ಇನ್ನೂ ಯಾಕೆ ರಿಲೀಸ್ ಆಗಿಲ್ಲ ಉಪ್ಪಿಯ I Love You – ಇಲ್ಲಿದೆ ಅದಕ್ಕೆ ನಿಜವಾದ ಕಾರಣ

0
137

ಐ ಲವ್ ಯೂ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾ. ಈ ವಾರ ಬಿಡುಗಡೆಯಾಗುತ್ತೆ. ಮುಂದಿನ ವಾರ ಬಿಡುಗಡೆಯಾಗುತ್ತೆ ಅಂಥ ಕಾದು ಕುಂತಿರುವ ಉಪ್ಪಿ ಅಭಿಮಾನಿಗಳಿಗೀಗ, ಇನ್ನೊಂದು ಬೇಸರದ ಸುದ್ದಿಯನ್ನ ಚಿತ್ರತಂಡ ನೀಡಿದೆ. ಅದುವೇ ಚಿತ್ರದ ಬಿಡುಗಡೆಯ ದಿನ ಮತ್ತೆ ಮುಂದೂಡಲಾಗಿದೆ ಅನ್ನುವ ಸುದ್ದಿ.ಹೌದು, ಎಲ್ಲಾ ಅಂದುಕೊಂಡತೆ ಆಗಿದ್ದರೆ, ರಿಯಲ್ ಸ್ಟಾರ್ ಹಾಗೂ ರಚಿತಾ ರಾಮ್ ಪ್ರೀತಿ ಪಾಠ ತುಂಬಾ ಹಿಂದೆನೇ ಶುರುವಾಗಬೇಕಿತ್ತು. ಆದ್ರೆ ನಂತ್ರದ ದಿನಗಳಲ್ಲಿ ತೆಲುಗಿನಲ್ಲೂ ಬಿಡುಗಡೆ ಮಾಡಬೇಕೆನ್ನುವ ನಿರ್ಧಾರ ಚಿತ್ರದ ಬಿಡುಗಡೆಯನ್ನ ಮುಂದೂಡುವಂತೆ ಮಾಡಿತ್ತು. ಇನ್ನೇನು.. ಚಿತ್ರ ಇದೇ ಏಪ್ರಿಲ್ ಹನ್ನೆರಡು ಅಥ್ವಾ ಏಪ್ರಿಲ್ ಹತ್ತೊಂಬತ್ತರಂದು ಬಿಡುಗಡೆಯಾಗುತ್ತೆ ಅನ್ನುವಷ್ಟರಲ್ಲಿ ಮತ್ತೊಂದು ಕರಿನೆರಳು ಚಿತ್ರದ ಮೇಲೆ ಬಿದ್ದಿದೆ. ಚುನಾವಣೆ ಬಿಸಿ ಚಿತ್ರದ ಬಿಡುಗಡೆ ದಿನವನ್ನ ಮತ್ತೆ ಮುಂದೂಡುವಂತೆ ಮಾಡಿದೆ. ಇದು, ಸಹಜವಾಗಿ ಅಭಿಮಾನಿಗಳ ನಿರಾಸೆಗೂ ಕಾರಣವಾಗಿದೆ.ಅಸಲಿಗೆ ಉಪ್ಪಿ, ಈ ಬಾರಿಯ ಚುನಾವಣ ಕಣದಲ್ಲಿ ಇಲ್ಲ. ಆದ್ರೆ ಉಪ್ಪಿ ಪಕ್ಷದಿಂದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಇನ್ನು ಕಣದಲ್ಲಿರುವ ಅಭ್ಯರ್ಥಿಗಳ ಪರ ಉಪ್ಪಿ ಪ್ರಚಾರ ಮಾಡಲಿದ್ದಾರೆ. ಹಾಗಾಗಿ, ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ, ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಚಿತ್ರವನ್ನ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ಉಪ್ಪಿ, ಮನವಿಗೆ ತಕ್ಕಂತೆ ಇದೀಗ ಚಿತ್ರದ ಬಿಡುಗಡೆಯನ್ನೂ ಮುಂದೂಡಿರುವ ಚಿತ್ರತಂಡ, ಎಲೆಕ್ಷನ್ ಬಳಿಕ.. ಬಿಡುಗಡೆ ದಿನವನ್ನ ಅನೌನ್ಸ್ ಮಾಡುವ ಸಾಧ್ಯತೆಗಳಿವೆ.ಅಂದ ಹಾಗೇ, ಉಪ್ಪಿಯ ಐ ಲವ್ ಯೂ ಸಿನಿಮಾ, ಬರೀ ಕನ್ನಡದಲ್ಲಷ್ಟೇ ಅಲ್ಲ ತೆಲುಗು ಅಲ್ಲೂ ಬಿಡುಗಡೆಯಾಗ್ತಿದೆ. ಆರ್. ಚಂದ್ರು ನಿರ್ದೇಶನದ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಸೋನುಗೌಡ ಕಾಣಸಿಗಲಿದ್ದಾರೆ.

LEAVE A REPLY

Please enter your comment!
Please enter your name here