ಅಭಿಮಾನಿಗಳನ್ನು ಭೇಟಿ‌ ಮಾಡಿದ ಟಗರು ಶಿವ , ಡಾಲಿ – ಇದು 50ರ ಸಂಭ್ರಮ

0
1173

ಟಗರು. ಪೊಗರಿನೊಂದಿಗೆ ಚಿತ್ರಮಂದಿರಕ್ಕೆ ಬಂದ ಸಿನಿಮಾ. ಅತೀವ ನಿರೀಕ್ಷೆ, ಅತೀವ ಕೂತುಹಲವನ್ನೊತ್ತು.. ಚಿತ್ರಮಂದಿರದ ಅಂಗಳಕ್ಕೆ ಬಂದ ಟಗರುಗೆ, ಪ್ರೇಕ್ಷಕ ಬಹುಪರಾಕ್ ಹಾಕಿದ್ದಾನೆ. ಅದು ಸತತ ಐವತ್ತು ದಿನ. ಹೌದು.. ಟಗರು ೫೦ದಿನಗಳ ಯಶಸ್ವೀ ಪ್ರದರ್ಶನವನ್ನ ಕಂಡಿದೆ. ಐಗರು 50 ದಿನದ ಸಂಭ್ರಮವನ್ನ, ಮೆಮೆರೊಬೆಲ್ ಆಗಿಸಲು ಚಿತ್ರತಂಡ ನಿರ್ಧರಿಸಿದೆ. ಗೆಲುವನ್ನ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಮುಂದಾಗಿದೆ.

ಯಸ್, ನಿಮಗೆ ಗೊತ್ತಿದ್ದಂತೆ.. ಟಗರು, ಬಿಡುಗಡೆ ಬಳಿಕ ಚಿತ್ರತಂಡ ವಿಜಯಯಾತ್ರೆಯನ್ನ ಮಾಡಿತ್ತು. ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿತ್ತು. ಇದೀಗ.. 50 ದಿನ ಪ್ರದರ್ಶನದ ವಿಶೇಷವಾಗಿ ಶಿವಣ್ಣ, ಮತ್ತೆ ವಿಜಯಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಚಿತ್ರಮಂದಿರಗಳಿಗೆ ವಿಸಿಟ್ ಕೊಡಲಿದ್ದಾರೆ. ಅಭಿಮಾನಿಗಳೊಟ್ಟಿಗೆ ಕುಂತು ಚಿತ್ರ ನೋಡಿ ಎಂಜಾಯ್ ಮಾಡಲಿದ್ದಾರೆ. ಟಗರು ಗೆಲುವನ್ನ ಅಭಿಮಾನಿಗಳೊಂದಿಗೆ ಸಂಭ್ರಮಿಸಲಿದ್ದಾರೆ.

ಬೆಂಗಳೂರಿನ ಸಂತೋಶ್, ವೀರೇಶ್, ಗೋಪಾಲನ್ ಆರ್ಚ್, ಸಿದ್ಧಲಿಂಗೇಶ್ವರ ಚಿತ್ರಮಂದಿರಗಳಿಗೆ ಭೇಟಿ ಕೊಡಲಿರುವ ಶಿವಣ್ಣ, ಏಪ್ರಿಲ್ 15ರಂದು.. ಹಾಸನ, ಮಂಡ್ಯ, ಮೈಸೂರಿನ ಚಿತ್ರಮಂದಿರಗಳಿಗೆ ಬೇಟಿ ಕೊಡಲಿದ್ದಾರೆ. ವಿಜಯಯಾತ್ರೆಯ ಭಾಗ 2 ರಲ್ಲಿ ಭಾಗಿಯಾಗಲಿದ್ದಾರೆ. ಅಂದ ಹಾಗೇ ಟಗರು ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ದೂರದ ಅಮೆರಿಕಾ ಮತ್ತು ಆಸ್ಟ್ರೇಲಿಯಾದಲ್ಲೂ ಯಶಸ್ವಿ ಪ್ರದರ್ಶನ ಕಾಣ್ತಿದೆ. ಅಭಿಮಾನಿಗಳ ಪ್ರೀತಿಯನ್ನ ಗಳಿಸಿದೆ.

ಇದೀಗ.. ತನ್ನ ಗುಟರನ್ನ ಮತ್ತಷ್ಟು ಜೋರು ಮಾಡಲು ರೆಡಿಯಾಗಿರುವ ಟಗರು, ಕರ್ನಾಟಕದಲ್ಲಿ 50 ದಿನ ಪೂರೈಸಿದ ಖುಷಿಯ ಬೆನ್ನಲ್ಲಿ, ದುಬೈನಲ್ಲೂ ತೆರೆಗೆ ಬರಲಿದೆ. ಇದಕ್ಕೆ ತಯಾರಿಗಳು ಆಗ್ಲೇ ನಡೆಯುತ್ತಿವೆ. ಇನ್ನು, ಟಗರು ಮೂಲಕ ಶಿವಣ್ಣ ಈ ವರ್ಷ ಎರಡನೇ ಬಾರಿ ಗೆಲುವಿನ ಕೇಕೆ ಹಾಕಿದ್ದಾರೆ. ಮಫ್ತಿ ಬಳಿಕ ಮತ್ತೊಮ್ಮೆ ಸಂಭ್ರಮದ ಅಲೆಯಲ್ಲಿ ತೇಲಿದ್ದಾರೆ. ಈ ಅರ್ಥದಲ್ಲಿ ಟಗರು ಗೆಲುವು ಶಿವಣ್ಣಗೆ ತುಂಬಾನೇ ಸ್ಪೆಷಲ್. ಬರೀ, ಶಿವಣ್ಣಗಷ್ಟೇ ಅಲ್ಲ.. ಪೂರ್ತಿ ಚಿತ್ರತಂಡಕ್ಕೆನೇ ಟಗರು ಸಕ್ಸಸ್ ತುಂಬಾನೇ ಸ್ಪೆಷಲ್.

ಯಾಕಂದ್ರೆ ಡಾಲಿ, ಡಾಲಿಯ ಡಾರ್ಲಿಂಗ್, ಕಾಕ್ರೋಚ್, ಅಂಕಲ್, ಸರೋಜಾ, ಹೀಗೆ ಅನೇಕರ ನಸೀಬು ಬದಲಿಸಿದ್ದು ಇದೇ ಟಗರು ಅಲ್ವಾ. ಲಾಸ್ಟ್ ಬಟ್ ನಾಟ್ ಲಿಸ್ಟ್ ಟಗರು ಸಕ್ಸಸ್‌ನ್ನ ಮನಸಾರೆ ಸೆಲೆಬ್ರೇಟ್ ಮಾಡ್ತಿರುವವ್ರಲ್ಲಿ ಸುಕ್ಕಾ ಸೂರಿ & ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕೂಡಾ ಇದ್ದಾರೆ. ನಿರೀಕ್ಷೆಗೂ ಮೀರಿ ಅಭಿಮಾನಿಗಳಿಂದ ಸಿಕ್ಕ ಪ್ರೀತಿಯಿಂದ ಪುಳಕಿತಗೊಂಡಿರುವ ಇಬ್ಬರು ಇದೇ ಉತ್ಸಾಹದಲ್ಲಿ ಟಗರು 2ಗೂ ತಯಾರಿ ನಡೆಸಿದ್ದಾರೆ. ಟಗರುನ ಇನ್ನು ಅನೇಕ ಕಡೆ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ. ಅದೇನೆ ಇರ್ಲಿೆ, ಸದ್ಯ ಟಗರು 50 ದಿನದ ಯಶಸ್ವೀ ಪ್ರದರ್ಶನವನ್ನ ಕಂಡಿದೆ. ಸದ್ಯ ಪೊಗರಿರುವ ಟಗರುನ ಗುಟುರು ಕೇಳಿದ್ರೆ ಸಿನಿಮಾ ನೂರು ದಿನದ ಪ್ರದರ್ಶನ ಕಾಣೋದು ಖಚಿತ ಅನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರ್ತಿವೆ. ಲೆಟ್ಸ್ ಸೀ…! 

LEAVE A REPLY

Please enter your comment!
Please enter your name here