ಮದುವೆ ಆದ್ಮೇಲೆ ಗಂಡಸರ್ಯಾಕೆ ಸೈಲೆಂಟ್ ಆಗ್ತಾರೆ-ಇದು ನಿಮ್ಮದೇ ಸ್ಟೋರಿ ಅನ್ಸುತ್ತೆ – ಡೌಟ್ ಇದ್ರೆ ಗೂಗಲ್ ನೋಡಿ

0
1774

ಇದಕ್ಕೆ ಈ ರೀತಿ ಕ್ಯಾಪ್ಶನ್ ಕೊಡಲು ಮುಖ್ಯ ಕಾರಣ ಈ ಚಿತ್ರದ ಟೀಸರ್ ಹಾಗು ಅದರಲ್ಲಿ ಬರುವ ಮೊದಲ ಡೈಲಾಗ್ … ಇದು ಮೋಸ್ಟ್ಲಿ ನಮ್ಮ ಸುತ್ತ ಮುತ್ತ ಇರೋ ಸಾಕಷ್ಟು ಗಂಡು ಮಕ್ಕಳಿಗೆ ಅನ್ವಯಿಸುತ್ತೆ ಅನ್ನೋದ್ರಲ್ಲಿ ಡೌಟ್ ಇಲ್ಲ .. ನಿಮ್ಮ ಫ್ರೆಂಡ್ ಲಿಸ್ಟ್ನಲ್ಲಿ ಯಾರಾದ್ರೂ ಇದ್ರ್ ಇರ್ಬಹುದು … ಬೇಕಾದ್ರೆ ಈ ಟೀಸರ್ ನೋಡಿ ಆಮೇಲೆ ನಿಮಗೆ ಕ್ಲಿಯರ್ ಪಿಕ್ಚರ್ ಸಿಗುತ್ತೆ …

ಟೀಸರ್ ನೋಡಿದ್ಮೇಲೆ ಇದು ನಂದೇ ಸ್ಟೋರಿ ಅಂತ ನಿಮಗೆ ಅನ್ನಿಸಿದ್ರೂ ಆಶ್ಚರ್ಯ ಇಲ್ಲ ಬಿಡಿ … ಯಾಕಂದ್ರೆ ತುಂಬಾ ಜನ ಹುಡುಗ್ರು ಮದುವೆ ಆದ್ಮೇಲೆ ಸೈಲೆಂಟ್ ಆಗಿರ್ತರೆ ಬಿಡಿ .. ಆಗ್ಲೇಬೇಕು … ಆದ್ರೆ ಯಾಕೆ ಸೈಲೆಂಟ್ ಆಗ್ತಾರೆ ಅನ್ನೋದಕ್ಕೆ ಉತ್ತರ ಈ ಗೂಗಲ್ ನಲ್ಲಿ ಸಿಗಬಹುದು ಅನ್ಸುತ್ತೆ …

ತನ್ನ ಅದ್ಭುತ ಸಾಹಿತ್ಯದಿಂದ ಕನ್ನಡ ಗಾನ ರಸಿಕರ ಮನದಾಳದಲ್ಲಿ ಬೇರೂರಿರುವ ನಾಗೇಂದ್ರ ಪ್ರಸಾದ್ ಈಗ ಗೂಗಲ್ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ … ಟಗರು ಚಿತ್ರಕ್ಕೆ ಇವರು ಬರೆದ ಟೈಟಲ್ ಸಾಂಗ್ ಸೂಪರ್ ಹಿಟ್ ಆಗಿರುವ ಬೆನ್ನಲ್ಲೇ ಇವ್ರು ಗೂಗಲ್ ಪ್ರಚಾರ ಶುರು ಮಾಡಿಕೊಂಡಿದ್ದಾರೆ … ಇವರ ಗೂಗಲ್ ಹಾಡುಗಳನ್ನು ಟ್ರೈಲರ್ಗಳನ್ನು ಮೆಚ್ಚಿಕೊಂಡಿರುವ ಸ್ಯಾಂಡಲ್ವುಡ್ ಸ್ಟಾರ್ಸ್ ಗಳು ಗೂಗಲ್ ಗೆಲುವಿಗೆ ನಾಗೇಂದ್ರ ಪ್ರಸಾದ್ ಜೊತೆಯಲ್ಲಿ ಕೈ ಜೋಡಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ , ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಸೇರಿದಂತೆ ಹಲವರು ಗೂಗಲ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ …

ನಾಗೇಂದ್ರ ಪ್ರಸಾದ್ ಹಾಗು ಶುಭ ಪೂಂಜಾ ಜೋಡಿಯ ಗೂಗಲ್ ನ ಟೀಸರ್ ಹಾಗು ಹಾಡುಗಳು ಈಗಾಗಲೇ ಸಾಕಷ್ಟು ಸುದ್ದಿ ಮಾಡ್ತಿವೆ .. ಈ ಹಿಂದೆ ಚೌಕ ಚಿತ್ರಕ್ಕೆ ಅಪ್ಪ ಈ ಲವ್ ಯು ಪಾ ಅನ್ನೋ ಹಾಡು ಬರೆದಿದ್ದ ನಾಗೇಂದ್ರ ಪ್ರಸಾದ್ ಈ ಚಿತ್ರದಲ್ಲಿ ಅಂತಹದ್ದೇ ಜೋ ಲಾಲಿ ಜೋ ಲಾಲಿ ಅನ್ನೋ ಅಪ್ಪ ಮಗಳ ಬಗ್ಗೆ ಇನ್ನೊಂದು ಹಾಡನ್ನು ಬರೆದಿದ್ದಾರೆ…

ಮುಂದಿನ ತಿಂಗಳ 16 ರಂದು ಗೂಗಲ್ ಸಿನಿಮಾ ತೆರೆಮೇಲೆ ಬರಲು ಸಜ್ಜಾಗಿದೆ …ಪ್ರಪಂಚದ ಎಲ್ಲ ಪ್ರೆಶ್ನೆಗಳಿಗೆ ಉತ್ತರ ಕೊಡುವ ಗೂಗಲ್ ಕೂಡ ಇದುವರೆಗೆ ಮದುವೆ ಆದ್ಮೇಲೆ ಯಾಕೆ ಗಂಡಸರು ಸೈಲೆಂಟ್ ಆಗ್ತಾರೆ ಅನ್ನೋ ಪ್ರೆಶ್ನೆಗೆ ಉತ್ತರ ಕೊಟ್ಟಿಲ್ಲ ಆದರೆ ನಮ್ಮ ನಾಗೇಂದ್ರ ಪ್ರಸಾದ್ರವರ ಈ ಗೂಗಲ್ ಈ ಪ್ರೆಶ್ನೆಗೆ ಉತ್ತರ ಕೊಡಬಹುದಾ ಅನ್ನೋದನ್ನ ಮಿಸ್ ಮಾಡದೇ ಚಿತ್ರಮಂದಿರದಲ್ಲಿ ನೋಡಿ ತಿಳ್ಕೊಳಿ ….

ನಿಮಗೆ ಇದು ಇಷ್ಟವಾದಲ್ಲಿ ಪ್ರಚಾರ facebook ಹಾಗು website like ಮಾಡಿ share ಮಾಡಿ.. youtube ನಲ್ಲಿ ಪ್ರಚಾರ ಮೀಡಿಯಾ subscribe ಮಾಡಿ …

LEAVE A REPLY

Please enter your comment!
Please enter your name here