ಆರೆಂಜ್ನಲ್ಲಿದ್ದಾರ ಇಬ್ಬರು‌ ಗೋಲ್ಡನ್ ಸ್ಟಾರ್ – ಒಬ್ಬರು ಗಣೇಶ್ ಇನ್ನೋಬ್ಬರು ?

0
71

ಸಾಮನ್ಯವಾಗಿ ಎಲ್ಲಾ ಸ್ಟಾರ್​ಗಳಿಗೂ ಒಬ್ಬ ಡ್ಯೂಪ್ಲಿಕೇಟ್​ ಇದ್ದೇ ಇರ್ತಾರೆ. ಇವ್ರನ್ನ ಆರ್ಕೆಸ್ಟ್ರಾದವ್ರು, ಇವೆಂಟ್​ ನವ್ರು ತಮ್ಮ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ತಾರೆ. ಡ್ಯೂಪ್ಲಿಕೇಟ್​ ರಾಜ್​ಕುಮಾರ್​, ಅಂಬರೀಶ್​, ಶಂಕರ್​ನಾಗ್​, ವಿಷ್ಣುವರ್ಧನ್​ ಹೀಗೆ, ಈಗೀಗ ಇಂಥಾ ಕಲಾವಿದರನ್ನ ಸಿನಿಮಾಗಳಲ್ಲೂ ನಟಿಸಲು ಆಹ್ವಾನಿಸ್ತಾರೆ. ಸಾಕಷ್ಟು ಡ್ಯೂಪ್ಲಿಕೇಟ್​ಗಳು ಸಿನಿಮಾದಲ್ಲಿ ನಟಿಸಿ, ಜನರನ್ನ ರಂಜಿಸಿದ್ದಾರೆ. ಆದ್ರೆ ಆರೇಂಜ್​ ಸಿನಿಮಾದಲ್ಲಿ ಡ್ಯೂಪಿಕೇಟ್​ ಗಣೇಶ್​ರನ್ನ ಗಣೇಶ್​ ಜೊತೆಗೆ ತೆರೆಗೆ ತರ್ತಾ ಇದ್ದಾರೆ ನಿರ್ದೇಶಕ ಪ್ರಶಾಂತ್​ ರಾಜ್​..
ಯಾರು ಗೊತ್ತಾ ಡ್ಯೂಪ್ಲಿಕೇಟ್​ ಗೋಲ್ಡನ್​ ಸ್ಟಾರ್​..!
ಅಂದಹಾಗೆ ಈ ಡ್ಯೂಪ್ಲಿಕೇಟ್​ ಗೋಲ್ಡನ್​ ಸ್ಟಾರ್​​ ತುಂಬಾನೇ ಸ್ಪೆಷಲ್​, ಯಾಕಂದ್ರೆ ಗಣೇಶ್​ ಥರಾ ನಡೆಯೋ, ಮಾತಾಡೋ ಈ ಡ್ಯೂಪ್ಲಿಕೇಟ್​ ಮತ್ಯಾರು ಅಲ್ಲ, ಗಣೇಶ್​​ ಆಪ್ತಮಿತ್ರ, ನಟ ರವಿಶಂಕರ್​ ಗೌಡ. ಹೀರೋ ಆಗಿ, ಕಮಿಡಿಯನ್ನಾಗಿ ಮನೆಮಾತಾಗಿರೋ ರವಿಶಂಕರ್ ಈ ನಡುವೆ ಗಣೇಶ್​ ಅಭಿನಯದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಣೇಶ್​ ಹಾಗೂ ರವಿಶಂಕರ್​ ಗೌಡ ಕೆಮಿಸ್ಟ್ರಿ ನೋಡುಗರನ್ನ ನಗೆಗಡಲಲ್ಲಿ ತೇಲಿಸೋದು ಪಕ್ಕಾ. ಈ ಸೂಪರ್​ ಕಾಂಬಿನೇಷನ್ ಆರೇಂಜ್​ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಯಾಕೆ ಗಣೀಯ ಡ್ಯೂಪ್​ ಆಗಿರ್ತಾರೆ ರವಿಶಂಕರ್​, ಏನ್​ ಮಾಡ್ತಾರೆ ಅನ್ನೋದನ್ನ ಸಿನಿಮಾದಲ್ಲಿ ನೋಡಿಯೇ ತಿಳ್ಕೋಬೇಕು.

LEAVE A REPLY

Please enter your comment!
Please enter your name here