ಓಳ್ಳೆ ಸಿನಿಮಾ‌ ಬೇಕು ಬೇಕು ಅಂತಿದ್ರಲ್ವ – ಬಂದಿದೆ ನೋಡಿ ಗುಳ್ಟು ಮಿಸ್ಸ್ ಮಾಡದೆ ನೋಡಿ

0
795

ಗುಳ್ಟು ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಪ್ರೇಕ್ಷಕರ ಮನಸು ಮುಟ್ಟಿದೆ. ಹೌದು, ಗುಳ್ಟು.. ಇತ್ತೀಚಿನ ದಿನಗಳಲ್ಲಿ ಬಂದ ಓನ್ ಆಪ್ ದಿ ಬೆಸ್ಟ್ ಸಿನಿಮಾ. ಕಂಪ್ಯೂಟರ್ ಇನ್ಸ್‌ಟಿಟ್ಯೂಟ್‌ನಲ್ಲಿ ಕೆಲಸ ಮಾಡಿಕೊಂಡು ಕಾಫಿ ಡೇನಲ್ಲೂ ಪಾರ್ಟ್ ಟೈಂ ನೌಕರಿ ಮಾಡುವ ಹುಡುಗ. ಇಂತಹ ಹುಡುಗನಿಗೆ ಸೈಬರ್ ಸೆಂಟರ್ ನಡೆಸುವ ಮತ್ತೊಬ್ಬ ರೂಂ ಮೇಟ್. ನಾಯಕನೊಟ್ಟಿಗೆ ಇರುವ ರೂಂಮೇಟ್‌ಗೆ ಬೆಳೆದ್ರೆ ಅಂಬಾನಿಯಂತೆ ಬೆಳಿಬೇಕು ಅನ್ನುವ ಕನಸು. ಇದಕ್ಕೆ ತದ್ವಿರುದ್ಧ ವ್ಯಕ್ತಿತ್ವ ನಾಯಕನದ್ದು. ಹಾಗಾಗಿ, ಮೊದಲ ಭಾಗದಲ್ಲಿ ನಡೆಯುವ ಕ್ರೈಮ್‌ಗಳೆಲ್ಲಾ.. ಬೊಟ್ಟು ಮಾಡೋದು ಸೈಬರ್ ಸೆಂಟರ್ ಹುಡುಗನತ್ತನೇ. ಮೊದಲ ಭಾಗದಲ್ಲಿ ಪ್ರೀತಿ,ಪ್ರೇಮ,ಪ್ರಣಯ, ಹಾಡು,ಮೂಡು ಅಂತ ಸಾಗುವ ಗುಳ್ಟು, ಎರಡನೇ ಭಾಗ.. ಅನೇಕ ಅಚ್ಚರಿಗಳನ್ನ ಮೂಡಿಸುತ್ತೆ.

ಸೀಟಿನ ತುದಿಗೆ ಕರೆದೊಯ್ಯುತ್ತೆ. ಸೈಬರ್ ಲೋಕದ ಕರಾಳ ಕಥೆಯ ಇಂಚಿಂಚು ಪದರು ಅನಾವರಣಗೊಳಿಸುತ್ತೆ.
ಸುಧಾರ್ (ಆಧಾರ್!) ಹೆಸರಿನಲ್ಲಿ ಸರ್ಕಾರ ಸಂಗ್ರಹಿಸಿರುವ ದೇಶದ ಜನರ ಡಿಟೇಲುಗಳನ್ನು ಹೊಂದಿದ ಡೇಟಾವನ್ನು ಎಲ್ಲೋ ಕೂತು ಹ್ಯಾಕ್ ಮಾಡಿ ಕದ್ದರೆ ಏನೇನು ಯಡವಟ್ಟಾಗಬಹುದು..? ಅಧಾರ್‌ನಲ್ಲಿರುವ ಬೆರಳಚ್ಚು ಬಳಸಿ ಎಂತೆಂಥವರನ್ನೆಲ್ಲಾ ಬ್ಲಾಕ್ ಮೇಲ್ ಮಾಡಬಹುದು. ಮಾಹಿತಿ ಸೋರಿಕೆ ಮಾಡಿಯೂ ಕಾನೂನಿನ ಕಣ್ಣಿಗೆ ಹೇಗೆ ಮಣ್ಣೆರಚಬಹುದು? ಇಂತಾ ಹತ್ತಾರು ವಿವರಗಳು ‘ ಗುಳ್ಟು’ ಎಂಬ ಸಿನಿಮಾದಲ್ಲಿ ನಿಮಗೆ ಸಿಗ್ತಾವೆ.

ಪೂರ್ತಿ ಗುಳ್ಟುದಲ್ಲಿ ಒಂದು ಸೀನನ್ನೂ ನೀವ್ ಪ್ರಿಡಿಕ್ಟ್ ಮಾಡಲು ಆಗಲ್ಲ ಅಷ್ಟರ ಮಟ್ಟಿಗೆ ಚಿತ್ರಕಥೆಯನ್ನ ಇಲ್ಲಿ ಹೆಣೆಯಲಾಗಿದೆ.
ಇನ್ನು ಚಿತ್ರದ ಪಾತ್ರವರ್ಗ ಮತ್ತು ಅಭಿನಯದ ವಿಚಾರಕ್ಕೆ ಬಂದ್ರೆ ನವೀನ್ ಶಂಕರ್ ತೀರಾ ಸಹಜವಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನಾಯಕಿ ಸೋನು ಗೌಡ ನಿಮ್ಮ ಮನ ಗೆಲ್ಲುತ್ತಾರೆ. ಕಾಡುತ್ತಾರೆ. ಇದು ಸೋನು ಇಲ್ಲಿತನ್ಕದ ವೃತ್ತಿಯ ಬೆಸ್ಟ್ ಸಿನಿಮಾ. ಇನ್ನು ಸಿನಿಮಾದಲ್ಲಿ ಬರುವ ಬಹುತೇಕ ಪಾತ್ರಧಾರಿಗಳು ಹೊಸಬರಾದರೂ ನಿಮಗೆ ಹೊಸಬರು ಅನ್ಸಲ್ಲ. ಅಷ್ಟರ ಮಟ್ಟಿಗಿನ ಅಭಿನಯ ಮಾಡಿದ್ದಾರೆ ಎಲ್ಲರು.

ಇನ್ನು ಸಿನಿಮಾದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಶ್ರಮವನ್ನ ಇಲ್ಲಿ ಕಡೆಗಣಿಸುವ ಹಾಗೇ ಇಲ್ವೇ ಇಲ್ಲ. ತಮ್ಮ ಕನಸಿನ ಸಿನಿಮಾದ ಪ್ರತಿಯೊಂದು ಎಲಿಮೆಂಟ್ಸನ್ನ ಚೆಂದವಾಗಿಸಿದ್ದಾರೆ
ಜನಾರ್ಧನ್ ಚಿಕ್ಕಣ್ಣ. ಇದಕ್ಕೆ ಕಾರಣ ಹಗಲಿರುಳು ಇವರು ಮಾಡಿದ್ದ ಕನವರಿಕೆ ಇದ್ದರೂ ಇರಬಹುದು. ಲೂಸಿಯಾ ಪವನ್ ಚಿತ್ರದ ಮತ್ತೊಂದು ಅಟ್ರ್ಯಾಕ್ಷನ್. ಅವಿನಾಶ್ ಮತ್ತು ರಂಗಾಯಣ ರಘು ಇಬ್ಬರೂ ಅಚ್ಚು ಕಟ್ಟಾಗಿ ತಮ್ಮ ಪಾತ್ರ ನಿಭಾಯಿಸಿದ್ದಾರೆ. ಒಟ್ನಲ್ಲಿ
ಗುಳ್ಟು ಸಿನಿಮಾ ಎಲ್ಲರೂ ನೋಡಲೇ ಬೇಕಾದ ಸಿನಿಮಾ. ಇಂತಹ ಓಳ್ಳೇ ಸಿನಿಮಾನ ಕನ್ನಡದ ಜನ ಗೆಲ್ಲಿಸದಿದ್ದರೆ, ಇನ್ನೇನನ್ನೂ ಹೇಳಲು ಅಸಾಧ್ಯ. ಹೋಗಿ ನೋಡಿ ಗುಳ್ಟು ನಿಮಗೆ ಖಂಡಿತ ಇಷ್ಟವಾಗೇ ಆಗುತ್ತೆ. ಮನಸ್ಸು ಗೆದ್ದೇ ಗೆಲ್ಲುತ್ತೆ. 

LEAVE A REPLY

Please enter your comment!
Please enter your name here