ಈ ವಾರ ತೆರೆಗೆ ಬರ್ತಾಯಿರೋ ಸಿನಿಮಾಗಳು – ಹುಚ್ಚಾ2, ನಂಜುಂಡಿ ಕಲ್ಯಾಣ, ವರ್ತಮಾನ

0
366

ಹುಚ್ಚ 2. ಇದೇ ವಾರ ಬಿಡುಗಡೆಯಾಗ್ತಿರುವ ಸಿನಿಮಾ. ಓಂಪ್ರಕಾಶ್ ರಾವ್ ನಿರ್ದೇಶನದ 2018ರ ಈ ಹುಚ್ಚನ ಮೇಲೆ ಗಾಂಧಿನಗರಕ್ಕೆ ನಿರೀಕ್ಷೆಗಳು ಇವೆ. ಇದಕ್ಕೆ ಕಾರಣ.. ಇಲ್ಲಿ ಹುಚ್ಚನಾಗಿರೋದು ಡಾರ್ಲಿಂಗ್ ಕೃಷ್ಣ ಅನ್ನೋದು ಒಂದಾದ್ರೆ ಇನ್ನೊಂದು ಸಿನಿಮಾದ ಟ್ರೇಲರ್ ಮತ್ತು ಹಾಡುಗಳು. ಹೌದು, ನಿಮಗೆ ಗೊತ್ತಿರಲಿ ಕೃಷ್ಣ ಪ್ರತಿಭಾವಂತ ನಟ. ಆದ್ರೆ ಕೃಷ್ಣ ದುರಾದೃಷ್ಟವೋ ಏನೋ.. ಇವ್ರ ಅಭಿನಯ ಸಾಮರ್ಥ್ಯವನ್ನ ಇದುವರೆಗೂ ಯಾರು ಬಳಸಿಕೊಂಡಿಲ್ಲ. ಬಟ್, ಹುಚ್ಚ ವಿಚಾರದಲ್ಲಿ ಈ ಮಾತು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಓಂ ಪ್ರಕಾಶ್ ರಾವ್ ಇಲ್ಲಿ ಕೃಷ್ಣರಿಂದ ಕೆಲ್ಸ ತಗಿಸಿದ್ದಾರೆ. ಅಭಿನಯ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದಾರೆ. ಇನ್ನು, ಅನೂಪ್ ಸೀಳೀನ್ ಸಂಗೀತ ನಿರ್ದೇಶನದ ಹಾಡುಗಳು ಆಗ್ಲೇ ಪ್ರೇಕ್ಷಕರಿಗೆ ಹಿಡಿಸಿವೆ. ಅದ್ರಲ್ಲೂ ಶ್ರೇಯಾ ಘೋಶಾಲ್ ಹಾಡಿರುವ ತುಂಬಾ ಪ್ರೀತಿಸೋ ಹಾಡನ್ನ ಕನ್ನಡ ಕಲಾಭಿಮಾನಿಗಳು ತುಂಬಾನೇ ಪ್ರೀತಿಸುತ್ತಿದ್ದಾರೆ. ಇದು ಸಹಜವಾಗಿ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಕೃಷ್ಣಗೆ ನಾಯಕಿಯಾಗಿ ಶ್ರಾವ್ಯಾ ಇಲ್ಲಿದ್ದಾರೆ. ಸಾಯಿಕುಮಾರ್, ಮಾಳವಿಕಾ ಚಿತ್ರದಲ್ಲಿರುವ ಹಿರಿಯ ಕಲಾವಿದರು.

ಇನ್ನು ಬರೀ ಹುಚ್ಚ 2 ಅಷ್ಟೇ ಅಲ್ಲ ಈ ವಾರ ನಂಜುಡಿ ಕಲ್ಯಾಣನೂ ನಿಮ್ಮ ಮುಂದೆ ನಡೆಯಲಿದೆ. ರಾಜೇಂದ್ರ ಕಾರಂತ್ ನಿದೇಶನದ ನಂಜುಡಿ ಕಲ್ಯಾಣ ಆಗ್ಲೇ ಒಂದು ಹಂತದ ಸದ್ದನ್ನ ಮಾಡಿಯಾಗಿದೆ. ಹಾಗಾಗಿ ಸಿನಿಮಾ ಮೇಲೆ ನಂಬಿಕೆ ಗಾಂಧಿನಗರಕ್ಕಿದ್ದೇ ಇದೆ. ತನುಶ್ ನಾಯಕನಾಗಿರುವ ಈ ಚಿತ್ರಕ್ಕೂ ಹುಚ್ಚ 2 ಶ್ರಾವ್ಯಾನೇ ನಾಯಕಿ ಅನ್ನೋದು ವಿಶೇಷ.

ಇನ್ನು ಈ ವಾರ ವರ್ತಮಾನ ಕೂಡಾ ಬಿಡುಗಡೆಯಾಗ್ತಿದೆ. ಸಂಚಾರಿ ವಿಜಯ್ ಚಿತ್ರದ ನಾಯಕ ಅನ್ನೋದು ವಿಶೇಷ. ಟೈಟಲ್ ಮತ್ತು ಟ್ರೇಲರ್ ಮೂಲಕ ಗಮನ ಸೆಳೆದ ಚಿತ್ರವಿದು ಅನ್ನೋದು ನಿಮಗೆ ಗೊತ್ತಿರಲಿ. ಅದೇನೆ ಇರ್ಲಿೀ.. ಸದ್ಯ ಭರವಸೆಗಳನ್ನೊತ್ತು ನಿರೀಕ್ಷೆಯ ಗಡಿಯನ್ನ ತಲುಪೇ ತಲುಪಿತ್ತೀನಿ ಅನ್ನುವ ವಿಶ್ವಾಸದಲ್ಲಿ ಚಿತ್ರಮಂದಿರಕ್ಕೆ ಬರ್ತಿಾರುವ 3 ಚಿತ್ರಗಳು ಗೆಲ್ಲಲಿ ಅನ್ನೋದೇ ನಮ್ಮ ಆಶಯ

LEAVE A REPLY

Please enter your comment!
Please enter your name here