ಉದ್ಘರ್ಷದ ಜೊತೆ ನಿಂತ ಕುಚಿಕು ಗೆಳೆಯರು – ಅಂದು ಪೈಲ್ವಾನ್ ಇಂದು ಯಜಮಾನ

0
263

ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುಭಾಷಾ ಹಾಗೂ ಬಹುನಿರೀಕ್ಷಿತ ಉದ್ಘರ್ಷ ಚಿತ್ರದ ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ವಿಶೇಷ ಅಂದ್ರೆ ಟ್ರೇಲರ್ಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಮೂಡಿ ಬಂದಿದ್ದು, ನಾಲ್ಕೂ ಭಾಷೆಯ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾರ್ಚ್ 5, 2019ರಂದು ರಿಲೀಸ್ ಮಾಡಲಿದ್ದಾರೆ.
ಸೀಟಿನ ತುದಿಗೆ ಪ್ರೇಕ್ಷರನ್ನು ಕೂರಿಸುವಂಥ ಥ್ರಿಲ್ಲರ್ ಚಿತ್ರಗಳನ್ನು ನೀಡುವಲ್ಲಿ ಮಾಸ್ಟರ್ ಆಗಿರೋ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದಲ್ಲೂ ಕ್ಷಣಕ್ಷಣಕ್ಕೂ ಕೂತೂಹಲ ಮೂಡಿಸುವಂಥ ವಿಶೇಷ ಸಸ್ಪೆನ್ಸ್, ಥ್ರಿಲ್ಲರ್, ಯಾಕ್ಷನ್ ಚಿತ್ರ ನೀಡಿರೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇವರಾಜ್.ಆರ್ ನಿರ್ಮಾಣದ ಉದ್ಘರ್ಷ ಚಿತ್ರ ತಮಿಳಿನಲ್ಲಿ ಉಚ್ಚಕಟ್ಟಂ ಎಂಬ ಹೆಸರಿನಿಂದ ರಿಲೀಸ್ ಆಗಲಿದ್ದು, ಉಳಿದಂತೆ ತೆಲುಗು, ಮಲಯಾಳಂನಲ್ಲಿ ಉದ್ಘರ್ಷ ಹೆಸರಿನಿಂದಲೇ ರಿಲೀಸ್ ಆಗಲಿದೆ. ಇನ್ನು ಚಿತ್ರದಲ್ಲಿ ಬಹುಭಾಷಾ ನಟ, ನಟಿಯರ ದೊಡ್ಡ ತಂಡವೇ ಇದ್ದು ಮಿಸ್ಟರ್ ವರ್ಲ್ಡ್ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕನಟರಾಗಿ ಅಭಿನಯಿಸಿದ್ದಾರೆ, ವಿಶೇಷ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಖಳನಾಯಕರಾಗಿ ಈಗಾಗಲೇ ನಟಿಸಿರೋ ಅನೂಪ್ ಸಿಂಗ್, ಕನ್ನಡಿಗರ ಮನ ಗೆದ್ದಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯರಾಗಿ ಕಬಾಲಿ ಖ್ಯಾತಿಯ ಧನ್ಸಿಕಾ, ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್, ಬಹುಭಾಷಾ ಸ್ಟೈಲಿಶ್ ವಿಲನ್ ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್ ಮುಂತಾದವರು ನಟಿಸಿದ್ದಾರೆ.
ಇನ್ನು ಚಿತ್ರಕ್ಕೆ ಬಾಲಿವುಡ್ನ ಹಿಟ್ ಚಿತ್ರಗಳ ಹಿನ್ನೆಲೆ ಸಂಗೀತಕಾರ ಸಂಜೋಯ್ ಚೌಧುರಿ ಸಂಗೀತ ನೀಡಿದ್ರೆ, ದಿವಂಗತ ವಿಷ್ಣುವರ್ಧನ್ ಹಾಗೂ ಖ್ಯಾತ ಛಾಯಾಗ್ರಹಕ ಪಿ.ರಾಜನ್ ಸಿನಿಮಾಟೊಗ್ರಫಿ ಮಾಡಿದ್ದಾರೆ.
ಒಟ್ಟಿನಲ್ಲಿ ಚಿತ್ರರಂಗದ ಯಜಮಾನ ವಿಷ್ಣುವರ್ಧನ್ ಅವರೊಂದಿಗೆ ಹಲವು ಹಿಟ್ ಕೊಟ್ಟ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರದ ಟ್ರೇಲರ್ ಅನ್ನು ಮತ್ತೊಬ್ಬ ‘ಯಜಮಾನ’ ದರ್ಶನ್ ರಿಲೀಸ್ ಮಾಡ್ತಿರೋದು ಅವರ ಅಭಿಮಾನಿಗಳಿಗೆ ಪುಳಕ ಮೂಡಿಸಿದೆ. ಇನ್ನು ಈಗಾಗಲೇ ಬರೀ ಕಾಲಿನ ಯುವತಿಯ ಟೀಸರ್ನಿಂದಲೇ ಸಖತ್ ಕುತೂಹಲ ಮೂಡಿಸಿರೋ ಉದ್ಘರ್ಷದ ಟ್ರೇಲರ್ನತ್ತ ಎಲ್ಲರ ದೃಷ್ಟಿ ನೆಟ್ಟಿದೆ.

LEAVE A REPLY

Please enter your comment!
Please enter your name here