ಅಪ್ಪು‌ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಫಿಕ್ಸ್ ಆಯ್ತು ನಟಸಾರ್ವಭೌಮನ ರಿಲೀಸ್ ಡೇಟ್

0
142

ನಟಸಾರ್ವಭೌಮ.. ಪವರ್ ಸ್ಟಾರ್ ಪುನೀತ್ ಪ್ಲೇವರ್ ಇರುವ ಹೈವೋಲ್ಟೆಜ್ ಸಿನಿಮಾ. ದೊಡ್ಮನೆ ಅಭಿಮಾನಿಗಳು ನಟಸಾರ್ವಭೌಮನಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆ ಯಾವಾಗ, ಹಾಡುಗಳನ್ನ ಕೇಳಿ ನಾವೆಲ್ಲ ಸಂಭ್ರಮ ಪಡುವ ಘಳಿಗೆ ಬರೋದು ಯಾವಾಗ ಅಂಥ, ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೊಮ್ಮೆ ಅಭಿಯಾನ ಮಾಡುತ್ತಾ, ಇನ್ನೊಮ್ಮೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಪವರ್ ಸ್ಟಾರ್ ಫ್ಯಾನ್ಸ್‌ ಗಳಿಗೀಗ, ಪವರ್‌ಫುಲ್ ಸುದ್ದಿ ಸಿಕ್ಕಿದೆ. ನಟಸಾರ್ವಭೌಮನ ಬಿಡುಗಡೆಗೆ ದಿನಾಂಕ ನಿಕ್ಕಿಯಾಗಿದೆ. ಹೌದು, ಅಂತೂ ಇಂತೂ ನಟಸಾರ್ವಭೌಮ ಬರಲು ಸಿದ್ಧವಾಗಿದ್ದಾನೆ. ಅದು, ವರ್ಷದ ಆರಂಭದಲ್ಲೇ.

ಯಸ್, ಜನವರಿ 24ಕ್ಕೆ.. ರಾಜ್ಯದ ಚಿತ್ರಮಂದಿರಗಳಲ್ಲೆಲ್ಲಾ ಎಂಟ್ರಟೈನ್ಮೆಂಟ್‌ನ ಪವರ್ ಸಪ್ಲೈ ಆಗಲಿದೆ. ಇನ್ನೂ, ಜನವರಿ 24ಕ್ಕೆ.. ಯಾಕೆ, ಹೀಗೊಂದು ಪ್ರಶ್ನೆಗುತ್ತರವೆನ್ನುವಂತೆ ಗಣರಾಜ್ಯೋತ್ಸವ ಅನ್ನುವ ಉತ್ತರ ಬರುತ್ತೆ. ಹೌದು, ಜನವರಿ 26ಕ್ಕೆ ರಿಪಬ್ಲಿಕ್ ಡೇ. ಸಾಲದಕ್ಕೆ ಲಾಂಗ್ ವೀಕೆಂಡ್ ಬೇರೆ. ಹಾಗಾಗೇ ನಾಲ್ಕು ದಿನಗಳ ಆಟದಲ್ಲೇ ಕೋಟಿ ಲೂಟಿ ಮಾಡುವ ಇರಾದೆಯೊಂದಿಗೆ ನಟಸಾರ್ವಭೌಮನ ವೇದಿಕೆ ಸಿದ್ಧ ಮಾಡಲಾಗುತ್ತಿದೆ. ಜನವರಿ 24 ಕ್ಕೆ ಎಂಟ್ರಟೈನ್ಮೆಂಟ್‌ನ ಫುಲ್ ಮೀಲ್ಸ್ ಬಡಿಸಲಿರುವ ನಟಸಾರ್ವಭೌಮ, ಇದೇ ಡಿಸೆಂಬರ್ ಅಂತ್ಯಕ್ಕೆ ಹಾಡುಗಳನ್ನ ಕನ್ನಡಿಗರ ಮಡಿಲಿಗೆ ಹಾಕಲಿದ್ದಾನೆ. ಡಿ.ಇಮಾಮ್ ಸಂಗೀತ ನಿರ್ದೇಶನದಲ್ಲಿ ಬಂದಿರುವ ಹಾಡುಗಳೂ, ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆಗಳೂ ಗಾಂಧಿನಗರಕ್ಕಿವೆ.

ಇನ್ನೂ ಅಪ್ಪು ಡ್ಯಾನ್ಸ್.. ಮತ್ತೊಮ್ಮೆ, ಎಲ್ಲರನ್ನೂ ಹುಚ್ಚೆಬ್ಬಿಸುತ್ತೆ ಅನ್ನುವ ಮಾತುಗಳು ಇದೇ ವೇಳೆ ಬಲವಾಗಿ ಕೇಳಿ ಬರ್ತಿಅವೆ. ಇದೆಲ್ಲ ಕಾರಣದಿಂದ.. ಸಿನಿಮಾದ ಹಾಡುಗಳ ಮೇಲೆ ನಿರೀಕ್ಷೆಗಳೂ ಮತ್ತಷ್ಟು ಹೆಚ್ಚಾಗಿವೆ. ಇನ್ನೂ ಫೋಟೊ ಜರ್ನಲಿಸ್ಟ್ ಪಾತ್ರವನ್ನ ನಿರ್ವಹಿಸಿರುವ ಪುನೀತ್‌ಗೆ ಜೋಡಿಯಾಗಿ ಇಲ್ಲಿ ರಚಿತಾ ರಾಮ್ ಇದ್ದಾರೆ. ಚಕ್ರವ್ಯೂಹದ ಬಳಿಕ ಅಪ್ಪು ಜೊತೆ ಡಿಂಪಲ್ ಕ್ವೀನ್ ಇಲ್ಲಿ ಕಾಣಿಸಿಕೊಳ್ಳುತ್ತಿರೋದು ವಿಶೇಷ. ಮತ್ತೊಬ್ಬ ನಾಯಕಿಯಾಗಿ ಅನುಪಮಾ ಪರಮೇಶ್ವರನ್ ಕಾಣಸಿಗಲಿದ್ದಾರೆ. ಹಿರಿಯರಾದ ಶ್ರೀನಿವಾಸ್ ಮೂರ್ತಿ ಹಾಗೂ ಬಿ.ಸರೋಜಾದೇವಿನೂ ಚಿತ್ರದಲ್ಲಿದ್ದಾರೆ. ವೈದಿ ಸಿನಿಮಾದ ಸಿನಿಮ್ಯಾಟೋಗ್ರಾಫರ್. ಮೈಸೂರು, ಬಳ್ಳಾರಿ ಹಾಗೂ ಕೋಲ್ಕತ್ತಾದಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಇನ್ನೂ ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

LEAVE A REPLY

Please enter your comment!
Please enter your name here