ಇವರಿಬ್ಬರಲ್ಲಿ ಯಾರು ರಾವಣ ? ಯಾರು ರಾಮ ? ದಿ ವಿಲನ್ ಸಿಕ್ರೇಟ್ ..!

0
350

ದಿ ವಿಲನ್ ಚಿತ್ರದ ಎರಡು ಟೀಸರ್ಸ್ ರಿವೀಲಾಗ್ತಿದ್ದಂತೆ, ಅಭಿಮಾನಿ ವಲಯದಲ್ಲಿ.. ಗಾಂಧಿನಗರದ ಗಲ್ಲಿಗಳಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಅದೇ.. ದಿ ವಿಲನ್‌ನಲ್ಲಿ ರಾವಣ ಯಾರು ಅನ್ನೋದು. ಇದಕ್ಕೆ ಕಾರಣ ದಿ ವಿಲನ್ ಟೀಸರ್‌ನಲ್ಲಿ ಇಬ್ಬರು ಮಾತನಾಡಿರೋದು ರಾವಣನ ವಿಚಾರನೇ, ಕಾಣಸಿಗೋದು ರಾವಣನಂತೇನೇ. ಸೈಲೆಂಟಾಗಿದ್ದರೆ ರಾಮ ವೈಲೆಂಟಾದ್ರೆ ರಾವಣ ಅನ್ನುವ ಶಿವಣ್ಣ, ರಾವಣನ ಕಥೆ ಹೇಳೋಕ್ ಬಂತು ಅನ್ನುವ ಸುದೀಪ.. ಇದೀಗ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದ್ದಾರೆ. ನಿರೀಕ್ಷೆಗಳನ್ನ ದುಪ್ಪಟ್ಟು ಮಾಡಿದ್ದಾರೆ.

ಇನ್ನು.. ಗಾಂಧಿನಗರದ ಗಲ್ಲಿಗಳಲ್ಲಿ ಕೆಲ ಪಂಡಿತರು ಕಂಡುಕೊಂಡತೆ.. ಇಲ್ಲಿ ರಾಮನೊಳಗೊಬ್ಬ ರಾವಣ.. ರಾವಣನೊಳಗೊಬ್ಬ ರಾಮನಿರುವ ಕಥೆಯನ್ನ ಪ್ರೇಮ್ ಹೇಳಲು ಹೊರಟಿದ್ದಾರೆ. ಇದೇ ಟೀಸರ್‌ಗಳಲ್ಲಿ ಬಿಂಬಿತವಾಗಿದೆ. ಅದೇನೆ ಇರ್ಲಿಿ. ಸದ್ಯ ದಿ ವಿಲನ್ ಚಿತ್ರದ ಎರಡು ಟೀಸರ್ಸ್ಲ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಸುದ್ದಿಯಾಗ್ತಿವೆ. ಮುಂದಿನ ದಿನಗಳಲ್ಲಿ.. ದಿ ವಿಲನ್ ಕ್ರೇಝ್ ಹೆಚ್ಚಾದ್ರೆ ಹೌಹಾರಬೇಡಿ. ಯಾಕಂದ್ರೆ ಇದು ಪ್ರೇಮ್ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ಕರುನಾಡ ಚಕ್ರವರ್ತಿ & ಅಭಿನಯ ಚಕ್ರವರ್ತಿ ಸಮಾಗಮದ ಸಿನಿಮಾ.

LEAVE A REPLY

Please enter your comment!
Please enter your name here