ಕನ್ನಡ‌ ಚಿತ್ರರಂಗ ಕೇವಲ ನಾಲ್ಕು ಜನಕ್ಕಷ್ಟೆ ಸಿಮೀತವಲ್ಲ – ಪದ್ಮಿನಿ ಅಂಗಳದಲ್ಲಿ ಜಗ್ಗಣ್ಣನ ಮಾತು

0
252

ಪ್ರೀಮಿಯರ್ ಪದ್ಮಿನಿ. ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರ. ಆರಂಭದಿಂದ್ಲೂ ನಾನಾ ಕಾರಣಗಳಿಂದ ಸದ್ದು ಮಾಡ್ತಾನೇ ಬರ್ತಿರರುವ ಪ್ರೀಮಿಯರ್ ಪದ್ಮಿನಿ, ಇನ್ನೇನು ಏಪ್ರಿಲ್ 26ಕ್ಕೆ ಬಿಡುಗಡೆಯಾಗಲಿದೆ. ಹೀಗಿರುವಾಗ.. ಸದ್ದು ಹೆಚ್ಚಾಗ್ದೇ ಇದ್ದರೆ ಹೇಗೆ, ಸಿನಿಪ್ರಿಯರ ಕೂತುಹಲ ಹೆಚ್ಚಿಸ್ದೇ ಇದ್ದರೆ ಹೇಗೆ.. ಇದೇ ಕಾರಣಕ್ಕೋ ಏನೋ ಪ್ರೀಮಿಯರ್ ಪದ್ಮಿನಿ ಚಿತ್ರದ ಟ್ರೇಲರ್‌ನ ಇತ್ತೀಚಿಗೆ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಮಾತನಾಡಿದ ಜಗ್ಗೇಶ್, ಕನ್ನಡ ಚಿತ್ರರಂಗ ಅಂದ್ರೆ ಬರೀ ನಾಲ್ಕು ಜನಕ್ಕಷ್ಟೇ ಸೀಮಿತವಲ್ಲ ಅನ್ನುವ ಮಾತುಗಳನ್ನ ಭಾರವಾದ ಮನಸಿನಿಂದನೇ ಹೇಳಿದ್ದಾರೆ.

ಹೌದು, ಜಗ್ಗೇಶ್ ಹೇಳುವಂತೆ ಚಿತ್ರರಂಗ ಬೆಳೆಯುತ್ತಿದೆ. ಹೊಸ ಪ್ರತಿಭೆಗಳೂ ತಮ್ಮ ಪ್ರತಿಭೆ ಪ್ರದರ್ಶನ ಮಾಡ್ತಿದ್ದಾರೆ. ಹಾಗಾಗಿ, ಚೌಕಟ್ಟನ್ನ ದಾಟಿ ಕನ್ನಡಿಗರು ಎಲ್ಲರ ಸಿನಿಮಾ ನೋಡಬೇಕೆನ್ನೋದು ಜಗ್ಗೇಶ್ ಮಾಡಿಕೊಳ್ಳುವ ಕಳಕಳಿಯ ಮನವಿ. ಅಂದ ಹಾಗೇ, ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್‌ಗೆ ನಾಯಕಿಯರಾಗಿ ಸುಧಾರಾಣಿ ಹಾಗೂ ಮಧುಬಾಲಾ ಸಾಥ್ ನೀಡಿದ್ದಾರೆ. ಇನ್ನು ಇಂದಿನ ಜನರೇಶನ್‌ನ ಜೋಡಿಯಾಗಿ ಚಿತ್ರದಲ್ಲಿ ಹಿತಾ ಚಂದ್ರಶೇಖರ್ ಪ್ರಮೋದ್ ಹಾಗೂ ವಿವೇಕ್ ಇದ್ದಾರೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಶ್ರುತಿ ನಾಯ್ಡು ನಿರ್ಮಾಣದ ಪ್ರೀಮಿಯರ್ ಪದ್ಮಿನಿಗೆ ರಮೇಶ್ ಇಂದಿರಾ ನಿರ್ದೇಶನವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಯೋಗರಾಜ್ ಭಟ್, ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯವಿದೆ. ಸದ್ಯ, ಟ್ರೇಲರ್ ಮೂಲಕ ಭರವಸೆಗಳನ್ನ ಇಮ್ಮಡಿಗೊಳಿಸಿರುವ ಪ್ರೀಮಿಯರ್ ಪದ್ಮಿನಿ ಚಿತ್ರ ಇದೇ ಏಪ್ರಿಲ್ 26ಕ್ಕೆ ಬಿಡುಗಡೆಯಾಗಲಿದೆ. ಅಲ್ಲಿವರೆಗೂ ಟ್ರೇಲರ್ ನೋಡಿ, ಹಾಡು ಕೇಳಿ.. ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here