ಕಷ್ಟದಲ್ಲಿದ್ದ ಕಲಾವಿದನ ನೆರವಿಗೆ ನಿಂತ ಚಾಲೆಂಜಿಂಗ್ ಸ್ಟಾರ್ – ನಾನಿದ್ದೇನೆ ಭಯಪಡಬೇಡಿ ಎಂದ ಯಜಮಾನ

0
209

ದರ್ಶನ್ ಕನ್ನಡ ಚಿತ್ರರಂಗದ ಸಾರಥಿ. ಸಿನಿಮಾಗಳಾಚೆಯೂ ಸುದ್ದಿಯಾಗುವ.. ಸದ್ದು ಮಾಡುವ.. ದರ್ಶನ್, ಸ್ನೇಹಿತರ ಪಾಲಿನ ಕಲ್ಪವೃಕ್ಷನೂ ಹೌದು. ಕಷ್ಟದಲ್ಲಿರುವ ಸ್ನೇಹಿತರಿಗೆ ಸದಾ ಮಿಡಿಯುವ.. ಚಿತ್ರರಂಗದಲ್ಲಿನ ಸ್ನೇಹಿತರಿಗೆ ಸದಾ ನೆರವಾಗುವ ದರ್ಶನ್‌ಗಾಗಿ ಇದೀಗ ಜೀವದ ಗೆಳೆಯನೊಬ್ಬ ಕಾದು ಕುಂತಿದ್ದಾನೆ. ಅದು, ನೆರವಿನ ನೋಟದೊಂದಿಗೆ. ಯಸ್, ದರ್ಶನ್.. ಚುನಾವಣ ಕಣ & ಚಿತ್ರಗಳ ಚಿತ್ರೀಕರಣ ಅಂಥ ಅತ್ತ ಬ್ಯುಸಿಯಾಗಿದ್ದಾಗ್ಲೇ, ದರ್ಶನ್ ಅವ್ರ ಸಹಪಾಠಿ ಅನಿಲ್ ಚಿಕಿತ್ಸೆ ವೆಚ್ಚವನ್ನೂ ಭರಿಸಲಾಗದ ಶೋಚನಿಯ ಸ್ಥಿತಿಯಲ್ಲಿದ್ದಾರೆ. ಹೌದು, ಅನಿಲ್ ಕುಮಾರ್.. ಕಿರುತೆರೆಗೆ ಇವರು ಚಿರಪಚಿತರಾದ ಕಲಾವಿದ. ಇತ್ತೀಚಿನವರೆಗೂ ಬಣ್ಣದ ನಂಟಿನೊಂದಿಗೆ ಇದ್ದ ಅನಿಲ್ ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರಾ ಮಾತೂ ಆಡಲಾಗದ ಸ್ಥಿತಿಯಲ್ಲಿರುವ ಅವರೀಗ ಚಿಕೆತ್ಸೆಯ ವೆಚ್ಚ ಸೇರಿದಂತೆ ಯಾವುದನ್ನು ಭರಿಸಲಾಗದ ಸ್ಥಿತಿ ತಲುಪಿದ್ದಾರೆ. ಮುಖ್ಯವಾದ ವಿಚಾರವೆಂದರೆ ಈ ಅನಿಲ್ ಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹಿತ. ಅಷ್ಟೇ ಅಲ್ಲ ಸಹಪಾಠಿನೂ ಹೌದು. ರಂಗಭೂಮಿಯ ನಟನೆಯನ್ನೇ ನಂಬ್ಕೊಂಡು ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಿದ್ದ ಅನಿಲ್ ಈಗ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ.

ನಟರಾಜ್ ಹೊನ್ನವಳ್ಳಿ ಸೇರಿದಂತೆ ಅನೇಕ ರಂಗತಜ್ಞರ ನಾಟಕಗಳಲ್ಲಿ ಅಭಿನಯಿಸಿದ್ದ ಅನಿಲ್, ಪೃಥ್ವಿ, ಕರಿಯ ಕಣ್ ಬಿಟ್ಟ, ಪಲ್ಲಟ ಸೇರಿದಂತೆ ಹತ್ತಾರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಮೂಡಲ ಮನೆ ಮೂಲಕ ಬೆಳಕಿಗೆ ಬಂದ ಅನಿಲ್ ಇತ್ತೀಚಿನ ಬ್ರಹ್ಮಗಂಟು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ಸದ್ಯ ಅನಾರೋಗ್ಯಕ್ಕೀಡಾಗಿರುವ ಅನಿಲ್ ಅವ್ರನ್ನ ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಎಲ್ಲರ ಪ್ರೀತಿಪಾತ್ರರಾಗಿದ್ದ ಈ ಸ್ನೇಹಜೀವಿಗೀಗ ಒಂದು ಕಾಲದ ಸಹಪಾಠಿ ದರ್ಶನ್ ಅವರ ಸಹಾಯದ ಅಗತ್ಯವಿದೆ. ಹೀಗಿರುವಾಗ್ಲೇ ಅನಿಲ್ ಸ್ಥಿತಿ ಕಂಡು ದರ್ಶನ್ ಮನಸು ಮಿಡಿದಿದೆ. ಹಾಗಾಗಿ, ದರ್ಶನ್ ಅನಿಲ್ ಕುಟುಂಬಕ್ಕೆ ಕರೆ ಮಾಡಿ ತಾನು ಆದಷ್ಟು ಬೇಗ ಬಂದು ಭೇಟಿ ಮಾಡುತ್ತೇನೆ. ಆತಂಕ ಪಡಬೇಡಿ ಅಂತಾ ಸಾಂತ್ವನ ಹೇಳಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಮಂಡ್ಯ ಚುನಾವಣಾ ಪ್ರಚಾರ ಹಾಗೂ ಒಡೆಯ ಚಿತ್ರದ ಚಿತ್ರೀಕರಣದ ನಡುವೆಯೂ, ದರ್ಶನ್ ತನ್ನ ಸಹಪಾಠಿ ಅನಿಲ್ ಕಷ್ಟಕ್ಕೆ ಮರಗಿದ್ದಾರೆ.ಇನ್ನೂ ದರ್ಶನ್ ಈ ಬಗ್ಗೆ ಗಮನ ಹರಿಸಿರೋದರಿಂದ ಅನಿಲ್ ಅನಾರೋಗ್ಯ ನೀಗಿಕೊಂಡು ಬರುವ ಭರವಸೆ ಚಿಗುರಿಕೊಂಡಿದೆ. ಅವರು ಆದಷ್ಟು ಬೇಗನೆ ಚೇತರಿಸಿಕೊಂಡು ಮತ್ತೆ ಮೊದಲಿನಂತಾಗಲೆಂಬುದು ಎಲ್ಲರ ಆಶಯ.

LEAVE A REPLY

Please enter your comment!
Please enter your name here