ಈ ವಾರ ತೆರೆಗೆ ಬರ್ತಾಯಿರೋ ಕನ್ನಡ ಸಿನಿಮಾಗಳು

0
692

ವೆನಿಲ್ಲಾ.. ಇದೇ ವಾರ ಬಿಡುಗಡೆಯಾಗ್ತಿರುವ ಸಿನಿಮಾ. ಜಯತೀರ್ಥ ಚಿತ್ರದ ನಿರ್ದೇಶಕ. ಹಿಂದೆ.. ಬ್ಯೂಟಿಫುಲ್ ಮನಸುಗಳೊಂದಿಗೆ ಬಂದಿದ್ದ ಜಯತೀರ್ಥ ಇದೀಗ ಸಸ್ಪೆನ್ಸ್ ಸಲಾಡ್‌ನ್ನ ನಿಮ್ಮ ಮುಂದಿಡಲಿದ್ದಾರೆ. ಅವಿನಾಶ್ ಚಿತ್ರದ ನಾಯಕ. ರಂಗಭೂಮಿ ಪ್ರತಿಭೆ ಇವರು. ಇನ್ನು ನಾಯಕಿಯಾಗಿ ಸ್ವಾತಿ ಕೊಂಡೆ ಇದ್ದಾರೆ. ರೆಹಮಾನ್, ರವಿಶಂಕರ್, ಪಾವನಾ.. ಚಿತ್ರದ ಇನ್ನುಳಿದ ಅಟ್ರ್ಯಾಕ್ಷನ್ಸ್. ಕಿರಣ್ ಹಂಪಾಪುರ ಕ್ಯಾಮರ, ಬಿಜೆ ಭರತ್ ಸಂಗೀತ, ಜಂಯತ್ ಕಾಯ್ಕಿಣಿ ಮದನ್ ಸಾಹಿತ್ಯ ಚಿತ್ರಕ್ಕಿದ್ದು, ಅಖಿಲ್ ಕಂಬೈನ್ಸ್ ಮೂಲಕ ಎಸ್. ಜಯರಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೇಲರ್, ಹಾಡುಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ವೆನಿಲಾ ಸದ್ಯ ನೂರಕ್ಕೂ ಹೆಚ್ಚು ಚಿತ್ರಮಂದಿರ ಗಳಲ್ಲಿ ಬಿಡುಗಡೆಯಾಗ್ತಿದೆ.

ಆದರ್ಶ. ಚಿತ್ರಮಂದಿರಕ್ಕೆ ಈ ವಾರ ಬರ್ತಿಹರುವ ಸಿನಿಮಾ. ಹದಿಹರೆಯದ ಹುಡುಗರ ಕಲರ್‌ಫುಲ್ ಲವ್ ಕಹಾನಿ. ಹೊಸಬರ ಹೊಸ ಪ್ರಯತ್ನವಿರುವ ಚಿತ್ರಕ್ಕೆ ಸಾಯಿ ಪ್ರಭಾಕರ್ ನಿರ್ದೇಶನವಿದೆ. ಕಾಲೇಜ್ ಹುಡುಗನ ಮನಸಿನ ಸುತ್ತ ಗಿರಕಿ ಹೊಡೆಯುವ ಸಿನಿಮಾಗೆ ನಾಗಕಿರಣ್ ನಾಯಕ. ಬಿಂದಾಸ್ ಹುಡುಗನ ಪಾತ್ರದಲ್ಲಿ ನಾಗಕಿರಣ್ ನಟಿಸಿದ್ದು. ಈ ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುವ ಇರಾದೆಯಲ್ಲಿದ್ದಾರೆ. ನಾಯಕಿಯಾಗಿ ಮಂಗಳೂರಿನ ಬೆಡಗಿ ಪ್ರಜು ಪೂವಯ್ಯ ಮಿಂಚಿದ್ದಾರೆ. ಪಾತರಗಿತ್ತಿ, ಅಸ್ತಿತ್ವ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಪ್ರಜು ಪೂರ್ವಯ್ಯ ನಟಿಸಿದ್ದಾರೆ.

2nd ಹಾಫ್’ ಈ ವಾರ ಬಿಡುಗಡೆಯಾಗ್ತಿರುವ ಮತ್ತೊಂದು ಸಿನಿಮಾ. ಪ್ರಿಯಾಂಕ ಉಪೇಂದ್ರ ಸಿನಿಮಾದ ಬಹುದೊಡ್ಡ ಆಕರ್ಷಣೆ. ಪೊಲೀಸ್ ಪೇದೆಯ ಪಾತ್ರದಲ್ಲಿ ಪ್ರಿಯಾಂಕ ಕಾಣಸಿಗಲಿದ್ದಾರೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಕೂಡ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾರೆ. ಮಹಿಳೆಯರ ಅಪಹರಣ, ಅತ್ಯಾಚಾರ, ರಾಜಕೀಯ ನಂಟು, ಹಿರಿಯ ಅಧಿಕಾರಿ ಕಿರುಕುಳ, ಪೊಲಿ ಹುಡುಗರ ಹಾವಳಿ, ಹೀಗೆ ಈ ಎಲ್ಲ ಅಂಶಗಳನ್ನ ಪೊಲೀಸ್ ಪೇದೆಯೊಬ್ಬಳು ಹೇಗೆ ಭೇದಿಸುತ್ತಾಳೆ ಎಂಬುದು ಈ ಥ್ರಿಲ್ಲಿಂಗ್ ಸ್ಟೋರಿ. ಯೋಗಿ ದೇವಗಂಗೆ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ಬರೀ ಇವಷ್ಟೇ ಅಲ್ಲ ಸೈಲೆಂಟ್ ಸೈಕೋಲಾಜಿಕಲ್ ಸಿನಿಮಾ ಪರಿಧಿ’, ಹುಳಿಕಲ್ ನಟರಾಜ್ ನಟಿಸಿರುವ ನವಿಲು ಕಿನ್ನರಿ ಸಿನಿಮಾಗಳು ಕೂಡಾ ಇದೇ ಶುಕ್ರವಾರ ಥಿಯೇಟರ್ ಅಂಗಳಕ್ಕೆ ಬರುತ್ತಿವೆ. ಅದೇನೆ ಇರ್ಲಿ .. ಅದೃಷ್ಟ ಪರೀಕ್ಷೆಗೆ ಇಳಿಯುತ್ತಿರುವ ೫ ಚಿತ್ರಗಳಲ್ಲಿ ಗೆಲುವು ಯಾರಿಗೆ ಸಿಗುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here