ಅಪ್ಪು ಹಾಗೂ ಪವನ್ ಕಾಂಬಿನೇಷನ್ – 24 ಗಂಟೆ ಸತತ ಚಿತ್ರಪ್ರದರ್ಶನದ ನಯಾ ರೆಕಾರ್ಡ್

0
37

ನಟಸಾರ್ವಭೌಮ.. ಪುನೀತ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯ್ತಿರುವ ಸಿನಿಮಾ. ಟ್ರೇಲರ್ ನೋಡಿ.. ಕಾಲರ್ ಏರಿಸಿಕೊಂಡಿದ್ದ ಅಭಿಮಾನಿಗಳಲ್ಲಿ ನಟಸಾರ್ವಭೌಮ ನೋಡುವ ಕಾತುರತೆ ಅಷ್ಟಿಷ್ಟಿಲ್ಲ. ಇದಕ್ಕೆ ಸಾಕ್ಷಿ ಅನ್ನುವಂತೆ ನಟಸಾರ್ವಭೌಮನ ಪ್ರದರ್ಶನ ಭರ್ತಿ 24 ಘಂಟೆ ನಿರಂತರವಾಗಿ ನಡೆಯುತ್ತಿದೆ. ಇದು.. ಕೂಡಾ, ಇತ್ತೀಚಿನ ದಿನಗಳಲ್ಲಿ ಆದ ನಯಾ ದಾಖಲೆ. ಹೌದು, ನಟಸಾರ್ವಭೌಮನ ಆಟ ಇಪ್ಪತ್ತನಾಲ್ಕು ಘಂಟೆ ನಡೆಯಲಿದೆ. ಬೆಂಗಳೂರಿನ ಅನೇಕ ಕಡೆ ನಡುರಾತ್ರಿನೇ ಪ್ರದರ್ಶನ ಆರಂಭವಾಗಲಿದೆ. ಊವರ್ಶಿ ಚಿತ್ರಮಂದಿರದಲ್ಲಿ ಏಳು ಆಟ ಫಿಕ್ಸ್ ಆಗಿದೆ. ಯಸ್ ಊವರ್ಶಿಯಲ್ಲಿ ಬುಧವಾರ ಮಧ್ಯರಾತ್ರಿ ಹನ್ನೆರಡು ಘಂಟೆನಿಂದ ಹಿಡ್ದು ಗುರುವಾರ ರಾತ್ರಿ ಹನ್ನೆರಡು ಘಂಟೆವರೆಗೂ ನಡೆಯಲಿದೆ. ಬರೀ ಊವರ್ಶಿಯಷ್ಟೇ ಅಲ್ಲ ಇನ್ನುಳಿದ ಚಿತ್ರಮಂದಿರಗಳ ಸ್ಥಿತಿನೂ ಸೇಮ್ ಟು ಸೇಮ್.ಇನ್ನು ನಟಸಾರ್ವಭೌಮನ ರುದ್ರ ನರ್ತನಕ್ಕೆ ಸೌಥ್ ಸಿನಿದುನಿಯಾವೇ ಬೆಚ್ಚಿ ಬಿದ್ದಿದೆ. ಇದಕ್ಕೆ ಕಾರಣ ಇದೇ 24 ಘಂಟೆ ನಾನ್ ಸ್ಟಾಫ್ ಪ್ರದರ್ಶನ. ಹೌದು, ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಇಂಥಹದ್ದೊಂದು ಪ್ರದರ್ಶನ ನಡೆದಿಲ್ಲ. ಇದು, ಮೊದಲು. ಹಾಗಾಗಿ, ನಟಸಾರ್ವಭೌಮನ ಜ್ವರ ಸಹಜವಾಗಿಯೇ ಇನ್ನುಳಿದ ಚಿತ್ರರಂಗದವರನ್ನೂ ಬೆರಗುಗೊಳಿಸಿದೆ. ಇನ್ನೂ ನಟಸಾರ್ವಭೌಮ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಪಕ್ಕದ ಮನೆಗಳಲ್ಲೂ ಬಿಡುಗಡೆಯಾಗ್ತಿದೆ. ಹೈದ್ರಾಬಾದ್, ಚೆನೈ, ಮುಂಬೈ ಹೀಗೆ ಅನೇಕ ಕಡೆ ನಟಸಾರ್ವಭೌಮ ಬಲಗಾಲಿಟ್ಟು ನಾಳೆ ಚಿತ್ರಮಂದಿರಕ್ಕೆ ಬರಲಿದ್ದಾನೆ. ಇನ್ನೂ ವಿದೇಶಿ ನೆಲದಲ್ಲೂ ನಟಸಾರ್ವಭೌಮನ ಉತ್ಸವ ನಡೆಯಲಿದೆ.ಅದೇನೆ ಇರ್ಲಿಿ, ಸದ್ಯ ನಟಸಾರ್ವಭೌಮ ಬಿಡುಗಡೆಯಾಗ್ತಿದೆ. ಅಭಿಮಾನಿಗಳ ಸಂಭ್ರಮ ಸಡಗರನೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದೇ ನಟಸಾರ್ವಭೌಮನ ರುದ್ರ ನರ್ತನಕ್ಕೆ ದಾಖಲೆಗಳೂ ಚಿಂದಿಯಾಗಿ, ಹೊಸದೊಂದು ರೆಕಾರ್ಡ್‌ನ ಜನನವಾದ್ರೆ ಅಚ್ಚರಿ ಇಲ್ಲ. ಕಾರಣ, ಬರ್ತಿದರೋದು ಕಿಂಗ್ ಆಫ್ ಸಿನಿಮಾ ನಟಸಾರ್ವಭೌಮ.

LEAVE A REPLY

Please enter your comment!
Please enter your name here