ಐಟಿ ದಾಳಿ ಬಗ್ಗೆ ರವಿಮಾಮ ಹೇಳಿದ ಸತ್ಯ – ಕ್ರೇಜಿಸ್ಟಾರ್ ಮನೆಗೆ ಬಂದಿದ್ದರಂತೆ ಐಟಿ ಆಫೀಸರ್ಸ್

0
61

ಕನ್ನಡ ಚಿತ್ರರಂಗ ಇತ್ತೀಚಿಗೆ ಬೆಚ್ಚಿ ಬಿದ್ದಿತ್ತು. ಇದಕ್ಕೆ ಕಾರಣ ಐ.ಟಿ ದಾಳಿ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ನಡೆದ ಇದೇ ದಾಳಿ, ಅನೇಕ ಚರ್ಚೆಗೂ ಕಾರಣವಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಹೀಗೆಲ್ಲಾ ದುಡ್ಡು ಇದೆಯಾ ಅನ್ನುವ ಮಾತುಗಳಿಗೂ ಕಾರಣವಾಗಿತ್ತು. ಇನ್ನೂ ಇದೇ ವೇಳೆ ಬರೀ ದೊಡ್ಡ ಸಿನಿಮಾಗಳಿಗೆ ಸಂಬಂಧ ಪಟ್ಟವರ ಮೇಲಷ್ಟೇ ದಾಳಿ ನಡೆದಿದೆ, ಇನ್ನುಳಿದವ್ರ ಮನೆ ಮೇಲೆ ದಾಳಿ ಯಾಕೆ ನಡೆದಿಲ್ಲ ಅನ್ನುವ ವಾದ ವಿವಾದನೂ ನಡೆದಿತ್ತು. ಇದೀಗ ಮೊನ್ನೆ ಗಾಂಧಿನಗರದ ಬಾಗಿಲು ಬಡಿದಿದ್ದ ಐ.ಟಿ. ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮನೆ ಬಾಗಿಲು ಬಡಿದಿದ್ದರು ಅನ್ನುವ ಬಹುತೇಕರಿಗೆ ಗೊತ್ತಿರದ ಸತ್ಯ ಹೊರ ಬಂದಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇಂಥಹದ್ದೊಂದು ಸತ್ಯ ನುಡಿದಿದ್ದು ಖುದ್ದು ರವಿಮಾಮಾನೇ.

ಯಸ್, ಅದು.. ರವಿಚಂದ್ರನ್ ಮೊರೊತ್ತು ಸಿನಿಮಾ ಕನಸು ಕಾಣುತ್ತಿದ್ದ ದಿನಗಳು. ಕಣ್ತುಂಬ ಕನಸು ತುಂಬಿಕೊಂಡು, ಸಿನಿಮಾ ಧ್ಯಾನವನ್ನೇ ಮಾಡ್ತಿದ್ದ ರವಿಚಂದ್ರನ್ ಮನೆ ಮೇಲೆ ಇಪ್ಪತ್ತು ವರ್ಷದ ಹಿಂದೆ ಐ.ಟಿ.ದಾಳಿಯಾಗಿತ್ತು. ಆಗ, ಮನೆಯನ್ನೆಲ್ಲಾ ಹುಡುಕಾಡಿದ ಐ.ಟಿ.ಅಧಿಕಾರಿಗಳಿಗೆ, ಸಿಕ್ಕಿದ್ದಾದ್ರೂ ಏನು ಅಂತೀರಾ.. ಬರೀ ಪ್ರೀತಿಯಷ್ಟೇ. ಹೌದು, ಐ,ಟಿ.ಅಧಿಕಾರಿಗಳಿಗೆ ರವಿಚಂದ್ರನ್ ಮನೆಯಲ್ಲಿ ಏನು ಸಿಗಲಿಲ್ಲ. ಇದ್ರಿಂದ ಗಲಿಬಿಲಿಗೊಳಗಾದಂತಾದ ಐ.ಟಿ.ಅಧಿಕಾರಿಗಳು ಇಷ್ಟೆನಾ ನಿಮ್ಮ ಬಳಿ ಇರುವ ದುಡ್ಡು ಅನ್ನುವ ಪ್ರಶ್ನೆ ಕೇಳಿದ್ದರು. ಇದಕ್ಕೆ ನಗುತ್ತಾನೇ ಅಂದು ಉತ್ತರಿಸಿದ್ದ ರವಿಚಂದ್ರನ್, ನಾನು ಬ್ಯಾಂಕ್‌ನಲ್ಲಿ ದುಡ್ಡು ಇಡಲ್ಲ, ಮನೆಯಲ್ಲೂ ಇಡಲ್ಲ. ಬಂದ ಹಣವನ್ನ ಸಿನಿಮಾಗೆ ಹಾಕ್ತೀನಿ ಅಂದಿದ್ದರಂತೆ.

LEAVE A REPLY

Please enter your comment!
Please enter your name here