ಈ ವಾರದ ಮಸ್ಟ್ ವಾಚ್ ಮೂವಿ ರಾಜಣ್ಣನ ಮಗ – ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್

0
511

ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ’ರಾಜಣ್ಣನ ಮಗ’ನ ದರ್ಬಾರ್ ಶುರುವಾಗಿಬಿಟ್ಟಿದೆ ಕಣ್ರೀ. ಇಷ್ಟುದಿನ ತನ್ನ ವಿಭಿನ್ನವಾದ ಟೀಸರ್ ಮೂಲಕ ಸದ್ದು ಮಾಡಿದ ರಾಜಣ್ಣನ ಮಗ ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ಮುಖಕ್ಕೆ ಮುಸುಕು ಹಾಕಿಕೊಂಡು ಒಂದು ದೊಡ್ಡಮಟ್ಟದ ಕ್ಯುರ್ಯ್ಸಿಟಿ ಕ್ರಿಯೆಟ್ ಮಾಡಿದ ’ರಾಜಣ್ಣನ ಮಗ’ ಈಗ ಟ್ರೈಲರ್‌ನಲ್ಲಿ ತನ್ನ ಮುಖವನ್ನ ರಿವೀಲ್ ಮಾಡಿದ್ದಾನೆ. ಅದು ಕೆಟ್ಟತನವನ್ನ ಬಿಂಬಿಸೋ ವಿಲನ್‌ಗಳನ್ನ ಸದೆಬಡೆಯೋ ಉಗ್ರರೂಪದ ಖಡಕ್ ನಾಯಕನ ಗೆಟಪ್‌ನಲ್ಲಿ. ಒಂದು ರಾ ಲವ್‌ಸ್ಟೋರಿಯ ಜೊತೆಗೆ ಆಕ್ಷನ್ ಥಡಕಾ ಕೊಡೊಕೆ ರೆಡಿಯಾಗಿರುವ ’ರಾಜಣ್ಣನ ಮಗ’ ಈಗ ಗಾಂಧಿನಗರದ ಗಲ್ಲಿಗಳಲ್ಲಿ ಬಹುಚರ್ಚಿತ ವಿಷಯವಾಗಿಬಿಟ್ಟಿದೆ. ಎಲ್ಲವೂ ಅಂದುಕೊಂಡ ಹಾಗೇ ನಡೆದಿದ್ರೆ ’ರಾಜಣ್ಣನ ಮಗ’ ಸಿನಿಮಾ ಬಹಳ ಬೇಗವೇ ತೆರೆಗೆ ಬರಬೇಕಿತ್ತು. ಆದರೆ ಒಳ್ಳೆ ಪ್ರಾಡೆಕ್ಟ್ ಬರಬೇಕಾದ್ರೆ ಟೈಮ್ ತೆಗೊಳುತ್ತೆ ಅಂತಾರಲ್ಲ ಹಾಗೇ, ರಾಜಣ್ಣನ ಮಗ ಲೇಟ್ ಆಗಿ ಬಂದ್ರು ಲೇಟೆಸ್ಟ್ ಆಗಿ ಅಬ್ಬರಿಸುತ್ತಿದ್ದಾನೆ. ಇದೇ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ’ರಾಜಣ್ಣನ ಮಗ’ ಚಿತ್ರ ಸಿನಿಮಾ ಪಂಡಿತರ ಗಮನ ಸೆಳೆಯುತ್ತಿದೆ. ಕೌಟುಂಬಿಕ ಸ್ಟೋರಿಲೈನ್ ಜೊತೆಗೆ ಆಕ್ಷನ್ ಬಿಸಿ ಮುಟ್ಟಿಸಲಿರುವ ರಾಜಣ್ಣನ ಮಗ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ.

ಹೊಸಬರ ಕನಸಾದ್ರೂ ನಾವು ಯಾರಿಗೂ ಕಮ್ಮೀ ಇಲ್ಲ ಎನ್ನುವ ಚಿತ್ರತಂಡದ ಉತ್ಸಾಹ ಮುಗಿಲುಮುಟ್ಟಿದೆ.ರಾಜಣ್ಣನಮಗ ತನ್ನ ವಿಶೇಷವಾದ ಸ್ಟಾರ್‌ಕಾಸ್ಟ್‌ನಿಂದಲೂ ಚಂದನವನದಲ್ಲಿ ಸುದ್ಧಿಯಾಗ್ತಿದಾನೆ. ಬಹುಭಾಷಾ ನಟ ಚರಣ್‌ರಾಜ್ ಸಿನಿಮಾದಲ್ಲಿ ಪ್ರಮುಖಪಾತ್ರವೊಂದಕ್ಕೆ ಬಣ್ಣ ಹಚ್ಚಿರೋದು ಸಿನಿಮಾದ ಸೆಂಟರ್ ಆಫ್ ಆಟ್ರಾಕ್ಷನ್. ನಾಯಕನಟನ ತಂದೆ ಕ್ಯಾರೆಕ್ಟರ್‌ಗೆ ಜೀವ ತುಂಬಿರುವ ಚರಣ್‌ರಾಜ್ ಸಿನಿಮಾದ ಶ್ರೀಮಂತಿಕೆಯನ್ನ ಹೆಚ್ಚಿಸಿದ್ದಾರೆ ಎಂದ್ರೆ ತಪ್ಪಾಗಲ್ಲ. ಇತ್ತೀಚೆಗೆ ತಮ್ಮ ಪಾತ್ರಗಳ ಆಯ್ಕೆಯಲ್ಲಿ ಬಹಳ ಚ್ಯೂಸಿಯಾಗಿರುವ ಚರಣ್ ರಾಜ್ ಪರಿಪೂರ್ಣ ಮನಸ್ಸಿಂದ ರಾಜಣ್ಣನಮಗ ಚಿತ್ರವನ್ನ ಒಪ್ಪಿಕೊಂಡಿದ್ದಾರಂತೆ. ಇನ್ನು ಸಿನಿಮಾದ ನಾಯಕನಟ ಜಲಗೆರೆ ಹರೀಶ್ ರಾಜಣ್ಣನಮಗ ಸಿನಿಮಾಗೋಸ್ಕರ ಕಾಯಾವಾಚಾಮನಸಾ ಕೆಲಸ ಮಾಡಿದ್ದಾರಂತೆ. ರಾಜಣ್ಣನಮಗ ಸಿನಿಮಾದಿಂದ ತಾನೊಬ್ಬ ಉತ್ತಮ ಹೀರೊ ಆಗಿ ಗಾಂಧಿನಗರದಲ್ಲಿ ನೆಲೆಯೂರುವ ಕನಸಿಟ್ಟುಕೊಂಡಿದ್ದಾರೆ ಮಿಸ್ಟರ್.ಹರೀಶ್. ತಮ್ಮ ಪಾತ್ರದ ತಯಾರಿಗೆ ಸಾಕಷ್ಟು ಶ್ರಮಿಸಿರುವ ಹರೀಶ್ ತೆರೆಮೇಲೆ ನನ್ನ ಎರ್ಫಟ್ ನೋಡಿ ನೀವೆ ಮೆಚ್ಚಿಕೊಳ್ತಿರಾ ಅಂತ ಆತ್ಮವಿಸ್ವಾಸದ ಮಾತುಗಳನ್ನಾಡಿದ್ದಾರೆ. ಇನ್ನು ಹರೀಶ್ ಬಾಯಲ್ಲಿ ಬರೋ ಖಡಕ್ ಡೈಲಾಗ್‌ಗಳೇ ಸಿನಿಮಾದ ಜೀವಾಳವಂತೆ.

ಇನ್ನು ರಾಜಣ್ಣನಮಗ ಕಥೆಯನ್ನಿಟ್ಟುಕೊಂಡು ಎರಡು ವರ್ಷಗಳಿಂದ ಸಿನಿಮಾ ಮಾಡಬೇಕು ಅನ್ನೋ ಕನಸಿನ ಜೊತೆ ಗುದ್ದಾಡಿದ ನಿರ್ದೆಶಕ ಕೋಲಾರ ಸೀನು ರಾಜಣ್ಣನಮಗ ಖಂಡಿತ ಒಳ್ಳೆ ಸದಭಿರುಚಿಯ ಚಿತ್ರವಾಗುತ್ತೆ ಅಂತ ಪ್ರಾಮೀಸ್ ಮಾಡಿದ್ದಾರೆ. ಸಿನಿಮಾಅಂದ್ರೆ ಹೀಗೆ ಬರಬೇಕು ಅಂತ ಪ್ಲಾನ್ ಮಾಡಿದ್ದ ಕೋಲಾರ ಸೀನು ಪ್ರಯತ್ನಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆಯಂತೆ. ಪ್ರತಿ ಕ್ಯಾರೆಕ್ಟರ್ ಡಿಸೈನ್‌ಗೂ ತುಂಬಾ ಟೈಮ್ ತೆಗೆದುಕೊಂಡಿರುವ ಕೋಲಾರ ಸೀನು ಸಿನಿಮಾ ನಿರ್ಮಾಣದ ಯಾವ ಹಂತದಲ್ಲೂ ಅರ್ಜೆಂಟ್ ತೋರಿಸಲೇಇಲ್ಲವಂತೆ. ಸೋ, ’ಕನ್ನಡ ಚಿತ್ರರಂಗಕ್ಕೆ ಒಂದು ಮಾಸ್ಟರ್‌ಪೀಸ್ ಎನಿಸುವ ಸಿನಿಮಾ ನೀಡಿದ್ದೇನೆ ಎನ್ನುವ ತೃಪ್ತಿ ನನಗಿದೆ’ ಅಂತಾರೆ ರಾಜಣ್ಣನಮಗ ಸಿನಿಮಾದ ಸೂತ್ರಧಾರ ಕೋಲಾರ ಸೀನು.

ರಾಜಣ್ಣನ ಮಗ ತನ್ನ ತಾಂತ್ರಿಕವರ್ಗದಿಂದಲೂ ಸಕತ್ ಸೌಂಡ್ ಮಾಡಿದಾನೆ. ಕೆ.ಜಿಎಫ್ ಖ್ಯಾತಿಯ ರವಿಬಸ್ರೂರ್ ಸಿನಿಮಾಗೆ ಸಂಗೀತ ಸಂಯೋಜಿಸಿದ್ದು, ಪ್ರಮೋದ್ ಕ್ಯಾಮೆರಾ ಕೈಚಳಕ ರಾಜಣ್ಣನ ಮಗ ಚಿತ್ರದಲ್ಲಿ ರಾರಾಜಿಸುತ್ತಿದೆ. ಈಗಾಗಲೇ ಟ್ರೈಲರ್‌ನಲ್ಲಿ ಢಿಫ್‌ರೆಂಟ್ ಡ್ಯಾನಿಯ ಫೈಟ್ ಕಂಪೋಸಿಂಗ್ ಎಲ್ಲರ ಕಣ್ಣು ಕುಕ್ಕುತಿದೆ. ಮಲ್ಟಿಪಲ್ ವಿಲನ್‌ಗಳ ಅಬ್ಬರ ಕೂಡ ಸಿನಿಮಾ ಆಕ್ಷನ್ ಪ್ರಿಯರಿಗೆ ಇಷ್ಟವಾಗುವ ಚಾನ್ಸ್ ಇದೆ. ಹರೀಶ್‌ಗೆ ನಾಯಕಿಯಾಗಿ ಅಕ್ಷತಾ ಕ್ಯೂಟಾಗಿ ಕಾಣಿಸ್ತಿದಾರೆ. ಒಂದು ಫ್ರೆಶ್ ಲವ್ ಎಳೆಯನ್ನೂ ಕೂಡ ರಾಜಣ್ಣನಮಗ ಪ್ರೆಸೆಂಟ್ ಮಾಡಲಿದ್ದಾನೆ. ಅಂತೂ ಮಾರ್ಚ್ ಹದಿನೈದಕ್ಕೆ ಬಲಗಾಲಿಟ್ಟು ಚಿತ್ರಮಂದಿರಕ್ಕೆ ಕಾಲಿಡಲಿದ್ದಾನೆ.

LEAVE A REPLY

Please enter your comment!
Please enter your name here