ಓಟು ಹಾಕೋಕು‌ ಮುಂಚೆ ಭಟ್ಟರ ಹಾಡು ಕೇಳಿ – ಇದು ಎಲೆಕ್ಷನಿಗಾಗಿ ಭಟ್ಟರ ಸ್ಪೆಶೆಲ್

0
220

ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ವಿಕಟ ಕವಿ. ಡೈಲಾಗ್ & ಮುದ್ದಾದ ಪ್ರೇಮಕಥೆಗಳ ಮೂಲಕವೇ ಮನಸಿಗೆ ಹತ್ತಿರವಾಗುವ, ಇಂದಿನ ಜನರೇಶನ್ನಿಗೆ ಇಷ್ಟವಾಗುವ ಭಟ್ರು, ಇದೀಗ.. ಎಲೆಕ್ಷನ್‌ಗೆ ಸಾಂಗ್ ಗೀಚಿದ್ದಾರೆ. ಹೌದು, ಕರ್ನಾಟಕ ವಿಧಾನ ಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ಇಂತಹ ಹೊತ್ತಿನಲ್ಲಿ ಭಟ್ರಿಗೆ ಚುನಾವಣೆಗೆ ಹಾಡು ಬರೆಯುವ ಆಹ್ವಾನ ಬಂದಿದೆ. ಅದು, ಚುನಾವಣಾ ಆಯೋಗದಿಂದನೇ ಅನ್ನೋದು ವಿಶೇಷ.

ಹಾಗಾಗಿ, ಹಾಡು ಬರೆಯಲು ಒಪ್ಪಿಕೊಂಡಿರುವ ಯೋಗರಾಜ್ ಭಟ್ರಿಗೆ ಇಲ್ಲಿ ಸಂಗೀತ ನಿರ್ದೇಶಕ ಹರಿಕೃಷ್ಣ & ಕೊರಿಯೋಗ್ರಾಫರ್ ಇರ್ಮಾನ್ ಸರ್ದಾರಿಯಾ ಸಾಥ್ ನೀಡುತ್ತಿದ್ದಾರೆ. ಮೀಡಿಯಾ ಕನೆಕ್ಟ್ ಸಂಸ್ಥೆ ಇದನ್ನ ನಿರ್ಮಾಣ ಮಾಡ್ತಿದೆ. ಇನ್ನು ಮತ ಚುನಾವಣೆ ಮಾಡುವಂತೆ ಸೆಳೆಯಲು ಮಾಡಲಾಗ್ತಿರುವ ಹಾಡಿನ ಚಿತ್ರೀಕರಣವನ್ನೂ ಭಟ್ರು ಸದ್ಯ ಆರಂಭ ಮಾಡಿದ್ದಾರೆ. ಇದಕ್ಕಾಗಿ ರಾಜ್ಯವನ್ನೂ ಸುತ್ತಲಿದ್ದಾರೆ ಭಟ್ರು. ಅಂದ ಹಾಗೇ ಭಟ್ರು ಈ ತರಹದ ಹಾಡುಗಳನ್ನ ಬರಿತಿರೋದು ಇದು ಮೊದಲೇನಲ್ಲ ಅನ್ನೋದು ನಿಮಗೆ ಗೊತ್ತಿರಲಿ. ಹಿಂದೆನೂ ಅನೇಕ ಸಲ ಭಟ್ರು ಎಕ್ಸಾಂ,ಎಲೆಕ್ಷನ್ ಸಂಬಂಧ ಪಟ್ಟಂತೆ ಹಾಡುಗಳನ್ನ ಬರೆದಿದ್ದಾರೆ. ಪ್ರೇಕ್ಷಕರನ್ನ ರಂಜಿಸಿದ್ದಾರೆ. ಏನೇ ಇರ್ಲಿ.. ಸದ್ಯ ಓಟು ಹಾಕಿ ಅಂತ ತಮ್ಮದೇ ಶೈಲಿಯಲ್ಲಿ ಹೇಳಲು ಸಿದ್ಧವಾಗಿರುವ ಭಟ್ರು, ಯಾವ ರೀತಿಯಲ್ಲಿ ಪದಗಳನ್ನ ಇಲ್ಲಿ ಪೋಣಿಸುತ್ತಾರೆ ಅನ್ನೋದು ಸದ್ಯದ ಕೂತುಹಲ

LEAVE A REPLY

Please enter your comment!
Please enter your name here