ಕರ್ನಾಟಕದೆಲ್ಲೆಡೆ ಅವರಿಸಿದೆ ಕೆಜಿಎಫ್ ಬೆಂಕಿ – ಟ್ರೈಲರ್ ಹೆಚ್ಚಿಸಿದೆ ಚಿತ್ರದ ನಿರೀಕ್ಷೆ

0
187

ಕೂತುಹಲ ಹಾಗೂ ಕೌತುಕವನ್ನ ತನ್ನ ಒಡಲಾಳದಲ್ಲಿ ಇಟ್ಟುಕೊಂಡೇ, ಎರಡು ವರ್ಷದಿಂದ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲಿಸಿರುವ ಕೆ.ಜಿ.ಎಫ್ ಸಿನಿಮಾದ ಟ್ರೇಲರ್ ಫೈನಲಿ ರಿವೀಲಾಗಿದೆ. ಯಸ್, ಕೆ.ಜಿ.ಎಫ್ ಅನ್ನುವ ಬೆಂಕಿ ಭಾರತವನ್ನ ಆವರಿಸಿಕೊಂಡಿದೆ. ಒಂದ್ಕಡೆ ಟ್ರೇಲರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರೆ, ಇನ್ನೊಂದ್ಕಡೆ ಹಿಂದಿ ಸಿನಿರಂಗಕ್ಕೀಗ ನಡುಕ ಶುರುವಾಗಿದೆ. ಇನ್ ಫ್ಯಾಕ್ಟ್ ಯಶ್ ಉದ್ದೇಶ ಒಂದರ್ಥದಲ್ಲಿ ಈಡೇರಿದೆ. ಹಾಗಾಗೇ, ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಕನ್ನಡಿಗರ ತಾಖತ್ತೇನು ಅನ್ನೋದು ಇಡೀ ಇಂಡಿಯಾಗೆ ಗೊತ್ತಾಗಬೇಕಿದೆ ಅಂದಿದ್ದು ಅನ್ಸುತ್ತೆ. ಇಷ್ಟೇ ಅಲ್ಲ ನಮ್ಮ ತಂತ್ರಜ್ಞರ ಅಬಿಲಿಟಿನೂ ಎಲ್ಲರಿಗೂ ಗೊತ್ತಾಗಬೇಕೆನ್ನುವ ಯಶ್, ಇದು ಸ್ಯಾಂಪಲ್ ಪಿಕ್ಚರ್ ನೋಡೋದು ಇನ್ನೂ ಬಾಕಿ ಇದೆ ಅನ್ನುವ ಸಂದೇಶವನ್ನೂ ಇದೇ ವೇಳೆ ಕೊಟ್ಟಿದ್ದಾರೆ.

ಇನ್ನೂ, ಕೆ.ಜಿ.ಎಫ್‌ನ ಕದನ, ಬರೀ ಕನ್ನಡದಲ್ಲಷ್ಟೇ ಕಣ್ತುಂಬಿಕೊಂಡ್ರೆ, ಕನ್ನಡಿಗರಷ್ಟೇ ನೋಡಿ ಆನಂದ ಪಟ್ಟರೆ ಹೇಗೆ..? ಬಹುಶ, ಇದೇ ಕಾರಣಕ್ಕೋ ಏನೋ ಕೆ.ಜಿ.ಎಫ್ ಚಿತ್ರವನ್ನ ಐದು ಭಾಷೆಯಲ್ಲಿ ಬಿಡುಗಡೆ ಮಾಡಲಾಗ್ತಿದೆ. ಇದು, ಕೂಡಾ ದಾಖಲೆ. ಹೌದು, ಕೆ.ಜಿ.ಎಫ್. ಕನ್ನಡದ ಜೊತೆ ಜೊತೆಯಲ್ಲಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಫರ್ಹಾ ನ್ ಅಖ್ತರ್, ಅನಿಲ್ ತಂದಾನಿ ಹಾಗೂ ರಿತೇಶ್ ಸಿದ್ವಾನಿ ಸೇರಿ ತಮ್ಮ ಎಕ್ಸೆಲ್ ಎಂಟ್ರಟೈನ್‌ಮೆಂಟ್ ಬ್ಯಾನರ ಅಡಿ ಚಿತ್ರವನ್ನ ಬಿಡುಗಡೆ ಮಾಡ್ತಿದ್ದಾರೆ. ಇನ್ನೂ ತಮಿಳಿನಲ್ಲಿ ವಿಶಾಲ್ ಕೆ.ಜಿ.ಎಫ್‌ನ ಬೆನ್ನಿಗೆ ನಿಂತಿದ್ದಾರೆ. ತಮ್ಮ ವಿಶಾಲ್ ಫಿಲ್ಮ್ ಫ್ಯಾಕ್ಟರಿ ಮೂಲಕ ಚಿತ್ರವನ್ನ ಬಿಡುಗಡೆಗೊಳಿಸುತ್ತಿದ್ದಾರೆ. ತೆಲುಗುದಲ್ಲಿ ವಾರಾಹಿ ಚಲನಚಿತ್ರಂನವರು ಬಿಡುಗಡೆ ಮಾಡ್ತಿದ್ದರೆ, ಕನ್ನಡದಲ್ಲಿ ಬಿಡುಗಡೆ ಮಾಡುವ ಜವಾಬ್ಧಾರಿ ಹೊತ್ತಿರುವ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮಲಯಾಳಂನಲ್ಲೂ ಚಿತ್ರವನ್ನ ಬಿಡುಗಡೆ ಮಾಡಲಿದೆ. ಈ ಐದು ಭಾಷೆಗಳಲ್ಲಿ ಚಿತ್ರ ಡಿಸೆಂಬರ್ ೨೧ಕ್ಕೆ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಅನ್ನೋದು ಇಲ್ಲಿನ ಮತ್ತೊಂದು ವಿಶೇಷ ಸಂಗತಿ.

ಇನ್ನೂ ಕೆ.ಜಿ.ಎಫ್‌ಗೆ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಹಿಂದೆ.. ಇದೇ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ಉಗ್ರಂ ಚಿತ್ರಕ್ಕೆ ಮ್ಯೂಸಿಕ್ ಸ್ಕೋರ್ ಮಾಡಿದ್ದ ರವಿ ಬಸ್ರೂರ್, ಓನ್ಸ್ ಅಗೈನ್ ತಮ್ಮಲ್ಲಿನ ಟ್ಯಾಲೆಂಟ್‌ನ್ನ ಒರೆಗಲ್ಲಿಗೆ ಹಚ್ಚಿದ್ದಾರೆ. ಇನ್ನೂ ಭುವನ್ ಗೌಡ ಸಿನಿಮ್ಯಾಟೋಗ್ರಾಫಿ ಸಿನಿಮಾದ ಮತ್ತೊಂದು ಶಕ್ತಿ. ಕೆ,ಜಿ.ಎಫ್‌ನ ಕಥಾನಾಯಕಿಯಾಗಿ ಇರೋದು ಶ್ರೀನಿಧಿ ಶೆಟ್ಟಿ. ಇವ್ರಿಗೆ ಇದು ಮೊದಲ ಚುಂಬನ. ಮೊದಲ ಪ್ರಯತ್ನದಲ್ಲೇ ಭರ್ತಿ ಐದು ಭಾಷೆಗಳಿಗೂ ಪರಿಚಯವಾಗಲಿದ್ದಾರೆ ಶ್ರೀನಿಧಿ. ಅನಂತ್ ನಾಗ್, ಅಚ್ಯುತ್ ಕುಮಾರ್, ಬಿ.ಸುರೇಶ್, ನಾಗಾಭರಣ, ದಿನೇಶ್ ಮಂಗ್ಳೂರು, ಹರೀಶ್ ರಾಯ್, ಮಾಳ್ವಿಕಾ & ವಸಿಷ್ಠ ಸಿಂಹ ಚಿತ್ರದ ಇನ್ನುಳಿದ ಪ್ರಮುಖ ಕಲಾವಿದರು. ಕೆ.ಜಿ.ಎಫ್ ಮತ್ತಷ್ಟು ಕಳೆಗಟ್ಟುವಂತೆ ಮಾಡಿರೋದು ತಮನ್ನಾ. ಹೌದು, ತಮನ್ನಾ ಚಿತ್ರದ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ಸಾಗುವ ಸಿನಿಮಾದಲ್ಲಿ ಇದೇ ಹಾಡು ಮಹತ್ತರವಾದ್ದದು ಅನ್ನೋದು ಚಿತ್ರತಂಡದ ಅಭಿಪ್ರಾಯ. ಸದ್ಯ ಕೆ.ಜಿ.ಎಫ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗಳು ಮತ್ತಷ್ಟು ಗರಿಗೇದರಿವೆ. ಕೂತುಹಲ ಕೌತುಕ ಇಮ್ಮಡಿಗೊಂಡಿದೆ. ಇದ್ರ ನಡುವೆ ಸೊಶಿಯಲ್ ಮೀಡಿಯಾಗೆ ಕೆ.ಜಿ.ಎಫ್ ಜ್ವರ ಅಂಟಿಕೊಂಡಿದೆ. ಮುಂದಿನ ದಿನಗಳಲ್ಲಿ ಇದೇ ಕೆ.ಜಿ.ಎಫ್‌ನ ಸದ್ದು ಗದ್ದಲ ಎಲ್ಲಿ ಹೋಗಿ ಮುಟ್ಟುತ್ತೆ.. ಕೆ.ಜಿ.ಎಫ್ ಇನ್ಯಾವ ದಾಖಲೆಗಳನ್ನ ಹುಟ್ಟು ಹಾಕುತ್ತೆ, ಕನ್ನಡದ ಮೊದಲ ನೂರು ಕೋಟಿ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಕೆ.ಜಿ.ಎಫ್ ಪಾತ್ರವಾಗುತ್ತಾ,ಅನ್ನುವ ಪ್ರಶ್ನೆಗಳಿಗೆ ಉತ್ತರ ಇದೇ ಡಿಸೆಂಬರ್ ೨೧ಕ್ಕೆ ಸಿಗಲಿದೆ. ಅಲ್ಲಿವರೆಗೂ ಕಾಯಬೇಕಷ್ಟೇ.

LEAVE A REPLY

Please enter your comment!
Please enter your name here