ಇನ್ಮೂಂದೆ‌ ಇವರು ಲೂಸ್ ಮಾದ‌ ಅಲ್ಲ‌ ಕೇಡಿ‌ ಮಾದ – ಶ್ರೀಮುರಳಿ ರಿವೀಲ್‌ ಮಾಡಿದ ಸಿಕ್ರೇಟ್

0
79

ಲಂಬೋದರ ಬಸವನಗುಡಿ ಬೆಂಗಳೂರು ಸಿನಿಮಾದ ನಯಾ ಸಾಂಗ್ ಇದು.ಯಸ್, ಲಂಬೋದರ ಬಸವನಗುಡಿ ಬೆಂಗಳೂರು ಲೂಸ್ ಮಾದ ಯೋಗಿ ಅಭಿನಯದ ಸಿನಿಮಾ. ಆಫ್ಟರ್ ಎ ಗ್ಯಾಫ್.. ಮತ್ತೆ, ಅಭಿಮಾನಿಗಳ ಮನಸು ತಣಿಸಲು.. ಹೊಸದೊಂದು ಗೆಲುವನ್ನ ಕಾಣಲು ಸಿದ್ಧವಾಗಿರುವ ಯೋಗಿಗೆ, ಶ್ರೀಮುರಳಿ ಸಾಥ್ ನೀಡಿದ್ದಾರೆ. ಚಿತ್ರದ ಹಾಡನ್ನ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮೈ ಕೊಡವಿ ಮತ್ತೆ ಎದ್ದು ನಿಲ್ಲಿ ಯೋಗಿ ಅಂದಿದ್ದಾರೆ. ಕೇಡಿ ಅದು ಒಳ್ಳೇ ಕೇಡಿಯಾಗಿ ಇಲ್ಲಿ ಯೋಗಿ ಕಾಣಿಸಿಕೊಂಡಿದ್ದಾರೆ. ಪಾತ್ರದ ವಿಚಾರವಿರ್ಲಿ, ಲುಕ್‌ಗಳ ವಿಚಾರವಿರ್ಲಿ.. ಹಿಂದೆಂದೂ ಕಾಣಸಿಗದಂಥ ಅವತಾರದಲ್ಲಿ ಯೋಗಿ, ಲಂಬೋದರ ಬಸವನಗುಡಿ ಬೆಂಗಳೂರು ಮೂಲಕ ಅಖಾಡಕ್ಕಿಳಿಯುತ್ತಿದ್ದಾರೆ. ಇದೇ ಮಾತಿಗೆ ಸಾಕ್ಷಿ ಅನ್ನುವಂತಿದೆ ಬಿಡುಗಡೆಗೊಂಡಿರುವ ಈ ಕೇಡಿ ಸಾಂಗ್.

ಅಂದ ಹಾಗೇ, ಸ್ಟಾರ್ ನಟರ ಸಿನಿಮಾಗಳು ಅಂದ್ಮೇಲೆ, ಇಂಟ್ರಡಕ್ಷನ್ ಹಾಡು.. ಮಾಸ್ ಅಫೀಲ್ ಹೊಂದಿರಬೇಕು, ಕ್ಲಾಸ್ ಆಡಿಯನ್ಸ್‌ಗೂ ಇಷ್ಟವಾಗುವಂತಿರಬೇಕೆನ್ನೋದು ಗಾಂಧಿನಗರದ ಅಲಿಖಿತ ನಿಯಮ. ಇದೇ ನಿಯಮವನ್ನ ಲಂಬೋದರ ತಂಡ ಬ್ರೇಕ್ ಮಾಡಿದೆ. ಕೇಡಿ ಹಾಡನ್ನ ಕನ್ನಡಿಗರ ಮಡಿಲಿಗೆ ಹಾಕುವ ಮೂಲಕ, ವಿಭಿನ್ನವಾಗಿ ಯೋಗಿಯನ್ನ ಚಿತ್ರದಲ್ಲಿ ತೋರಿಸಿದೆ.ಇನ್ನೂ ಇದೇ ಕೇಡಿ ಹಾಡಿನ ಇನ್ನೊಂದು ವಿಶೇಷ ಅಂದ್ರೆ ಅದು ಗಾಯಕಿ ವಿಜಯಲಕ್ಷ್ಮೀ. ಹೌದು, ಪೂರ್ತಿ ಹಾಡಿನ ಜೀವಾಳದಂತಿರುವ ವಿಜಯಲಕ್ಷ್ಮೀ ದಿವ್ಯಾಂಗ ದೇವತೆ. ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ಗಾಯಕಿಯಾಗಿ ಬೆಳೆದಿರುವ ವಿಜಯಲಕ್ಷ್ಮೀ, ಬೆಸಿಕಲಿ ಕೇರಳದ ಪ್ರತಿಭೆ. ಲಂಬೋದರ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಯವಾಗ್ತಿರುವ ವಿಜಯಲಕ್ಷ್ಮೀ ಕಂಠಕ್ಕೆ, ಆಗ್ಲೇ ಎಲ್ಲರು ಮರುಳಾಗಿದ್ದಾರೆ.

ವಿಜಯಲಕ್ಷ್ಮೀರಿಂದ ಹಾಡು ಹಾಡಿಸಿದ್ದಕ್ಕಾಗಿ ಲಂಬೋದರನಿಗೆ ಧನ್ಯವಾದಗಳನ್ನ ಹೇಳುತ್ತಿದ್ದಾರೆ.ಗೌಸ್ ಫೀರ್ ಸಾಹಿತ್ಯ ಕೃಷಿ ಹಾಡಿಗಿದೆ. ಇಂದಿನ ಜಮಾನಾದ ಲವರ‌್ರನಿಗಳಿಗೆ ಇಷ್ಟವಾಗುವಂತೆ ಕಾರ್ತಿಕ್ ಶರ್ಮಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಲಂಬೋದರ ಆಡಿಯೋ ಆಲ್ಬಂನ ಮತ್ತೊಂದು ಶಕ್ತಿ. ಕೃಷ್ಣರಾಜ್ ಚಿತ್ರದ ನಿರ್ದೇಶಕ. ಇದು ಇವ್ರ ಮೊದಲ ಪ್ರಯತ್ನ. ಯೋಗಿ ಸಿನಿವೃತ್ತಿಯ ಸ್ಪೆಷಲ್ ಸಿನಿಮಾ ಲಂಬೋದರನನ್ನಾಗಿಸುವ ಎಲ್ಲಾ ಪ್ರಯತ್ನಗಳನ್ನಿಲ್ಲಿ ಪಟ್ಟಿದ್ದಾರೆ ನಿರ್ದೇಶಕ ಕೃಷ್ಣರಾಜ್, ಅಚ್ಯುತಕುಮಾರ್, ಭೂಮಿಕಾ ಶೆಟ್ಟಿ, ಧರ್ಮಣ್ಣ ಸೇರಿ ದೊಡ್ಡ ತಾರಾಬಳಗ ಲಂಬೋದರನಲ್ಲಿದೆ. ಚಿತ್ರಕ್ಕೆ ವಿಶ್ವೇಶರ್ ಪಿ ಹಾಗೂ ರಾಘವೇಂದ್ರ ಭಟ್ ಬಂಡವಾಳ ಹೂಡಿದ್ದಾರೆ. ಕ್ವಾಲಿಟಿ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದ ನಿರ್ಮಾಪಕರು, ಚಿತ್ರವನ್ನ ಅಷ್ಟೇ ಪ್ರೀತಿನಿಂದ ನಿರ್ಮಾಣ ಮಾಡಿದ್ದಾರೆ.

LEAVE A REPLY

Please enter your comment!
Please enter your name here