅನ್ನಿಸುತ್ತಿಲ್ಲ ಅಂದಿದ್ದಾರೆ.

LEAVE A REPLY

Please enter your comment!
Please enter your name here