ಅರೆಸ್ಟ್ ಭೀತಿಯಲ್ಲಿ ಚಂದನ್ ಶೆಟ್ಟಿ – ಇದು ಗಾಂಜ ತಂದ‌ ಆಪತ್ತು

0
363

ಸಾಮಾಜಿಕ ಜಾಲತಾಣದಲ್ಲಿ ಕಳೆದ ಮೂರು ವರ್ಷದ ಕೆಳಗೆ ಒಂದು ಹಾಡು ಭಾರೀ ಸದ್ದು ಮಾಡಿತ್ತು. ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಡಿಯೋ ಪ್ರೇಮಿಗಳಿಗೆ ಅದ್ರಲ್ಲೂ ಚಂದನ್ ಶೆಟ್ಟಿ ಅಭಿಮಾನಿಗಳ ಪಾಲಿಗಂತೂ ಅದು ಆಂಥಮ್ ಆಗ್ ಬಿಟ್ಟಿತ್ತು. ಅದುವೇ. ಭಂಗಿ ಹಾಡು.. ಅಂದ್ರೆ ಗಾಂಜಾ ಹಾಡು. ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿಯಾಗಿದ್ದ ಅಂತ್ಯ ಚಿತ್ರದ ಹಾಡು.. ಇದೀಗ ಚಂದನ್ ಶೆಟ್ಟಿ ತಲೆ ನೋವಿಗೆ ಕಾರಣವಾಗಿದೆ. ಪೊಲೀಸರ ಮುಂದೆ ಹಾಜರಾಗಬೇಕಾದ ಪರಿಸ್ಥಿತಿಯನ್ನ ತಂದೊಡ್ಡಿದೆ. ಹೌದು, ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿದ ಗಾಂಜಾ ಹಾಡಿನಲ್ಲಿ ಆಕ್ಷೇಪಾರ್ಹ ಸಾಲುಗಳಿವೆ ಅನ್ನುವ ವಾದ ಮಾಡ್ತಿರುವ ಪೊಲೀಸ್ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದೆ.

ಹೌದು, ಶಿವನು ಹಿಡಿದರೆ ಭಂಗಿ, ನಾವು ಹಿಡಿದರೆ ಕಂಬಿ.. ಬಾಬಾ ಎಳೆದರೆ ಪ್ರಸಾದ.. ನಾವು ಎಳೆದರೆ ನಿಷೇಧ.. ಬಿಡಬೇಡ ಧಮ್ಮು.. ಇದೇ ವಿಸ್ಕಿ ರಮ್ಮು..” ಹೀಗೆ ಸಾಲುಗಳನ್ನೊಂದಿದ್ದ ಹಾಡು, ಪೊಲೀಸರ ಪ್ರಕಾರ ಪ್ರಚೋದನೆ ನೀಡುವಂತಿದೆ. ಇದೇ ಆಕ್ಷೇಪಕ್ಕೂ ಕಾರಣನೂ ಆಗಿದೆ. ಇದೇ ಕಾರಣಕ್ಕೆ ನೋಟಿಸ್ ನೀಡಿರುವ ಪೊಲೀಸ್ ಇಲಾಖೆ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ತಿಳಿಸಿದೆ. ಇನ್ನು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ ಹಾಡಿನಲ್ಲಿರುವ ಸಾಹಿತ್ಯ ನನ್ನದಲ್ಲ ಎಂದಿದ್ದಾರೆ. ಮುತ್ತು ಅವರು ನಿರ್ದೇಶನ ಮಾಡಿರುವ ಅಂತ್ಯ ಹೆಸರಿನ ಸಿನಿಮಾದಲ್ಲಿ ಅವರೇ ಬರೆದಿರುವ ಸಾಹಿತ್ಯಕ್ಕೆ ನಾನು ಧ್ವನಿ ನೀಡಿದ್ದೇನೆ ಅಷ್ಟೇ. ಇನ್ನು, ಹಾಡು ಸಮಾಜಕ್ಕೆ ಹಾಗೂ ಯುವಕರಿಗೆ ಮಾರಕ ಅನಿಸಿದ್ದಲ್ಲಿ ಸಂಬಂಧಪಟ್ಟವರು ಹಾಡನ್ನ ತೆಗೆದು ಹಾಕಬಹುದು. ಅದಕ್ಕೆ ನನ್ನ ಅಡ್ಡಿ ಇಲ್ಲ ಅಂದಿದ್ದಾರೆ. ಮನರಂಜನೆ ದೃಷ್ಠಿನಿಂದ ಅಷ್ಟೇ ಹಾಡು ಹಾಡಿದ್ದು, ಒಪ್ಪಿಕೊಂಡಿದ್ದು, ಸದ್ಯ ಚಿತ್ರೀಕರಣದಲ್ಲಿದ್ದೇನೆ. ಸದ್ಯದಲ್ಲೇ ಸಂಬಂಧ ಪಟ್ಟವರನ್ನ ಸಂಪರ್ಕಿಸುತ್ತೇನೆ ಅಂದಿದ್ದಾರೆ.

LEAVE A REPLY

Please enter your comment!
Please enter your name here