ಐಟಿ ರೈಡ್ನಿಂದ ಬಯಲಾಯ್ತು ದೊಡ್ಡ ಸಿನಿಮಾಗಳ ಅಸಲಿ ಗಳಿಕೆ – ರಾಜಕುಮಾರ ಹಾಗೂ ಕೆಜಿಎಫ್ ನಂ1

0
80

ಕಂಡು ಕೇಳರಿಯದ ಐ.ಟಿ.ದಾಳಿ, ಕನ್ನಡ ಚಿತ್ರರಂಗದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತೆ ಅನ್ನುವ ಮಾತು, ಇದೀಗ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರ್ತಿದೆ. ನಿಮಗೆ ಗೊತ್ತಿರಲಿ, ಅಸಲಿಗೆ ಹಿಂದೆ ಎಲ್ಲಾ ಕನ್ನಡ ಚಿತ್ರಗಳ ನಿರ್ಮಾಣದ ವೆಚ್ಚವನ್ನ, ನಿರ್ಮಾಪಕರು ಗೌಪ್ಯವಾಗಿ ಇಡುತ್ತಿದ್ದರು. ಇನ್ನೂ, ಸಿನಿಮಾದ ಗಳಿಕೆಯ ಬಗ್ಗೆಯಂತೂ ತುಟಿಪಿಟಕ್ ಅನ್ನುತ್ತಿರಲಿಲ್ಲ. ಸಿನಿಮಾದ ಗಳಿಕೆ ಎಷ್ಟಾಯ್ತು ಅನ್ನುವ ಲೆಕ್ಕವನ್ನೂ ಕೊಡಲು ಹಿಂದೇಟು ಹಾಕ್ತಿದ್ದ ನಿರ್ಮಾಪಕರು, ಲಾಭ ಆಗಿದ್ದರೂ ಹೇಳುತ್ತಿದ್ದಿದ್ದು ನಷ್ಟವನ್ನೇ. ಇನ್ನೂ ಇದಕ್ಕೆ ಸಾಕ್ಷಿ ಅನ್ನುವಂತೆ ಇದೀಗ ಐ,ಟಿ ಬಲೆಯಲ್ಲಿ ಸಿಲುಕಿದ ಹೊಂಬಾಳೆ ಸಂಸ್ಥೆ, ತಾವೇ ನಿರ್ಮಿಸಿದ್ದ ರಾಜಕುಮಾರ ಚಿತ್ರದ ಗಳಿಕೆಯನ್ನ ಇಲ್ಲಿವರೆಗೂ ಬಾಯ್ ಬಿಟ್ಟಿಲ್ಲ. ಕೇಳಿದ್ರೇ ಲಾಭವಾಗಿದೆ. ಕನ್ನಡದ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಅನ್ನುವ ಹೆಗ್ಗಳಿಕೆಗೆ ರಾಜಕುಮಾರ ಪಾತ್ರವಾಗಿದೆ ಅಂಥನೇ ಹೇಳಿಕೊಂಡು ಬಂದಿದ್ದ ಹೊಂಬಾಳೆ ಸಂಸ್ಥೆ, ಕೆ.ಜಿ.ಎಫ್ ವಿಚಾರದಲ್ಲಿ ಹಣ ಗಳಿಕೆಯನ್ನ ಮುಚ್ಚಿಡಲು ಸಾಧ್ಯವಾಗಲೇ ಇಲ್ಲ.

ಹೌದು, ನಿಮಗೆ ಗೊತ್ತಿರಲಿ.. ಬಿಡುಗಡೆಗೂ ಮುನ್ನ, ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್, ಕೆ.ಜಿ.ಎಫ್ ಕನ್ನಡದ ಕಾಸ್ಟ್ಲೀ ಸಿನಿಮಾ ಅನ್ನುವ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲ ಕೆ.ಜಿ.ಎಫ್‌ಗಾಗಿ ಐವತ್ತು ಕೋಟಿಗೂ ಅಧಿಕ ಮೊತ್ತ ಖರ್ಚಾಗಿದೆ ಅಂಥನೂ ಅಂದಿದ್ದರು. ಇನ್ನೂ ಸಿನಿಮಾ ದೇಶಾಂದ್ಯತ ಬಿಡುಗಡೆಯಾಗಿದ್ದರಿಂದ ಗಳಿಸಿದ ಹಣದ ವಿಚಾರ, ಎಲ್ಲರಿಗೂ ಸರಾಗವಾಗಿ ಗೊತ್ತಾಗುವಂತಾಯ್ತು. ಸಿನಿಮಾ 150ಕೋಟಿ ಲೂಟಿ ಮಾಡಿದೆ ಅನ್ನುವದೂ ಜಗಜ್ಜಾಹೀರಾಯ್ತು. ಇದುವೇ ಐ,ಟಿ.ಅವ್ರ ಕಣ್ಣು ಅರಳುವಂತೆ ಮಾಡಿದ್ದು. ಐವತ್ತು ಕೋಟಿಗೂ ಅಧಿಕ ಹಣಹೂಡುವಷ್ಟು ಹಣ ಕನ್ನಡ ಚಿತ್ರರಂಗದಲ್ಲಿದೆಯಾ ಅನ್ನುವ ಅನುಮಾನಕ್ಕೂ ಕಾರಣವಾಗುವಂತೆ ಮಾಡ್ತು.ಇದೆಲ್ಲದ್ರಿಂದ ಇದೀಗ ಐ,ಟಿ.ದಾಳಿ ನಡೆದಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣಕ್ಕಿಳಿಯುವದು ಅನುಮಾನ ಅನ್ನುವಂತ ಸ್ಥಿತಿ ಇದೀಗ ನಿರ್ಮಾಣವಾಗಿದೆ. ಅಪ್ಪಿ ತಪ್ಪಿ ಮಾಡಿದ್ರೂ ಯಾರೂ ತಮ್ಮ ಸಿನಿಮಾಗೆ ಹಾಕಿದ ಅಸಲಿ ಬಂಡವಾಳದ ಕಥೆಯನ್ನ ಹೇಳಲು ಹಿಂದೇಟು ಹಾಕೋದು ಖಾತ್ರಿ. ಇನ್ನೂ ಗಳಿಕೆ ವಿಚಾರದಲ್ಲಿ ಮೊದಲಿನ ಗೌಪ್ಯತೆಯನ್ನೂ ಚಿತ್ರರಂಗ ಕಾಪಾಡಿಕೊಂಡ್ರೇ ಅಚ್ಚರಿ ಇಲ್ಲ. ಒಟ್ನಲ್ಲಿ ಐ.ಟಿ. ದಾಳಿ ಕನ್ನಡ ಚಿತ್ರರಂಗದ ನಿದ್ದೆಯನ್ನೇ ಹಾಳುಗೆಡವಿದೆ. ಚಿತ್ರರಂಗ, ಇನ್ಯಾವತ್ತು ಬಂಡವಾಳ ಹಾಕಿರುವ ವಿಚಾರ, ಬಂಡವಾಳ ವಾಪಸ್ಸಾದ ವಿಚಾರ ಹೇಳಲು ಹಿಂದೇಟು ಹಾಕುವಂತೆನೂ ಮಾಡಿದೆ. ಎಲ್ಲದ್ರ ಪರಿಣಾಮ ಅನ್ನುವಂತೆ ಗಡಿ ದಾಟಿ ಕನ್ನಡದ ಕಹಳೆ ಊದುತ್ತಿದ್ದ ಚಿತ್ರರಂಗ, ಮತ್ತೆ ಕರ್ನಾಟಕಕಷ್ಟೇ ಸೀಮಿತವಾಗುತ್ತಾ, ಗಡಿ ಮೀರಿ ಗಳಿಕೆ ಮಾಡುವಂಥ ಸಿನಿಮಾಗಳೂ ಬರುತ್ತಾವಾ, ಇಲ್ವಾ ಅನ್ನುವ ಭೀತಿನೂ ಕನ್ನಡದ ಸಿನಿಪ್ರೇಮಿಗಳನ್ನ ಆವರಿಸಿಕೊಂಡಿದೆ.

LEAVE A REPLY

Please enter your comment!
Please enter your name here