ಅಭಿನಯ ಚತುರನ‌ ಹುಟ್ಟುಹಬ್ಬಕ್ಕೆ ಎರಡು ಭರ್ಜರಿ ಗಿಫ್ಟ್

0
238

ಸತೀಶ್ ನೀನಾಸಂಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೇ ಸಂಭ್ರಮ ನಿನ್ನೆ ರಾತ್ರಿ ಇನ್ನಷ್ಟು ರಂಗೇರಿತ್ತು. ಇದಕ್ಕೆ ಕಾರಣ ಒಂದು.. ಅಭಿಮಾನಿಗಳು ಸುರಿಸಿದ ಹಾರೈಕೆಯ ಮಳೆಯಾದ್ರೆ, ಇನ್ನೊಂದಡೆ ಬಿಡುಗಡೆಯಾದ ಸತೀಶ್ ಮುಂದಿನ ಚಿತ್ರದ ಟೀಸರ್ಸ್ೀ & ಫಸ್ಟ್ ಲುಕ್‌ಗಳು. ಹೌದು, ಸತೀಶ್ ಹುಟ್ಟುಹಬ್ಬದ ಪ್ರಯುಕ್ತ ಅಯೋಗ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬರೀ ಅಯೋಗ್ಯನಷ್ಟೇ ಅಲ್ಲ ಸತೀಶ್ ಫ್ಲೇವರ್ ಇರುವ ಓಲ್ಡ್ ಮದ್ರಾಸ್ ರೋಡ್‌ನ ದರ್ಶನ ಕೂಡಾ ಬರ್ತ್‌ಡೇ ಪ್ರಯುಕ್ತ ಆಗಿದೆ.

ಅಂದ ಹಾಗೇ ನಿನ್ನೆ ರಾತ್ರಿನಿಂದನೇ ಶುರುವಾಗಿರುವ ಸತೀಶ್ ಹುಟ್ಟುಹಬ್ಬದ ಸಂಭ್ರಮಾಚರಣೆ ಇವತ್ತು ಬೆಳ್ಳಗ್ಗೆನೂ ಮುಂದುವರೆದಿದೆ. ಇನ್ನು ಬರ್ಥ್‌ಡೇ ಸಂಭ್ರಮದಲ್ಲಿರುವ ಸತೀಶ್‌ಗೆ ಅಚ್ಯುತ್ ಕುಮಾರ್ ಸೇರಿ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಅದೇನೆ ಇರ್ಲಿ , ಸದ್ಯ ಈ ವರ್ಷ ಸಾಲು ಸಾಲು ಸಿನಿಮಾಗಳೊಂದಿಗೆ ಅಭಿಮಾನಿಗಳ ಮುಂದೆ ಬರಲಿರುವ ಸತೀಶ್‌ಗೆ, ಪ್ರಚಾರ ಕಡೆನಿಂದನೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

LEAVE A REPLY

Please enter your comment!
Please enter your name here