ಶಾನ್ವಿ ಶ್ರೀವಾಸ್ತವ್. ಪಕ್ಕದ ರಾಜ್ಯದ ನಟಿಯಾದರು, ಕನ್ನಡದವಳೇ ಆಗಿರುವ ನಟಿ. ಕನ್ನಡವನ್ನ.. ಕರ್ನಾಟಕವನ್ನ.. ಅತೀವವಾಗಿ ಪ್ರೀತ್ಸುವ ಶಾನ್ವಿ, ಇದೀಗ.. ಕನ್ನಡದ ನಟ ಮತ್ತು ನಟಿಯರಿಗೆ ಸವಾಲ್ ಒಂದನ್ನ ಹಾಕಿದ್ದಾರೆ. ಹಾಗಂತ ಅಂಥದ್ದೇನಾಯ್ತು ಅಂತ ನೀವ್ ಗಾಬರಿಯಾಗಬೇಡಿ. ಯಾಕಂದ್ರೆ ಶಾನ್ವಿ ಹಾಕಿರೋದು ಹೆಲ್ತಿ ಚಾಲೆಂಜ್. ಯಸ್. ನಮ್ಮ ಸುತ್ತಮುತ್ತಲಿನ ಪರಿಸರ ಇತ್ತೀಚಿನ ದಿನಗಳಲ್ಲಿ ತುಂಬಾನೇ ಹಾಳಾಗ್ತಿದೆ. ಇದಕ್ಕೆ ಕಾರಣ ಪ್ಲಾಸ್ಟಿಕ್ ಬಳಕೆ. ಇದೇ ಕಾರಣಕ್ಕೆ, ’ನೋ ಸ್ಟ್ರಾ ಚಾಲೆಂಜ್ ಬೈ ಶಾನ್ವಿ’ ಅನ್ನುವ ಅಭಿಯಾನ ಆರಂಭ ಮಾಡಿದ್ದಾರೆ ಶಾನ್ವಿ.
ಹೌದು, ಸಾಮಾನ್ಯವಾಗಿ ತಂಪು ಪಾನಿಯಾಗಳನ್ನ ಕುಡಿಯಲು ಎಳನೀರು ಕುಡಿಯಲು ಬಹುತೇಕರು ಪ್ಲಾಸ್ಟಿಕ್ ಸ್ಟ್ರಾ ಗಳನ್ನು ಬಳಕೆ ಮಾಡುತ್ತೇವೆ. ಇನ್ನು ಮುಂದೆ ಅವುಗಳನ್ನ ಬಳಕೆ ಮಾಡದೆ ಎಳನೀರು ಕುಡಿಯುವ ಮೂಲಕ ಅಭಿಯಾನಕ್ಕೆ ಶಾನ್ವಿ ಚಾಲನೆ ನೀಡಿದ್ದಾರೆ. ಎಳನೀರು ಕುಡಿಯುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿರುವ ಶಾನ್ವಿ, ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ನಟಿ ರಾಧಿಕಾ ಪಂಡಿತ್, ಆಕಾಂಕ್ಷ ಸಿಂಗ್, ಸಂಯುಕ್ತ ಹೆಗಡೆ, ಶ್ರುತಿ ಹರಿಹರನ್, ಸೇರಿದಂತೆ ನಟರಾದ ಮನೋರಂಜನ್ ರವಿಚಂದ್ರನ್, ರಕ್ಷಿತ್ ಶೆಟ್ಟಿ ಇನ್ನು ಅನೇಕ ಸ್ನೇಹಿತರಿಗೆ ಸಲಹೆ ನೀಡಿದ್ದಾರೆ.
ಸದ್ಯ ಶಾನ್ವಿ ಹಾಕಿರುವ ಸವಾಲು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಯಾರೆಲ್ಲಾ ಚಾಲೆಂಜ್ ಸ್ವೀಕರಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.