ಕಿರಿಕ್ ಹುಡುಗಿ ಸಂಯುಕ್ತಳನ್ನು ನೀಲಿ ತಾರೆ ಅಂದ ನಿರ್ದೇಶಕ – ಕಾರಣ ಏನು ?

0
185

ಸಂಯುಕ್ತಾ ಹೆಗ್ಡೆ ಕಿರಿಕ್ ಕ್ವೀನ್ ಅಂಥನೇ ಖ್ಯಾತಿಯನ್ನ ಗಳಿಸಿದ ನಟಿ. ವಿವಾದವನ್ನ ಬುಡದಲ್ಲಿ ಇಟ್ಕೊಂಡೇ ತಿರುಗಾಡುವ ಸಂಯುಕ್ತಾ, ಇದೀಗ ಇನ್ನೊಬ್ಬನ್ನಿಗೆ ಪ್ರಚಾರದ ವಸ್ತುವಾಗಿದ್ದಾರೆ. ಹೌದು, ನಿಮಗೆ ಗೊತ್ತಿರಲಿ ಸಂಯುಕ್ತಾ ಹೆಗ್ಡೆ ಕೈ ಕನ್ನಡ ಸಿನಿಮಾಗಳಿಲ್ಲದೇ ಬರಿದಾಗಿರಬಹುದು. ಬಟ್, ರಿಯಾಲಿಟಿ ಶೋಗಳು ಇವ್ರನ್ನೇ ಅರಿಸಿಕೊಂಡು ಹೋಗುತ್ವೆ. ಅದು, ಹಿಂದಿಯ ಶೋಗಳೇ. ಹಾಗಾಗಿ, ಸಂಯುಕ್ತಾ ಬಗ್ಗೆ ನಾಲ್ಕು ಕೆಟ್ಟ ಮಾತುಗಳನ್ನಾಡಿದ್ರೆ ಸಹಜವಾಗಿ ಒಂದಷ್ಟು ಪುಕ್ಸಟ್ಟೆ ಪಬ್ಲಿಸಿಟಿ ಸಿಗುತ್ತೆ. ಅದೃಷ್ಟ ಚೆನ್ನಾಗಿದ್ದರೆ ರಾಷ್ಟ್ರ ಮಟ್ಟದಲ್ಲೂ ಸದ್ದಾಗುತ್ತೆ. ಇದನ್ನೇ ಅರಿತ ಕೀರ್ತನ್ ಶೆಟ್ಟಿ ಎಂಬ ಮಹಾಜ್ಞಾನಿ ನಿರ್ದೇಶಕನೊಬ್ಬ ಸಂಯುಕ್ತಾ ಬಗ್ಗೆ ಇದೀಗ ಮಾತನಾಡಿದ್ದಾನೆ. ಹೌದು, ಅದೆಲ್ಲೋ ಕುಂತು ಕೀರ್ತನ್ ಶೆಟ್ಟಿ, ಅದ್ಯಾವದೋ ಅಮಲಿನಲ್ಲಿ ಸಂಯುಕ್ತಾ ಬಗ್ಗೆ ನಾಲ್ಕು ಸಾಲುಗಳನ್ನ ತನ್ನ ಸಾಮಾಜಿಕ ಜಾಲತಾಣದಲ್ಲಿ ಗೀಚಿಕೊಂಡಿದ್ದಾನೆ. ಅಸಲಿಗೆ.. ಇವತ್ತು ಸಂಯುಕ್ತಾ ಬಗ್ಗೆ ಮಾತನಾಡಿರುವ ಕೀರ್ತನ್ ಎಂಬಾತ ಮೀಟೂ ವಿಥ್ ಪೈಟೂ ಅನ್ನುವ ಸಿನಿಮಾ ಮಾಡ್ತಿದ್ದಾನಂತೆ. ಅದಕ್ಕೆ.. ಶ್ರೀ ರೆಡ್ಡಿ ನಾಯಕಿಯಂತೆ. ಇರ್ಲಿಮ. ಶ್ರೀ ರೆಡ್ಡಿಯನ್ನ ಕನ್ನಡ ಕರೆತರುತ್ತಿರುವ ಕೀರ್ತನ್, ಸಂಯುಕ್ತಾ ಎಣ್ಣೇ ಏಟಿನಲ್ಲಿ ಏನೋನೋ ಮಾಡ್ತಾಳೆ.. ಗಾಂಜಾ ಮತ್ತಲ್ಲಿ ಇನ್ನೇನೋ ಗೊಣಗ್ತಾಳೆ, ಸಿಗರೇಟಿನ ಹೊಗೆಯಂತೂ.. ಸಂಯುಕ್ತಾಗೀಗ ಸಿಕ್ಕಾಪಟ್ಟೆ ಇಷ್ಟ ಅನ್ನುವ ರೀತಿಯಲ್ಲಿ ಮಾತನಾಡಿದ್ದಾನೆ. ಅಷ್ಟೇ ಅಲ್ಲ ಸಂಯುಕ್ತಾ ನೀಲಿ ತಾರೆ ಅಂದಿದ್ದಾನೆ. ಹಿಂದಿಯಲ್ಲಿ ಸನ್ನಿ ಲಿಯೋನ್ ಹೇಗೋ.. ಕನ್ನಡದಲ್ಲಿ ಸಂಯುಕ್ತಾ ಹೆಗ್ಡೆ ಅಂದಿದ್ದಾನೆ ಮಹಾನ್ ನಿರ್ದೇಶಕ. 
ನೀಲಿತಾರೆ ಸಂಯುಕ್ತಾ
ನನ್ನ ಚಿತ್ರದಲ್ಲಿ ಕಿರಿಕ್ ಹುಡ್ಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡುಬೀರಿ ಸಮಯುಕ್ತಾ ಹೆಗ್ಡೆ ತರಹದ ಒಂದು ಪಾತ್ರ ಇದೆ.ಆ ಪಾತ್ರವನ್ನು ಇವಾಗ ಬಿಗ್ ಬಾಸ್ ಮನೆಯಲ್ಲಿರುವ ಸೋನು ಪಾಟೀಲ್ ಅವರು ಹೊರಗಡೆ ಬಂದಾಗ ಅವರ ಹತ್ತಿರ ಮಾತನಾಡಿ ಮಾಡಿಸುವ ಪ್ಲ್ಯಾನ್ ನಮ್ಮದು. ಸೋನು ಪಾಟೀಲ್ ನನಗೆ ವ್ಯಯಕ್ತಿಕವಾಗಿ ಗೊತ್ತಿರುವ ಹುಡುಗಿ. ಇನ್ನುಳಿದ ಗುಟ್ಟನ್ನ ಸಮಯ ಬಂದಾಗ ನಾನೇ ಬಿಟ್ಟು ಕೊಡುವೆ. ಸಂಯುಕ್ತಾ ಹೆಗ್ಡೆ ಒಬ್ಬಳು ಕೆಟ್ಟ ಹುಡುಗಿ. ಅವಳಿಗೆ ಎಣ್ಣೆ. ಗಾಂಜಾ. ಸಿಗರೇಟ್ ಎಲ್ಲ ಕೆಟ್ಟ ಚಟ ಇರುವ ಹುಡುಗಿ. ಅಂಥವರಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ. ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ ಕರ್ನಾಟಕದಲ್ಲಿ ಸಂಯುಕ್ತಾ ಹೆಗ್ಡೆ ಹಂಗೆ. ಗಂಡು ಬೀರಿ ಸಂಯುಕ್ತಾ.
ಇದು. ಕೀರ್ತನ್ ಎಂಬಾತ ಸಂಯುಕ್ತಾ ಬಗ್ಗೆ ಬರೆದ ನುಡಿ ಮುತ್ತುಗಳು.ಇದೇ ನುಡಿಮುತ್ತುಗಳಿಗೆ ಅದ್ಯಾವಾಗ ಕಾಂಟ್ರವರ್ಸಿಯ ಬಿಸಿ ತಾಗಿತೋ.. ಆಗ, ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಿಂದ ಪೋಸ್ಟ್ ಮಾಯವಾಗಿ ಹೋಗಿದೆ. ಅಸಲಿಗೆ ಇವತ್ತು ಸಂಯುಕ್ತಾ ಇಸ್ ಪಾರ್ನ್‌ಸ್ಟಾರ್ ಅನ್ನುವ ಮೂಲಕ ಪಬ್ಲಿಸಿಟಿ ಗಿಟ್ಟಿಸಿಕೊಳ್ತಿರುವ ಕೀರ್ತನ್‌ಗೆ ಪ್ರಚಾರದ ಗೀಳಿದೆ. ಇದು, ಗಾಂಧಿನಗರದ ಗಲ್ಲಿಗಳಲ್ಲಿ ಸಾಬೀತಾಗ್ತಾನೇ ಇದೆ. ಹೌದು, ಹಿಂದೆ ಫೇಸ್‌ಬುಕ್ ಲವ್ ಅನ್ನುವ ಸಿನಿಮಾ ಮಾಡ್ತೀನಿ ಅಂದಿದ್ದ ಕೀರ್ತನ್ ಚಿತ್ರಕ್ಕೆ ಹುಚ್ಚ ವೆಂಕಟ್‌ರನ್ನ ನಾಯಕನನ್ನಾಗಿಸಿದ್ದ. ನಂತ್ರ ಚಿತ್ರೀಕರಣಕ್ಕೆ ವೆಂಕಟ್ ಬರ್ತಿ ಲ್ಲ ಎಂದು ದೂರಿದ್ದ. ಸಾಲದಕ್ಕೆ ವೆಂಕಟ್ ಣ್ಣನಿಂದ ನನಗೆ ಜೀವ ಬೆದರಿಕೆ ಇದೆ ಅಂಥಾನೂ ಹೇಳಿದ್ದ. ಇಂತಿಪ್ಪ.. ಕೀರ್ತನ್ ಇದೀಗ ಸಂಯುಕ್ತಾ ಕೀರ್ತನೆ ಮಾಡ್ತಿದ್ದಾನೆ. ಮುಂದೆ.. ಪ್ರಚಾರಕ್ಕಾಗಿ, ಇನ್ಯಾರ ಹೆಸರನ್ನ ಬಳಸಿಕೊಳ್ತಾನೋ ಕಾದು ನೋಡಬೇಕು ಅನ್ನುತ್ತಿದೆ ಗಾಂಧಿನಗರ.

LEAVE A REPLY

Please enter your comment!
Please enter your name here