ಕನ್ನಡ ಜನತೆಗೆ ಪತ್ರ ಬರೆದ ಪವರ್ ಸ್ಟಾರ್ – ನಾನು ಕಲಾವಿದ ರಾಜಕೀಯ ನನಗೆ ಗೊತ್ತಿಲ್ಲ

0
122

ಮಂಡ್ಯ ಲೋಕಸಭಾ ಚುನಾವಣಾ ಕಣ ಧಗಧಗಿಸುತ್ತಿದೆ. ಸುಮಲತಾ ಪರ ದರ್ಶನ್ & ಯಶ್ ಪ್ರಚಾರಕ್ಕಿಳಿದ ಬಳಿಕವಂತೂ ಇನ್ನೂ ಕಾವೇರಿದೆ. ಸ್ಥಿತಿ ಹೀಗಿರುವಾಗ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನನಗೂ ಮಂಡ್ಯಗೂ ಸಂಬಂಧವಿಲ್ಲ ಅನ್ನುವ ಮಾತುಗಳನ್ನಾಡಿದ್ದಾರೆ. ಹೌದು, ಅಸಲಿಗೆ ಅದ್ಯಾವಗ ದರ್ಶನ್ ಹಾಗೂ ಯಶ್ ಸುಮಲತಾ ಪರ ಪ್ರಚಾರದ ಕಣಕ್ಕಿಳಿದ್ರೋ, ಆಗ.. ಕೂತುಹಲ ಗರಿಗೇದರಿತ್ತು. ಕನ್ನಡ ಚಿತ್ರರಂಗದಿಂದ ಯಾರೆಲ್ಲಾ ಕಲಾವಿದರು ಸುಮಲತಾ ಪರ ನಿಲ್ತಾರೆ, ಪ್ರಚಾರ ಮಾಡ್ತಾರೆ ಅನ್ನುವ ಚರ್ಚೆ ನಡೆದಿತ್ತು. ಇಷ್ಟೇ ಅಲ್ಲ ಕುಮಾರಣ್ಣನ ಮಗ ನಿಖಿಲ್ ಪರ ಯಾರು ಪ್ರಚಾರಕ್ಕಿಳಿತಾರೆ ಅನ್ನುವ ಚರ್ಚೆನೂ ನಡೆದಿತ್ತು. ಇದೆಲ್ಲದ್ರ ನಡುವೆ ರಾಕ್ ಲೈನ್ ವೆಂಕಟೇಶ್ ಹೇಳಿಕೆನಿಂದ ಪುನೀತ್ ರಾಜ್ ಕುಮಾರ್ ಸುಮಲತಾ ಪರ ಇದ್ದಾರೆ, ಸುಮಲತಾಗೆ ಬೆಂಬಲ ಕೊಟ್ಟಿದ್ದಾರೆ ಅನ್ನುವ ಗೊಂದಲನೂ ಸೃಷ್ಠಿಯಾಗಿತ್ತು. ಹೀಗೆ ಸೃಷ್ಠಿಯಾದ ಗೊಂದಲ ಹಾಗೂ ವಾತಾವರಣವನ್ನ ಗಮನಿಸುತ್ತಾನೇ ಬಂದಿದ್ದ ಪುನೀತ್ ಇದೀಗ ಕರ್ನಾಟಕದ ಸಮಸ್ತ ಜನತೆಗೆ ಪತ್ರದ ಮೂಲಕ ಸಂದೇಶವನ್ನ ರವಾನಿಸಿದ್ದಾರೆ. ಈ ಮೂಲಕ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ ಪವರ್ ಸ್ಟಾರ್ ಪುನೀತ್.

ರಾಜಕೀಯಕ್ಕೆ ಬಳಸಿಕೊಳ್ಳಬೇಡಿ : ಪುನೀತ್
ಎಲ್ಲರಿಗೂ ನನ್ನ ನಮಸ್ಕಾರ. ನನಗೂ, ರಾಜಕೀಯಕ್ಕೂ ಯಾವ ಸಂಬಂಧವಿಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ. ನಾನು ಒಬ್ಬ ನಟನಾಗಿ ನನ್ನ ಕಲೆಯ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಹೊರತು ರಾಜಕಾರಣಿಯಗಲ್ಲ. ನಾನು ಹೇಳಬಯಸುವ ವಿಚಾರವೇನೆಂದರೆ ಮತ ಚಲಾಯಿಸುವುದುಪ್ರತಿಯೊಬ್ಬ ನಾಗರೀಕರ ಕರ್ತವ್ಯ ಹಾಗೂ ಅದು ಅವರವರ ಆಯ್ಕೆಗೆ ಬಿಟ್ಟಿದ್ದು. ಅದನ್ನು ಈ ದೇಶದ ನಾಗರೀಕನಾಗಿ ಗೌರವಿಸುತ್ತೇನೆ. ಕನ್ನಡ ಜನತೆಗೆ ಪ್ರಬುದ್ಧವಾಗಿ ಮತಚಲಾಯಿಸಿ ಎಂದು ಕೇಳಿಕೊಂಡಿದ್ದೇನೆ. ಇದು ಯಾವ ಪಕ್ಷಕ್ಕೂ ಅಥವಾ ವ್ಯಕ್ತಿಗೂ ಸೂಚಿಸುವುದಿಲ್ಲ. ಗೌರವಾನ್ವಿತ ದೇವೇಗೌಡರ ಕುಟುಂಬ ಹಾಗೂ ಅಂಬರೀಷ್ ಕುಟುಂಬ ಎರಡೂ ನಮ್ಮ ಕುಟುಂಬದಂತೆ. ಇಬ್ಬರೂ ನಮ್ಮ ಹಿತೈಷಿಗಳೇ, ಇಬ್ಬರಿಗೂ ಒಳ್ಳೆದಾಗಲಿ. ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಕೊಡಲಿ. ಆದರೆ ನನ್ನ ಹೆಸರನ್ನ ಚುನಾವಣೆಗೆ ಹಾಗೂ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ.

ಹಾಗ್ ನೋಡಿದ್ರೇ ರಾಜಕೀಯಕ್ಕೂ ದೊಡ್ಮನೆಗೂ ಮೊದಲಿಂದನೂ ಅಷ್ಟಕಷ್ಟೇ. ಡಾ.ರಾಜ್ ಅವ್ರಿಗೆ ಅದೆಷ್ಟೇ ಅವಕಾಶಗಳೂ ಇದ್ದರೂ, ರಾಜ್ ಯಾವತ್ತೂ ರಾಜಕೀಯಕ್ಕಿಳಿದವ್ರಲ್ಲ. ಇದೀಗ, ಪುನೀತ್ ಕೂಡಾ ತಂದೆ ಹಾಕಿ ಕೊಟ್ಟ ಹಾದಿಯಲ್ಲೇ ನಡೆಯುತ್ತಿದ್ದಾರೆ. ಕಲಾಸೇವೆ ಮುಖ್ಯ ಅನ್ನುವ ಮಾತುಗಳನ್ನಾಡಿದ್ದಾರೆ. ಪುನೀತ್ ಆಡಿದ ಇದೇ ಮಾತುಗಳೂ ಅಭಿಮಾನಿಗಳ ಸಂಭ್ರಮಕ್ಕೂ ಕಾರಣವಾಗಿವೆ. ಅಷ್ಟೇ ಅಲ್ಲ ಪುನೀತ್ ನಿಜಕ್ಕೂ ತಂದೆಗೆ ತಕ್ಕ ಮಗ ಅನ್ನುವ ಮಾತುಗಳಿಗೂ ಕಾರಣವಾಗಿದೆ.

LEAVE A REPLY

Please enter your comment!
Please enter your name here