ಅಮ್ಮನ‌ ಬಗ್ಗೆ ಮನಕಲುಕುವ ಕವಿತೆ ಬರೆದ ಟಗರು ಡಾಲಿ – ತಾಯಿಗೆ ತಕ್ಕ ಮಗ

0
903

ಡಾಲಿ ಧನಂಜಯ್‌ಗೆ ಅಮ್ಮ ಅಂದ್ರೆ ಪ್ರಾಣ. ಅಮ್ಮನನ್ನ ವಿಪರೀತವಾಗಿ ಪ್ರೀತಿಸುವ, ಅಮ್ಮನನ್ನ ಆರಾಧಿಸುವ ಧನು, ಸಮಯ ಸಿಕ್ಕಾಗೆಲ್ಲಾ ಅಮ್ಮನಿಗೆ ಕೆಲ್ಸದಲ್ಲಿ ನೆರವಾಗ್ತಾರೆ. ಅಡುಗೆಯಲ್ಲಿ ಸಹಾಯ ಮಾಡ್ತಾರೆ. ಇಂತಹ.. ಡಾಲಿ ಧನಂಜಯ್, ವಿಶ್ವ ತಾಯಂದಿರ ದಿನವನ್ನ ಸಂಭ್ರಮದಿಂದ ಆಚರಿಸ್ದೇ ಇದ್ದರೆ ಹೇಗೆ..? ಹೆತ್ತಮ್ಮನಿಗೆ ನಮನ ಸಲ್ಲಿಸ್ದೇ ಇದ್ದರೆ ಹೇಗೆ..? ಬಹುಶ, ಇದೇ ಕಾರಣಕ್ಕೋ ಏನೋ ಧನಂಜಯ್ ಇವತ್ತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಮ್ಮನಿಗಾಗಿ, ಅಮ್ಮಂದಿರ ದಿನದ ಪ್ರಯುಕ್ತ ಕವನ ಬರೆದಿದ್ದಾರೆ. ಹಾಗಿದ್ದರೆ ಧನಂಜಯ್ ಬರೆದ ಕನವ ಹೇಗಿದೆ ಅಂತೀರಾ. ಇಲ್ಲಿದೆ ನೋಡಿ ಡಾಲಿ ಧನು ಪ್ರೀತಿಯಿಂದ ಮತ್ತು ಹೆಮ್ಮೆಯಿಂದ ಬರೆದಿರುವ ಕವನ

ಧನಂಜಯ್ ಕವನ :

ನನ್ನವ್ವ ಎನ್ನುವ ಹೆಸರಿನಲ್ಲಿ ಡಾಲಿ ಬರೆದಿರುವ ಕವನ ಹೀಗಿದೆ ನೋಡಿ. ಏನ್ ಕೆಲಸ ಮಾಡ್ತಿದೀಯ ಮಗ..? ಅಂತ ಕೇಳ್ಳಿಲ್ಲ ನನ್ನವ್ವ, ನಿನಗನ್ಸಿದ್ ಏನಾರ ಮಾಡ್ಲ ಮಗ, ಯಾರಿಗು ತೊಂದರೆ ಕೊಡಬೇಡ ಅಂದ್ಲು. ಎಷ್ಟು ದುಡಿತೀಯೊ ಮಗ..? ಅಂತ ಕೇಳ್ಳಿಲ್ಲ ನನ್ನವ್ವ, ಸಂಜೆ ಮನಿಗ್ ಬಂದಾಗ ಕೈ ತುತ್ತು ಹಾಕಿ, ಸುಸ್ತಾಗಿರ್ತೀಯ ಉಂಡು ಮಂಕಳ್ಳ ಮಗ ಅಂದ್ಲು.
ನಂಗೇನ್ ಮಾಡ್ದೆ ಮಗ..? ಅಂತ ಕೇಳ್ಳಿಲ್ಲ ನನ್ನವ್ವ, ತಾನ್ ಹೊಂಚಿದ್ ಒಂದುಂಡೆ ಬೆಣ್ಣೆ ಹಾಕಿ, ಉಂಡ್ಕಂಡ್ ಚೆನ್ನಾಗಿರ್ಲ ಮಗ ಅಂದ್ಲು. ಕುಂತ್ಕಂಡ್ ಎಲ್ಡ್ ಮಾತಾಡು ಅಂತ ಕೇಳ್ಳಿಲ್ಲ ನನ್ನವ್ವ, ಸೋತು ಬಂದಾಗ್ಲೆಲ್ಲ ಜೋಗುಳ ಹಾಡಿ ಯಾವಾಗ್ಲು ನಗ್ತಾ ಇರ್ಲ ಮಗ ಅಂದ್ಲು.
ನಂಗೂ ವಯಸ್ಸಾತು, ಇನ್ ಆಗಕ್ಕಿಲ್ಲ ಕಣ್ ಮಗ ಅನ್ಲಿಲ್ಲ ನನ್ನವ್ವ, ಒಂದ್ ಮದುವೆ ಆಗ್ಲ ಮಗ, ನಿಂಗೂ ಆಸರೆ ಆಗುತ್ತೆ ಅಂದ್ಲು. ನಿನ್ ಕಳ್ಕಳಕ್ ನನ್ ಕೈಯಲ್ ಆಗಕ್ಕಿಲ್ಲ ನಿನ್ನಂತವಳನ್ನೆ ನಂಗ್ ಕಟ್ತಿಯೇನೆ, ಅವ್ವ? ಅಂದೆ ಹುಂಕಣ್ ಸುಮ್ನಿರ್ಲ ಮಗ, ಅಂತವಳನೆ ಕಟ್ತೀನಿ, ಜೊತಿಗ್ ನಾನು ಮಗಳಾಗಿ ಹುಟ್ಟಿನಿನ್ನ ಹಿಂಗೆ ನೋಡ್ಕಂತೀನಿ, ಅಂದ್ಲು ನನ್ನವ್ವ. – ಡಾಲಿ ಧನಂಜಯ.

LEAVE A REPLY

Please enter your comment!
Please enter your name here