ಅಭಿಮಾನಿಗಳಿಗಾಗಿ ಮತ್ತೆ ಬ್ಯಾಟ್ ಹಿಡಿದ ದರ್ಶನ್ – ಡಿ ಕಪ್ ಎಕ್ಷಕ್ಲೂಸಿವ್ ಪೋಟೋಸ್ ಇಲ್ಲಿದೆ

0
1212

ಬೆಂಗಳೂರಿನ ಕೆಂಗೇರಿಯಲ್ಲಿರುವ ಎಸ್‌ಜೆಬಿಐಟಿ ಫುಟ್‌ಬಾಲ್ ಮತ್ತು ಕ್ರಿಕೆಟ್ ಕ್ರೀಡಾಂಗಣದಲ್ಲಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ `ಡಿ ಕಂಪೆನಿ’ ಹಮ್ಮಿಕೊಂಡಿರುವ `ಡಿ ಬ್ರದರ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಸಿಕ್ಕಿದೆ. ಅಭಿಮಾನಿಗಳು ಅಭಿಮಾನದ ಪ್ರತೀಕವಾಗಿ ಅಭಿಮಾನದಿಂದ ಆಯೋಜಿಸಿರುವ ಪಂದ್ಯಾವಳಿಯ ಉದ್ಘಾಟನೆಯನ್ನ ಖುದ್ದು ಅಭಿಮಾನಿಗಳ ಅಭಿಮಾನಿ ದರ್ಶನ್ ಮಾಡಿದ್ದು ವಿಶೇಷ.

ಉದ್ಘಾಟನೆಯಲ್ಲಿ ದಿನಕರ್ ಮತ್ತು ಮನೋಜ್ ಕೂಡಾ ಭಾಗಿಯಾಗಿದ್ದರು. ಇನ್ನು
ದರ್ಶನ್ ಅವರ ಅಭಿಮಾನಿ ಬಳಗ ಹತ್ತು ತಂಡಗಳಾಗಿ ಈ ಪದ್ಯಾಂಟದಲ್ಲಿ ಭಾಗಿಯಾಗಿವೆ.
ಕರ್ನಾಟಕದ ನಾನಾ ಭಾಗಗಳಿಂದ ತಂಡೋಪತಂಡವಾಗಿ ಈ ಕ್ರೀಡಾಂಗಣಕ್ಕೆ ಆಗಮಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.ಹತ್ತು ತಂಡಗಳೊಂದಿಗೆ ಈ ಕ್ರಿಕೆಟ್ ಸೆಣೆಸಾಟದ ಕಣದಲ್ಲಿರುವ
ದರ್ಶನ್ ಅಭಿಮಾನಿಗಳು ತಮ್ಮ ತಮ್ಮ ತಂಡಗಳಿಗೆ ದರ್ಶನ್ ಅಭಿನಯದ ಚಿತ್ರಗಳ ಹೆಸರನ್ನಿಟ್ಟಿರೋದು ವಿಶೇಷ.

ಯಸ್. ಕರಿಯ ಕಿಂಗ್ಸ್, ದಾಸ ಡೇರ್‌ಡೆವಿಲ್ಸ್ ದಾವಣಗೆರೆ, ಸುಂಟರಗಾಳಿ ಡೆಸ್ಟ್ರಾಯರ್‍ಸ್ ಹುಬ್ಬಳ್ಳಿ, ಶಾಸ್ತ್ರಿ ಸ್ಟ್ತೈಕರ್ಸ್ ಶಿವಮೊಗ್ಗ, ನವಗ್ರಹ ಚಾಲೆಂಜರ್ಸ ನೆಲಮಂಗಲ, ಮಂಡ್ಯ ಡಿ ರೆಬೆಲ್ಸ್, ಕುರುಕ್ಷೇತ್ರ ವಾರಿಯರ್ಸ್ ಮೈಸೂರು, ಚಕ್ರವರ್ತಿ ಚಾಲೆಂಜರ್ಸ್ ಹಾಸನ್, ಗಜಪಡೆ ಗ್ಲಾಡಿಯೇಟರ್ಸ್ ಕೆಂಗೇರಿ, ಚಿಂಗಾರಿ ಚಾರ್ಜರ್ಸ್ ತಿಪಟೂರು ಹೀಗೆ ಹತ್ತು ತಂಡಗಳು ಕ್ರಿಕೆಟ್ ಕಣದಲ್ಲಿ ಸೆಣೆಸಲಿವೆ. ಅಂದಹಾಗೆ ಈ ಕ್ರಿಕೆಟ್ ಪಂದ್ಯಾಟ ಇಂದು ಮತ್ತು ನಾಳೆ ನಡೆಯಲಿದೆ. 

LEAVE A REPLY

Please enter your comment!
Please enter your name here