ಇಲ್ಲಿದೆ ಕೆಜಿಎಫ್ ಚಿತ್ರದ ಮೇಕಿಂಗ್ ಸ್ಟಿಲ್ಸ್ – ಹೊರಬಿದ್ದಿದೆ ಭರ್ಜರಿ ಸೆಟ್ಟ್ ಗಳ ಫೋಟೋ

0
775

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ‌ ಬಹುಕೋಟಿ ವೆಚ್ಚದ ಕೆಜಿಎಫ್ ಚಿತ್ರದ ಕೆಲವೊಂದು ಪೋಟೋಗಳು ಹೊರಬಿದ್ದಿವೆ. ಚಿತ್ರಕ್ಕಾಗಿ ಕೋಲಾರದ ಕೆಜಿಎಫ್ ನಲ್ಲಿ ಹಾಕಿರುವ ಸೆಟ್ ಗಳು , ಉಪಯೋಗಿಸಿರುವ ಕಾರು , ರಾಕಿಂಗ್ ಸ್ಟಾರ್ ಯಶ್ ಬಳಸಿರುವ ಬೈಕ್ ,ಹಾಗೂ ಅವರ ಖಡಕ್ ಲುಕ್ ಇರುವ ಕೇಲವೊಂದು ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.

ಈಗಾಗಲೇ ಯಶ್ ಚಿತ್ರಕ್ಕಾಗಿ ಗಡ್ಡ ಬಿಟ್ಟು ಕೊಟ್ಟಿರುವ ಖಡಕ್ ಲುಕ್ ಅವರ ಅಭಿಮಾನಿಗಳಲ್ಲಿ‌ ಚಿತ್ರದ ಮೇಲಿನ ನಿರೀಕ್ಷೆಯನ್ನು ದಿನದಿಂದ ದಿನಕ್ಕೆ ಜಾಸ್ತಿ ಮಾಡುತ್ತಿದೆ. ಚಿತ್ರ ಈಗಾಗಲೇ ಸಾಕಷ್ಟು ತಡವಾಗಿರುವ ಕಾರಣ ಸದ್ಯಕ್ಕೆ ಚಿತ್ರದ ಈ ಪೋಟೋಗಳನ್ನು ನೋಡಿ ಯಶ್ ಅಭಿಮಾನಿಗಳು ಕೆಜಿಎಫ್ ಆದಷ್ಟು ಬೇಗ ಬರಲಿ ಎಂದು ಕನವರಿಸುತ್ತಿದ್ದಾರೆ. 

ಇನ್ನೂ ಈ ಫೋಟೋಗಳಲ್ಲಿ ಚಿತ್ರಕ್ಕಾಗಿ ಹಾಕಿರುವ ಒಂದು ದೊಡ್ಡ ದೇವರ ಮೂರ್ತಿ ಜೊತೆಗೆ ಗುಹೆಯಂತಿರುವ ಸೆಟ್ ಗಳು ಚಿತ್ರದ ಕಥೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಹಾಗೆ ಮಾಡಿದೆ, ೮೦ ರ ದಶಕದಲ್ಲಿ ನಡೆಯುವ ಕಥೆಗೆ ಈ ಸೆಟ್ಟ್ ಗಳು ಜೀವ ತುಂಬಿವೆ ಎನ್ನುವುದರಲ್ಲಿ ಅನುಮಾನವಿಲ್ಲ… ಅದರಲ್ಲೂ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವುದು ಕೆಜಿಎಫ್ ಚಿತ್ರದ ಇನ್ನೋಂದು ಮುಖ್ಯ ಹೈಲೆಟ್ ಎನ್ನಬಹುದು… 

LEAVE A REPLY

Please enter your comment!
Please enter your name here