ಏಪ್ರಿಲ್ 14ಕ್ಕೆ ರುಸ್ತುಂ ಟ್ರೈಲರ್ – ಮತ್ತೆ ಖಾಕಿ ಅವತಾರದಲ್ಲಿ ಅಬ್ಬರಿಸಲಿದ್ದಾರೆ ಕರುನಾಡ ಚಕ್ರವರ್ತಿ

0
88

ರುಸ್ತುಂ.. ಡಾ.ಶಿವರಾಜ್ಕುಮಾರ್ ಅಭಿನಯದ ಸಿನಿಮಾ. ಕಳೆದ ವರ್ಷ ವರನಟ ಡಾ.ರಾಜ್ ಹುಟ್ಟುಹಬ್ಬದ ಪ್ರಯುಕ್ತ ಅಂದ್ರೆ ಏಪ್ರಿಲ್ 24 ಕ್ಕೆ ಸೆಟ್ಟೇರಿದ್ದ ರುಸ್ತುಂ, ಇದೀಗ.. ಒಂದು ವರ್ಷದ ಬಳಿಕ ಟ್ರೇಲರ್‌ನ್ನೊತ್ತು ಬರಲು ಸಿದ್ಧವಾಗಿದ್ದಾನೆ. ಯಸ್, ರುಸ್ತುಂ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಟ್ರೇಲರ್ ಇದೇ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ. ಇದು, ಶಿವಣ್ಣ ಅಭಿಮಾನಿಗಳ ಸಂಭ್ರಮಕ್ಕೀಗ ಕಾರಣವಾಗಿದೆ. ಶಿವಣ್ಣನ ಖಡಕ್ ಅವತಾರ ಚಿತ್ರದಲ್ಲಿ ಹೇಗಿರಲಿದೆ ಅನ್ನುವ ಕೂತುಹಲಕ್ಕೂ ಕಾರಣವಾಗಿದೆ.ರುಸ್ತುಂ ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದ ಸಿನಿಮಾ. ಆಸ್ ಎ ಡೈರೆಕ್ಟರ್ ಶಿವಸೈನ್ಯಕ್ಕೆ ಇಷ್ಟವಾಗುವಂತೆ ಸಿನಿಮಾ ಮಾಡಿದಂತಿರುವ ರವಿವರ್ಮಾ, ಶಿವಣ್ಣನಿಗೆ ಇಲ್ಲಿ ಖಾಕಿ ತೊಡಿಸಿದ್ದಾರೆ.

ಹಾಗಾಗಿ, ಸಿನಿಮಾ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇದೆ. ಇದೇ ನಿರೀಕ್ಷೆಗೆ ಉತ್ತರವೆನ್ನುವಂತೆ ಇದೀಗ ಚಿತ್ರದ ಟ್ರೇಲರ್ ಹೊರಬೀಳಲಿದೆ.ಅಂದ ಹಾಗೇ ರುಸ್ತುಂ ಮೂಲಕ ವಿವೇಕ್ ಓಬೆರಾಯ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಶಿವಣ್ಣ ಎದುರು ಇಲ್ಲಿ ವಿವೇಕ್ ತೊಡೆ ತಟ್ಟಿದ್ದಾರಾ.. ಅಥ್ವಾ, ಶಿವಣ್ಣನ ಆಪ್ತನಾಗಿ ಕಾಣಿಸಿದ್ದಾರಾ.. ಉತ್ತರ, ಚಿತ್ರದ ಟ್ರೇಲರ್‌ನಲ್ಲಿ ಸಿಗುವ ನಿರೀಕ್ಷೆಗಳಿವೆ. ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಜೊತೆ ಶ್ರದ್ಧಾಗಿದು ಮೊದಲ ಸಿನಿಮಾ. ಮಯೂರಿ ಇಲ್ಲಿ ಸೆಂಚ್ಯೂರಿ ಸ್ಟಾರ್ ಸಿಸ್ಟರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿರುವ ರುಸ್ತುಂ, ಮುಂದಿನ ತಿಂಗಳು ತೆರೆಯನ್ನ ಆವರಿಸಿಕೊಳ್ಳಲಿದ್ದಾನೆ. ಆದ್ರೆ ಅದಕ್ಕೂ ಮುನ್ನ.. ಇನ್ನೂ ಟ್ರೇಲರ್ ನೋಡೋದು ಬಾಕಿ ಇದೆ. ಉತ್ಸವ ನಡೆಯೋದು ಬಾಕಿ ಇದೆ. ಸೋ ಗೆಟ್ ರೆಡಿ ಫಾರ್ ರುಸ್ತುಂ.

LEAVE A REPLY

Please enter your comment!
Please enter your name here