ಕವಚ ಕಳಚಿಟ್ಟು ಕಣ್ಣು ತೆರೆದ ಕರುನಾಡ ಚಕ್ರವರ್ತಿ – ಕುಂಬಳಕಾಯಿ ಮ್ಯಾಟರ್

0
206

ಕವಚ.. ಭರ್ತಿ ದಶಕದ ಬಳಿಕ ಶಿವಣ್ಣ ಮಾಡ್ತಿರುವ ರಿಮೇಕ್ ಸಿನಿಮಾ. ಮೊದಲಿಂದನೂ ಅತೀವ ಕೂತುಹಲವನ್ನ ಕೆರಳಿಸಿರುವ ಕವಚದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇದೇ ಖುಷಿಯಲ್ಲಿ ಶಿವಣ್ಣ ಮತ್ತು ಚಿತ್ರತಂಡ ಇತ್ತೀಚಿಗೆ ಮಾಧ್ಯಮದವ್ರ ಮುಂದೆ ಹಾಜರಾಗಿತ್ತು. ಕವಚ ಶಿವಣ್ಣ ಪಾಲಿಗೆ ತುಂಬಾನೇ ಸ್ಪೆಷಲ್ ಸಿನಿಮಾ. ಕಾರಣ.. ಚಿತ್ರದಲ್ಲಿ ಶಿವಣ್ಣ ಅಂಧನ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮ ಸುಧೀರ್ಘ ಸಿನಿಯಾನದಲ್ಲಿ ಇಂತಹದೊಂದು ಪಾತ್ರವನ್ನ ಶಿವಣ್ಣ ಮಾಡ್ತಿರೋದು ಇದೇ ಮೊದಲು. ಇದೇ ಚಿತ್ರೀಕರಣದ ಆರಂಭಕ್ಕೂ ಮುನ್ನ ಶಿವಣ್ಣ ಆತಂಕಕ್ಕೂ ಕಾರಣವಾಗಿದ್ದು ಸುಳ್ಳಲ್ಲ.

ಅಂದ ಹಾಗೇ, ಕವಚ ರಿಮೇಕ್ ಸಿನಿಮಾ. ಹೀಗಿದ್ದೂ ಶಿವಣ್ಣ ಒಪ್ಪಿಕೊಂಡಿದ್ದಾರೆ. ಅಭಿನಯಿಸಿದ್ದಾರೆ. ಇದಕ್ಕೆ ಕಾರಣ ಚಿತ್ರದ ಕಥೆ. ಹೌದು, ಕಥೆನೇ ಶಿವಣ್ಣರನ್ನ ರಿಮೇಕ್ ಮಾಡಬಾರದೆನ್ನುವ ತಮ್ಮದೇ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದು. ಇನ್ನು ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶನವಿದೆ. ಬೆಸಿಕಲಿ ತೆಲುಗಿನವರಾಗಿರುವ ವಾಸುಗೆ ಕನ್ನಡದಲ್ಲಿದು ಮೊದಲ ಪ್ರಯತ್ನ. ವಸಿಷ್ಠ ಸಿಂಹ ಕವಚದ ಮತ್ತೊಂದು ಅಟ್ರ್ಯಾಕ್ಷನ್. ಶಿವಣ್ಣರೊಟ್ಟಿಗೆ ಬ್ಯಾಕ್ ಟು ಬ್ಯಾಕ್ ಸ್ಕ್ರೀನ್ ಸ್ಪೇಸ್ ಶೇರ್ ಮಾಡಿಕೊಳ್ತಿರುವ ವಸಿಷ್ಠ ಸಹಜವಾಗಿಯೇ ಖುಷಿಯಾಗಿದ್ದರು. ಇನ್ನು, ಬಿಟೌನ್‌ನ ಖಲ್ಲಾಸ್ ಗರ್ಲ್ ಇಶಾ ಕೊಪ್ಪಿಕರ್.. ಕವಚದ ಮತ್ತೊಂದು ಕೇಂದ್ರಬಿಂದು. ಇನ್ನುಳಿದಂತೆ ಮೀನಾಕ್ಷಿ, ಕೃತಿಕಾ. ರಾಜೇಶ್ ನಟರಂಗ ಚಿತ್ರದ ಪ್ರಮುಖ ಪಾತ್ರಧಾರಿಗಳು. ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ಸುಧೀರ್ ಕವಚದ ನಿರ್ಮಾಪಕ. ಸದ್ಯ, ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಕವಚ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.

LEAVE A REPLY

Please enter your comment!
Please enter your name here