ಆರೆಂಜ್ ಟೈಟಲ್ ಸಾಂಗಿಗೆ ಗೋಲ್ಡನ್ ಫ್ಯಾನ್ಸ್ ಫಿಧಾ.

0
78

ಆರೆಂಜ್‌ ಸಿನಿಮಾದ ಹಾಡುಗಳು ಸಖತ್ತಾಗಿ ಸೌಂಡ್‌ ಮಾಡ್ತಿವೆ. ಎಸ್‌.ಎಸ್‌ ತಮನ್ ಟ್ಯೂನ್ಸ್‌ ಮತ್ತೊಮ್ಮೆ ಕನ್ನಡಿಗರ ನಾಡಿಮಿಡಿತವನ್ನ ಹಿಡಿದಿವೆ. ಜೂಮ್‌ ಕಾಂಬಿನೇಷನ್‌ನಲ್ಲೇ ನಿರ್ದೇಶಕ ಪ್ರಶಾಂತ್‌ ರಾಜ್‌ ಮಾಡಿರೋ ಈ ಸಿನಿಮಾದ ಪ್ಲಸ್‌ ಪಾಯಿಂಟ್‌ಗಳಲ್ಲಿ ಆರೆಂಜ್‌ ಚಿತ್ರದ ಗೋಲ್ಡು ಗೋಲ್ಡು ಸಾಂಗ್‌ ಕೂಡ ಒಂದು. ಈ ಸಾಂಗ್‌ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಸ್ಪೆಷಲ್‌ ಸಾಂಗ್‌. ಸಿನಿಮಾದಲ್ಲಿ ಎಂಟ್ರಿ ಸಾಂಗ್‌. ಮಾಸ್‌ ಮಸಾಲೆ ಭರಿತವಾಗಿರೋ ಈ ಹಾಡು ಕೇಳ್ತಿದ್ರೇನೆ ಎರಡು ಸ್ಟೆಪ್‌ ಹಾಕ್ಬೇಕು ಅನ್ನಿಸುತ್ತೆ. ತಮನ್‌ ಟ್ಯೂನ್‌ ಆರೇಂಜ್‌ಗೆ ರಿಧಮಿಕ್‌ ಆಗಿದೆ. ಪ್ರಮೋಷನ್‌ಗಾಗಿ ರಿಲೀಸ್‌ ಆಗಿರೋ ಎರಡು ನಿಮಿಷದ ವಿಡಿಯೋ ಸಾಂಗ್‌ನಲ್ಲಿ ಗಣೇಶ್‌ ಡ್ಯಾನ್ಸ್‌, ಮೂಮೆಂಟ್ಸ್‌ ಸ್ಟೈಲ್ಸ್‌ ಸಖತ್‌ ಅಟ್ರ್ಯಾಕ್ಟೀವ್‌ ಆಗಿದೆ. ಬಿಗ್‌ ಸ್ಕ್ರೀನ್‌ನಲ್ಲಿ ಈ ಹಾಡು ಮಸ್ತ್‌ ಮಜಾ ಕೊಡೋದ್ರಲ್ಲಿ ನೋಡೌಟ್‌. ಸಿನಿಮಾ ನೋಡಿದವರು ಗ್ಯಾರೆಂಟಿ ಈ ಹಾಡು ಬಂದಾಗ ಎರಡು ಸ್ಟೆಪ್‌ ಹಾಕೇ ಹಾಕ್ತಾರೆ. ಅಂದ್ಹಾಗೆ ಆರೆಂಜ್‌ ಚಿತ್ರ ಇದೇ ವಾರ ಅಂದ್ರೆ 7ನೇ ತಾರೀಖು ರಾಜ್ಯಾದಾದ್ಯಂತ ರಿಲೀಸ್‌ ಆಗ್ತಿದೆ.

 https://youtu.be/_tdnLGp2A5A

LEAVE A REPLY

Please enter your comment!
Please enter your name here