ಅಂಬಿ ಅಪ್ಪಾಜಿಯ ಅಗಲಿಕೆಯಿಂದ ಮಾನಸಿಕವಾಗಿ ನೊಂದ ದರ್ಶನ್ ಮಾಡಿದ್ದೇನು ಗೋತ್ತ ?

0
253

ಕಳೆದ ಶನಿವಾರ ರಾತ್ರಿ ಸುದ್ದಿಯೊಂದು ಬರಸಿಡಿಲಿನಂತೆ ಚಿತ್ರರಂಗಕ್ಕೆ ಬಡಿದಿತ್ತು. ಅದುವೇ ಅಂಬರೀಶ್ ಇನ್ನಿಲ್ಲ ಅನ್ನುವ ಸುದ್ದಿ. ಇದೇ ಸುದ್ದಿ.. ಚಿತ್ರರಂಗಕ್ಕೆ ಇನ್ನಿಲ್ಲದ ಆಘಾತವನ್ನುಂಟು ಮಾಡಿತ್ತು. ಅದ್ರಲ್ಲೂ ಹೊರದೇಶಗಳಲ್ಲಿ ಚಿತ್ರೀಕರಣದಲ್ಲಿದ್ದ ಕಲಾವಿದರಿಗೆ ಸುದ್ದಿ ಕೇಳಿ, ಏನು ಮಾಡಬೇಕೆನ್ನುವದೇ ತೋಚದಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಇದೇ ತರಹದ ಸ್ಥಿತಿಯಲ್ಲಿ ಸಿಲುಕಿ ಒದ್ದಾಡಿದ ದರ್ಶನ್, ಇದೀಗ ತನ್ನ ಪ್ರೀತಿಯ ಅಣ್ಣಾವ್ರ ಧ್ಯಾನವನ್ನ ಅನುಕ್ಷಣನೂ ಮಾಡುತ್ತಿದ್ದಾರೆ. ಹೌದು, ಅಂಬಿ ಅಗಲಿದ ಸುದ್ದಿ ಕೇಳಿ, ದೂರದ ಸ್ವೀಡನ್‌ನಲ್ಲೇ ಕುಸಿದು ಕುಂತಿದ್ದ ದರ್ಶನ್, ಕೊನೆಗೆ.. ಕಷ್ಟ ಪಟ್ಟು, ಇರುವ ಅಡೆತಡೆಗಳನ್ನೆಲ್ಲಾ ದಾಟಿ ಬೆಂಗಳೂರು ತಲುಪುವಷ್ಟರಲ್ಲಿ ಒಂದು ದಿನ ಕಳೆದು ಹೋಗಿತ್ತು. ಭಾನುವಾರ ಬರಬೇಕಿದ್ದ ದರ್ಶನ್, ಬೆಂಗಳೂರು ತಲುಪಿದಾಗ ಸೋಮವಾರವಾಗಿತ್ತು. ಬೆಂಗಳೂರಿಗೆ ಬಂದವ್ರೇ ಸೀದಾ ಕಂಠೀರವ ಸ್ಟೇಡಿಯಂಗೆ ಬಂದಿಳಿದ ದರ್ಶನ್, ಅಂಬಿಯ ಅಂತಿಮ ದರ್ಶನ ಪಡೆದ್ರು. ಕೊನೆಗೆ ಅಂಬಿಯ ಅಮರಯಾತ್ರೆಯಲ್ಲೂ ಭಾಗಿಯಾದ್ರು.

ಭರ್ತಿ ಹದಿಮೂರು ಕೀಲೋ ಮೀಟರ್ ನಡೆದ ಅಂಬಿ ಅಂತಿಮ ಯಾತ್ರೆಯಲ್ಲಿ ಭಾಗಿಯಾದ ದರ್ಶನ್, ಅಂತ್ಯ ಸಂಸ್ಕಾರದ ವೇಳೆಯೂ ಅಂಬರೀಶ್ ಕುಟುಂಬದ ಜೊತೆಯಲ್ಲೇ ಇದ್ದರು. ಒಂಧರ್ಥದಲ್ಲಿ ಹೇಳಬೇಕಂದ್ರೆ ಸ್ವೀಡನ್‌ನಿಂದ ಬಂದ ಬಳಿಕ ದರ್ಶನ್ ಒಂದು ಕ್ಷಣನೂ ಸುಮಲತಾ ಹಾಗೂ ಅಭಿಷೇಕ್ ಅವ್ರನ್ನ ಬಿಟ್ಟು ಕದಲಲೇ ಇಲ್ಲ. ಕದಲುವುದಾದ್ರೂ ಹೇಗೆ. ಅನಾಥರನ್ನಾಗಿ ಬಿಟ್ಟು ಹೋಗಿದ್ದು ಅಂಬರೀಶ್. ಪ್ರೀತಿಯ ಅಣ್ಣಾವ್ರು.. ಪ್ರೀತಿಯ ಅಪ್ಪಾಜಿ. ಹೌದು, ಅಂಬರೀಶ್ ಚಿತ್ರರಂಗದಲ್ಲಿ ಅನೇಕರ ಪಾಲಿಗೆ ಅಣ್ಣ, ಅನೇಕರ ಪಾಲಿಗೆ ಪ್ರೀತಿಯ ಮಾಮಾ, ಇನ್ನೂ ಅನೇಕರ ಪಾಲಿಗೆ ಅಂಕಲ್. ಬಟ್, ಕನ್ನಡ ಚಿತ್ರರಂಗದ ಸಾರಥಿಯ ಪಾಲಿಗೆ ಅಂಬರೀಶ್ ಖುದ್ದು ಅಪ್ಪನೇ ಆಗಿದ್ದರು. ದರ್ಶನ್ ವೃತ್ತಿಯ ಆರಂಭದ ದಿನಗಳಿಂದ ಹಿಡ್ದು ಮೊನ್ನೆವರೆಗೂ ದರ್ಶನ್ ಪಾಲಿನ ಮಾರ್ಗದರ್ಶಕರಾಗಿದ್ದರು. ಗುರು ಆಗಿದ್ದರು. ಇಷ್ಟೇ ಅಲ್ಲ ಅಂಬರೀಶ್ ಜೊತೆ ದರ್ಶನ್‌ಗಿರುವ ನೆನಪುಗಳು ಅಪಾರ. ಅದು, ದೇವರ ಮಗ ಸಿನಿಮಾದಲ್ಲಿನ ಪಾತ್ರವೇ ಇರ್ಲಿ, ಅಥ್ವಾ ಅಣ್ಣಾವ್ರು ಚಿತ್ರವೇ ಇರ್ಲಿ. ಪ್ರತಿಯೊಂದು ವಿಚಾರದಲ್ಲೂ.. ಪ್ರತಿಯೊಂದು ಹಂತದಲ್ಲೂ ದರ್ಶನ್ ಮನಸಿಗೆ ಅಂಬರೀಶ್ ತುಂಬಾನೇ ಹತ್ತಿರವಾಗಿದ್ದರು. ಹಾಗಾಗೇ, ಇವೆಲ್ಲವು ಒಂದು ಕ್ಷಣ ಕಣ್ಮುಂದೆ ಬಂದು ಹೋದಂತಾಗಿ ಭಾವುಕರಾಗಿದ್ದ ದರ್ಶನ್, ಅಂಬಿ ಮೇಲಿನ ಪ್ರೀತಿ ಹಾಗೂ ಗೌರವಕ್ಕೆ ಕಣ್ಣೀರನ್ನ ಹಾಗೇ ಗಟ್ಟಿಯಾಗಿ ಒಳಗೆನೇ ನುಂಗಿಕೊಂಡೇ ಇದ್ದರು.

ಇದೇ ನೋವಿನೊಂದಿಗೆ ಭಾರವಾದ ಮನಸಿನೊಂದಿಗೆ ಇಂದು.. ಅಂಬರೀಶ್ ಮಣ್ಣಲ್ಲಿ ಮಣ್ಣಾದ ಸ್ಥಳಕ್ಕೆ ಭೇಟಿನೂ ಕೊಟ್ಟಿದ್ದರು. ಅಸ್ಥಿ ಸಂಚಯನದಲ್ಲಿ ಭಾಗಿಯಾದ ದರ್ಶನ್, ಕೊನೆಗೆ.. ಅಂಬಿ ಪುತ್ರ ಅಭಿಷೇಕ್ ಜೊತೆ ಶ್ರೀರಂಗ ಪಟ್ಟಣ್ಣಕ್ಕೆ ತೆರಳಿದ್ರು. ಅಸ್ಥಿಯ ಜೊತೆ ಶ್ರೀರಂಗ ಪಟ್ಟಣ್ಣಕ್ಕೆ ಹೋದ ಅಂಬಿ ಕುಟುಂಬ ಹಾಗೂ ದರ್ಶನ್ ಇದೇ ವೇಳೆ ಶ್ರೀ ರಂಗ ಪಟ್ಟಣ್ಣದಲ್ಲಿ ಜಲಪ್ರೋಕ್ಷಣೆಯನ್ನೂ ಮಾಡಿಕೊಂಡರು. ಇದೇ ವೇಳೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಸಿ.ಎಸ್ ಪುಟ್ಟರಾಜು. ಮುನಿರತ್ನ. ಅಂಬಿ ಆಪ್ತ ವಾಲೆ ಸೀನನೂ ಜೊತೆಯಲ್ಲಿದ್ದರು. ಇನ್ನೂ ಡಿಸೆಂಬರ್ ನಾಲ್ಕರಂದು, ಅಂಬಿಯ ಪುಣ್ಯತಿಥಿ ನಡೆಯಲಿದೆ. ಇದ್ರ ನಡುವೆ ಸ್ಮಾರಕ ನಿರ್ಮಾಣಕ್ಕೂ ರೂಪುರೇಶೆಗಳನ್ನ ಸಿದ್ಧಪಡಿಸಲಾಗ್ತಿದೆ. ಏನೇ ಇರ್ಲಿ . ಸದ್ಯ ಅಂಬಿ ನಮ್ಮೊಂದಿಗೆ ಇಲ್ಲ. ಇರುವದು ಅವ್ರ ನೆನಪುಗಳಷ್ಟೇ. ಆ ನೆನಪುಗಳನ್ನೇ ಜತನದಿಂದ ಕಾಪಾಡುವ ಜವಾಬ್ಧಾರಿ ಇದೀಗ ಎಲ್ಲರ ಮೇಲಿದೆ. ಇದೇ ಜವಾಬ್ಧಾರಿಗಳನ್ನ ಸದ್ಯ ದರ್ಶನ್ ನಿಭಾಯುಸುತ್ತಿದ್ದಾರೆ.

LEAVE A REPLY

Please enter your comment!
Please enter your name here