ಒಂದೇ‌ ವೇದಿಕೆಯಲ್ಲಿ ಚಂದನ್ ಶೆಟ್ಟಿ ಹಾಗೂ ಆಲೋಕ್ ಹಾವಳಿ – ಇದು ಕಿರಿಕ್ ಕೀರ್ತಿ ಮಾಡಿರೋ ಕೆಲಸ

0
483

ಕೀರ್ತಿ. ಕಿರಿಕ್ ಕೀರ್ತಿ ಅಂತನೇ ಚಿರಪರಿಚಿತ. ಪಕ್ಕಾ ಕನ್ನಡದ ಕಟ್ಟಾಳು ಆಗಿರುವ ಕಿರಿಕ್ ಕೀರ್ತಿಯ ಹಾವಳಿ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗ್ ಬಿಟ್ಟಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇವ್ರ ಹಾವಳಿಯಲ್ಲಿ ಇವ್ರಿಗೆ ಚಂದನ್ ಶೆಟ್ಟಿನೂ ಸಾಥ್ ಕೊಟ್ಟಿದ್ದಾರೆ. ಅಯ್ಯೋ, ಇಬ್ಬರು ಸೇರಿ ಅಂತಹದ್ದೇನ್ ಮಾಡಿದ್ರು ಅಂತ ನೀವ್ ಯೋಚ್ನೇ ಮಾಡೋ ಮೊದಲು ವಿಷಯ ಹೇಳ್ ಬಿಡ್ತೀವಿ ಕೇಳಿ. ಅಸಲಿಗೆ ಕಿರಿಕ್ ಕೀರ್ತಿ & ಚಂದನ್ ಶೆಟ್ಟಿ ಹಾವಳಿ ನಡಿತಿರೋದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಯಸ್, ಕೀರ್ತಿ & ಚಂದನ್ ಸೇರಿ ಹಾವಳಿ ಅನ್ನುವ ಹೆಸರಿನಲ್ಲಿ ಕಾನ್ಸರ್ಟ್ ಮಾಡ್ತಿದ್ದಾರೆ. ಇದು ಪಕ್ಕಾ ಕನ್ನಡದ ಹಾವಳಿ. ಇಲ್ಲಿ ಚಂದನ್ ಗಾನ ಸುಧೆ ಇರಲಿದೆ. ಇಷ್ಟೇ ಅಲೋಕ್ ಅಲಿಯಾಸ್ ಆಲ್ ಓಕೆಯ ಗಾನ ಬಜಾನಾನೂ ಇರಲಿದೆ.

ಇಷ್ಟೇ ಅಲ್ಲ ಕೀರ್ತಿ ನಿಮ್ಮನ್ನ ನಗಿಸಲಿದ್ದಾರೆ. ಸೋ, ಸಂಗೀತ ಇಷ್ಟಪಡೋರಿಗೆ, ಅದ್ರಲ್ಲೂ ಕೀರ್ತಿ, ಚಂದನ್ ಮತ್ತು ಅಲೋಕ್‌ನ ಫಾಲೋ ಮಾಡೋ ಕನ್ನಡ ಅಭಿಮಾನಿಗಳಿಗೆ ಇದು ಪರ್ಫೆಕ್ಟ್ ಕಾನ್ಸರ್ಟ್. ಅಂದ ಹಾಗೇ ಮೂವರು ಸೇರಿ ಮಾಡ್ತಿರುವ ಹಾವಳಿಗೆ ಶಿವಣ್ಣ & ಧನಂಜಯ್ ಕೂಡಾ ಸಾಥ್ ನೀಡಿದ್ದಾರೆ. ಹಾವಳಿ ಎಂಜಾಯ್ ಮಾಡಿ ಅಂದಿದ್ದಾರೆ. ಅಷ್ಟೇ ಅಲ್ಲ.. ಇಬ್ಬರು ಕೀರ್ತಿ.ಚಂದನ್ ಮತ್ತು ಅಲೋಕ್ ಹಾವಳಿಯನ್ನ ನಿಮ್ಮ ಜೊತೆ ಕುಂತು ಕಣ್ತುಂಬಿಕೊಳ್ಳಲಿದ್ದಾರೆ. ಏನೇ ಇರ‍್ಲಿ.. ಹಾವಳಿ ನಾಳೆನೇ ನಡೆಯಲಿದೆ. ಬೆಂಗಳೂರಿನ ನಾಗವಾರದ ಬಳಿ ಇರುವ ಮಾನ್ಯತಾ ಟೆಕ್ ಪಾರ್ಕ್ ಆವರಣ ಇದಕ್ಕೆ ಸಾಕ್ಷಿಯಾಗಲಿದೆ. ನೀವ್ ಇನ್ನು ಟಿಕೇಟ್ ಬುಕ್ ಮಾಡಿಲ್ಲ ಅಂದ್ರೆ ಮಾಡ್ಬಿಡಿ.

LEAVE A REPLY

Please enter your comment!
Please enter your name here