ಕನ್ನಡದ ಕೋಟ್ಯಾಧಿಪತಿಗೆ ನೋ ಅಂದ ಯಶ್ – ಇದಕ್ಕೆ ಕಾರಣ ಏನು ಗೋತ್ತಾ…?

0
683

ಕನ್ನಡದ ಕೋಟ್ಯಾಧಿಪತಿ. ಕನ್ನಡದ ಓನ್ ಆಪ್ ದಿ ಪಾಪ್ಯುಲರ್ ಟಿವಿ ಶೋ. ಪವರ್ ಸ್ಟಾರ್ ಪುನೀತ್ ಪವರ್‌ಫುಲ್ ನಿರೂಪಣೆ.. ಕೋಟ್ಯಾಧಿಪತಿಯ ಜೀವಾಳ. ಹೀಗಿದ್ದೂ.. ಇತ್ತೀಚಿನ ದಿನಗಳಲ್ಲಿ ಒಂದು ಸುದ್ದಿ ಎಲ್ಲಡೆ ಕೇಳಿ ಬರ್ತಿ ದೆ. ಅದೇ.. ಪುನೀತ್ ಬದಲು ಯಶ್ ಕನ್ನಡದ ಕೋಟ್ಯಾಧಿಪತಿಯನ್ನ ಇನ್ಮುಂದೆ ನಡೆಸಿಕೊಡಲಿದ್ದಾರೆ ಅನ್ನೋದು. ಆದ್ರೆ ಇದು ಎಷ್ಟರ ಮಟ್ಟಿಗೆ ನಿಜಾ,

ಹೀಗೊಂದು ಪ್ರಶ್ನೆ ಎದ್ದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ. ಹೌದು, ಖುದ್ದು ರಾಕಿಂಗ್ ಸ್ಟಾರ್ ಯಶ್ ಹೇಳುವಂತೆ ಕನ್ನಡದ ಕೋಟ್ಯಾಧಿಪತಿ ನಡೆಸಿಕೊಡುವಂತೆ ಸಂಬಂಧ ಪಟ್ಟವರು ಕೇಳಿರೋದು, ಸಂಪರ್ಕಿಸಿರೋದು ನಿಜ. ಇದಕ್ಕಾಗಿ ಕೋಟಿ ಕೋಟಿ ಸಂಭಾವನೆ ಕೊಡಲು ಬಂದಿದ್ದು ನಿಜ. ಹಾಗಂತ, ಯಶ್ ನಿರೂಪಣೆಗೆ ಒಪ್ಪಿಕೊಂಡಿದ್ದಾರೆ ಅಂತ ಅನ್ಕೊಳ್ಳೋ ಹಾಗಿಲ್ಲ.

ಯಾಕಂದ್ರೆ.. ಯಶ್, ಬಂದಿರುವ ಆಫರ್‌ನ್ನ ಸರಾಸಗಟವಾಗಿ ತಿರಸ್ಕರಿಸಿದ್ದಾರೆ. ನೋ ಅಂತ ಕ್ಲಿಯರ್ ಆಗಿ ಹೇಳಿದ್ದಾರೆ. ಇದಕ್ಕೆ ಕಾರಣ ಸಿನಿಮಾ. ಯಸ್. ಸಿನಿಮಾ. ನಿಮಗೆ ಗೊತ್ತಿರಲಿ ಯಶ್‌ಗೆ ಸಿನಿಮಾ ಅಂದ್ರೆ ಪ್ರೀತಿ. ಮೂರೊತ್ತು ಸಿನಿಮಾ ಆರಾಧನೆ ಮಾಡುವ ಯಶ್, ವರ್ಷಕ್ಕೆರಡು ಸಿನಿಮಾ ಮಾಡುವ ಉಮೇದಿಯನ್ನ ಹೊಂದಿದ್ದಾರೆ. ಹೀಗಿದ್ದೂ.. ಎರಡು ವರ್ಷಗಳಾಗ್ತಾ ಬಂದ್ರು ಇವ್ರ ಸಿನಿಮಾಗಳು ಬಂದಿಲ್ಲ. ಇದಕ್ಕೆ ಕಾರಣ ಕೆ.ಜಿ.ಎಫ್.

ಕೆ.ಜಿ.ಎಫ್‌ಗಾಗಿ ತುಂಬಾನೇ ಶ್ರಮ ಹಾಕ್ತಿರುವ ಯಶ್, ಕೆ.ಜಿ.ಎಫ್ ಮುಗಿದ ಬೆನ್ನಲ್ಲೇ ರಾಣಾ ಮಾಡಲಿದ್ದಾರೆ. ಇನ್ನು ರಾಣಾ ಬಳಿಕ ಮಫ್ತಿಯ ನರ್ತನ್ ನಿರ್ದೇಶನದ ಸಿನಿಮಾ ಸರತಿಯಲ್ಲಿದೆ. ಇನ್ನು, ನಿರೂಪಣೆ ಮಾಡೋದು ನಾಟ್ ಈಸಿ ಜಾಬ್. ಅದಕ್ಕೆ ಅದ್ರದ್ದೇ ಆದ ಟೈಮ್ ಹಿಡಿಯುತ್ತೆ. ಅದ್ರದ್ದೇ ಪರಿಶ್ರಮವಿರುತ್ತೆ. ಇವೆಲ್ಲಾ ಕಾರಣಗಳಿಂದ ಕನ್ನಡದ ಕೋಟ್ಯಾಧಿಪತಿಯಾಗಲು ಯಶ್ ನಿರಾಕರಿಸಿದ್ದಾರೆ. ಇನ್ನು ಯಶ್, ಹಿಂದೆ ಸರಿದಿದ್ದರಿಂದ.. ಇನ್ಯಾರು ಕಾರ್ಯಕ್ರಮ ನಡೆಸಿಕೊಡ್ತಾರೆ ಅನ್ನುವ ಕೂತುಹಲ ಸದ್ಯ ಎಲ್ಲರಲ್ಲೂ ಇದೆ.

LEAVE A REPLY

Please enter your comment!
Please enter your name here