ಅವಂತಿಕ ಶೆಟ್ಟಿ ಮೇಲೂ ಕೋಪಗೊಂಡಿದ್ದಾರೆ ಕನ್ನಡ ಪ್ರೇಕ್ಷಕರು – ಇವರು ಕ್ಷಮೆ ಕೇಳಬೇಕಂತೆ

0
516

ಅವಂತಿಕಾ ಶೆಟ್ಟಿ. ಸದ್ಯ.. ವಿವಾದದ ಸುಳಿಯಲ್ಲಿ ಸಿಲುಕಿದ ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ. ಅಭಿನಯಕ್ಕಿಂತ ನಖರಾಗಳಿಂದನೇ ಸದ್ದು ಸುದ್ದಿ ಮಾಡುವ ಅವಂತಿಕಾ, ರಾಜು ಕನ್ನಡ ಮೀಡಿಯಂ ತಂಡಕ್ಕೆ ಕೊಟ್ಟಿದ್ದ ಕಾಟ ಇನ್ನು ಗಾಂಧಿನಗರದ ಗಲ್ಲಿಗಳಿಂದ ಹಿಡ್ದು ಗೋಲ್ಡ್ ಪಿಂಚ್ ಅಂಗಳದವರೆಗೂ ಹಾಗೇ ಹಸಿರಾಗಿವೆ. ಇಂತಹ ಅವಂತಿಕಾ.. ಇದೀಗ, ವಿವಾದ ಭುಗಿಲೇದ್ದರು. ಕನ್ನಡಿಗರು ಸಿಟ್ಟಾಗಿದ್ದರು. ಹೌದು, ಕನ್ನಡಿಗರು ಕಚಡಾ, ಲೋಫರ್ಸ್ಗ ಹೇಳಿದವರಲ್ಲಿ ಅನೂಪ್ & ನಿರೂಪ್ ಅಷ್ಟೇ ಇರಲಿಲ್ಲ. ಅವಂತಿಕಾನೂ ಇದ್ದರು.

ಭಂಡಾರಿ ಬ್ರದರ್ಸ್ ಉತ್ತರ ಕೊಟ್ಟ ಬೆನ್ನಲ್ಲೇ ಕೇಕೆ ಹಾಕಿದ್ದರು. ಇಂತಹ ಅವಂತಿಕಾ ಕಚಡಾ ವಿವಾದದ ಬಗ್ಗೆ ಇನ್ನು ಕನ್ನಡಿಗರಲ್ಲಿ ಕ್ಷಮೆ ಕೇಳಿಲ್ಲ. ಅನೂಪ್ ಮತ್ತು ನಿರೂಪ್ ಸಾಮಾಜಿಕ ಜಾಲತಾಣದ ಮೂಲಕ, ವಿಡಿಯೋ ಬೈಟ್ ಮೂಲಕ ಆಗ್ಲೇ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ಆದ್ರೆ ಅವಂತಿಕಾಗೆ ಮಾತ್ರ ಇನ್ನು ಕ್ಷಮೆ ಕೇಳುವ ಮನಸು ಆದಂತಿಲ್ಲ. ಬಾಯ್ತುಂಬ ಬೈದು ಇದೀಗ ಸೈಲೆಂಟಾಗಿರುವ ಅವಂತಿಕಾ ಬಗ್ಗೆ ಸದ್ಯ ಆಕ್ರೋಶ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ.. ಅವಂತಿಕಾರಂತಹ ನಟಿಯರು ಕನ್ನಡ ಚಿತ್ರರಂಗಕ್ಕೆ ಬೇಕಾ ಅನ್ನುವ ಪ್ರಶ್ನೆನೂ ಇದೇ ವೇಳೆ ಇಲ್ಲಿ ಕೇಳಿ ಬರ್ತಿ ದೆ. ಅವಂತಿಕಾಗೆ ವಿವಾದದ ಕಿಡಿ ಮತ್ತಷ್ಟು ಜೋರಾಗಿ ಹೊತ್ತಿಕೊಳ್ಳುವಷ್ಟರಲ್ಲಿ ಸಾರಿ ಕೇಳ್ತಾರಾ ಅಥ್ವಾ ಇದೇ ತರಹ ಮೌನಕ್ಕೆ ಶರಣಾಗ್ತಾರಾ, ಕಾದು ನೋಡಬೇಕು

LEAVE A REPLY

Please enter your comment!
Please enter your name here