ಈ‌ ವಾರದಿಂದ‌‌ ಶುರು ಬಸವನಗುಡಿ ಲಂಬೋದರನ ಆಟ – ವಿಭಿನ್ನ ಗೆಟಪ್ನಲ್ಲಿ ಯೋಗಿಯ ಪ್ರೇಮ ಪಾಠ

0
31

ಲೂಸ್ ಮಾದ ಯೋಗಿ ಅಭಿನಯದ ಲಂಬೋದರ ಸಿನಿಮಾ ಇದೇ 11ಕ್ಕೆ ರಾಜ್ಯಾದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಈ ಚಿತ್ರವನ್ನ ಕೆ.ಕೃಷ್ಣರಾಜ್ ನಿರ್ದೇಶನ ಮಾಡಿದ್ದು, ಲೂಸ್ ಮಾದ ಯೋಗೀಶ್ ಮತ್ತು ಆರ್,ಎಕ್ಸ್ ಸೂರಿ ಖ್ಯಾತಿಯ ಆಕಾಂಕ್ಷ ಮುಖ್ಯಭೂಮಿಕೆಯಲ್ಲಿದ್ದಾರೆ. ಔಟ್ ಅಂಡ್ ಔಟ್ ಕಾಮಿಡಿ ಟ್ರ್ಯಾಕ್ನಲ್ಲಿ ಸಾಗೋ ಪೋಲಿ ಲವ್ ಡ್ರಾಮಾ ಲಂಬೋದರನ ಹಾಡುಗಳು ಆಗ್ಲೇ ಸಿನಿಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ್ದು, ಟೀಸರ್ ಎಲ್ಲೆಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಎಲ್ಲಾ ಆಂಗಲ್ನಿಂದ್ಲೂ ಪಾಸಿಟೀವ್ ಆಗಿ ಕಾಣ್ತಿರೋ ಲಂಬೋದರ ಈ ಬಾರಿ ಲೂಸ್ ಮಾದ ಯೋಗಿಗೆ ದೊಡ್ಡ ಗೆಲುವು ತಂದುಕೊಡೋ ಸೂಚನೆ ಕೊಟ್ಟಿದೆ. ಚಿತ್ರತಂಡವೂ ಅದೇ ವಿಶ್ವಾಸದಲ್ಲಿ‌ದೆ..  

https://youtu.be/xp64JnNoSuw

LEAVE A REPLY

Please enter your comment!
Please enter your name here