ಕಿಚ್ಚನ‌ ವಿಲನ್ ಲುಕ್ಕಿಗೆ ಮನಸೋತ ಅಭಿಮಾನಿಗಳು – ಹೆಚ್ಚಾಯ್ತು ವಿಲನ್ ಕ್ರೇಜ್

0
234

ಅಭಿನಯ ಚಕ್ರವರ್ತಿ ಸುದೀಪ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದಕ್ಕೆ ಕಾರಣ.. ವೈರಲ್ ಆಗಿರುವ ಈ ಫೋಟೊ ಯಸ್, ಸುದೀಪ.. ಸ್ಟೈಲ್ ಇದೀಗ ಮತ್ತೊಮ್ಮೆ ಸದ್ದು ಮಾಡ್ತಿದೆ. ಸುದ್ದಿಯಾಗ್ತಿದೆ. ಎಲ್ಲರ ಚಿತ್ತ ಕದಿಯುತ್ತಿದೆ. ಅಭಿಮಾನಿಗಳ ಸಂಭ್ರಮಕ್ಕೂ ಕಾರಣವಾಗ್ತಿದೆ. ಇದೆಲ್ಲದಕ್ಕೂ ಕಾರಣ, ಓನ್ಸ್ ಅಗೈನ್ ದಿ ವಿಲನ್ & ಪ್ರೇಮ್ ಅನ್ನೋದು ಇಲ್ಲಿನ ಇಂಟ್ರೆಸ್ಟಿಂಗ್ ಸಂಗತಿ. ಹೌದು, ದಿ ವಿಲನ್ ಸಿನಿಮಾ ಬಗ್ಗೆ ಇರುವ ಕೂತುಹಲ ಅಷ್ಟಿಷ್ಟಲ್ಲ. ಅಭಿಮಾನಿಗಳು ದಿ ವಿಲನ್‌ಗಾಗಿ.. ದಿ ವಿಲನ್ ಟೀಸರ್‌ಗಾಗಿ ಕಾಯ್ತಿರುವ ಪರಿನೂ ಕಮ್ಮಿ ಇಲ್ಲ. ಸ್ಥಿತಿ ಹೀಗಿರುವಾಗ್ಲೇ, ಡೈರೆಕ್ಟರ್ ಪ್ರೇಮ್.. ಚಿತ್ರದ ಖಡಕ್ ಸ್ಟೀಲ್ ರಿವೀಲ್ ಮಾಡಿದ್ದಾರೆ. ಇದಕ್ಕೆ ವೇದಿಕೆಯಾಗಿದ್ದು ಶಿವಣ್ಣ ನಡೆಸಿಕೊಡುವ ಕಾರ್ಯಕ್ರಮ.ಇತ್ತೀಚಿಗಷ್ಟೇ ಸುದೀಪ & ಪ್ರೇಮ್, ಶಿವಣ್ಣ ನಡೆಸಿಕೊಡುವ ನಂ 1 ಯಾರಿ ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ.. ಸಿನಿಮಾ ಜೀವನ, ವ್ಯಯಕ್ತಿಕ ಜೀವನದ ಬಗ್ಗೆ ಮಾತನಾಡ್ತಾ ಮಾತನಾಡ್ತಾ, ಪ್ರೇಮ್.. ಸುದೀಪರ ಈ ಸ್ಟೈಲಿಶ್ ಅವತಾರವನ್ನ ರಿವೀಲ್ ಮಾಡಿದರು. ಈ ಮೂಲಕ.. ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿದರು. ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದರು. ಸದ್ಯ, ಸಿಕ್ಕಾಪಟ್ಟೆ ವೈರಲ್ ಆಗಿರುವ ಫೋಟೊ ಚಿತ್ರದ ಮೇಲೀನ ಕೂತುಹಲವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಅಭಿಮಾನಿಗಳ ಕಾಯುವಿಕೆಯನ್ನೂ ಮತ್ತಷ್ಟು ಹೆಚ್ಚಾಗಿಸಿದೆ. ಟೀಸರ್ ಯಾವಾಗ ಅಣ್ಣ ಅನ್ನುವ ಪ್ರಶ್ನೆಗೂ ಮತ್ತೊಮ್ಮೆ ಕಾರಣವಾಗಿದೆ.

LEAVE A REPLY

Please enter your comment!
Please enter your name here